ನವದೆಹಲಿ:ಯುವತಿಯರನ್ನು ಗರ್ಭಿಣಿಯಾಗಿಸಲು ಹಣ ನೀಡುವುದಾಗಿ ನಕಲಿ ಜಾಹೀರಾತು ನೀಡಿದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಏಜಾಜ್ ಮತ್ತು ಇರ್ಷಾದ್ ಬಂಧಿತ ಆರೋಪಿಗಳು. ಹರಿಯಾಣದ ನುಹ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಬಂಧಿತ ಆರೋಪಿಗಳು, ಮಕ್ಕಳನ್ನು ಹೊಂದಲು ಬಯಸುವ ಮಹಿಳೆಯರನ್ನು ಗರ್ಭಿಣಿಯರನ್ನಾಗಿ ಮಾಡಲು ಪುರುಷರು ಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡಿದ್ದರು. ಇದಕ್ಕೆ ಬಹುಮಾನವನ್ನೂ ನೀಡುವುದಾಗಿಯೂ ಭರವಸೆ ನೀಡಿದ್ದರು. ಜಾಹೀರಾತಿನೊಂದಿಗೆ ಕೆಲವು ಯುವತಿಯರ ಚಿತ್ರಗಳನ್ನು ಸಹ ಒದಗಿಸಿದ್ದರು. ಈ ಜಾಹೀರಾತು ನೋಡಿ ಸಾವಿರಾರು ಪುರುಷರು ಅರ್ಜಿ ಸಲ್ಲಿಸಿದ್ದರು.
ಜಾಹೀರಾತನ್ನು ನೋಡಿ ಅರ್ಜಿ ಸಲ್ಲಿಸಿದವರು ಆರೋಪಿಗಳನ್ನು ಸಂಪರ್ಕಿಸಿದಾಗ, ನೋಂದಣಿ ಶುಲ್ಕ ಮತ್ತು ಆರಂಭಿಕ ಫೈಲಿಂಗ್ ವೆಚ್ಚವನ್ನು ಸಂಗ್ರಹಿಸಿದರು. ಅನೇಕ ಜನರಿಂದ ಸಾಕಷ್ಟು ಹಣ ಸಂಗ್ರಹಿಸಿದ ಬಳಿಕ ಆರೋಪಿಗಳು ಮತ್ತೆ ಸಂಪರ್ಕಕ್ಕೆ ಸಿಗಲಿಲ್ಲ. ಕೊನೆಗೆ ಮೋಸ ಹೋಗಿರುವುದು ಗೊತ್ತಾದಾಗ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.
ತನಿಖೆಯ ವೇಳೆ ಆರೋಪಿಗಳ ಕರಾಳ ಮುಖ ಬಯಲಾಗಿದೆ. ಆರೋಪಿಗಳ ಹೆಸರಿನಲ್ಲಿ ನಾಲ್ಕಕ್ಕೂ ಹೆಚ್ಚು ನಕಲಿ ಫೇಸ್​ಬುಕ್ ಖಾತೆಗಳು ಹಾಗೂ ಹಲವು ನಕಲಿ ಜಾಹೀರಾತುಗಳು ಪೊಲೀಸರಿಗೆ ಪತ್ತೆಯಾಗಿವೆ. ಆರೋಪಿಗಳನ್ನು ಶನಿವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಯುವತಿಯರನ್ನು ಗರ್ಭಿಣಿ ಮಾಡುವ ಆಸೆಗೆ ಬಿದ್ದ ಪುರುಷರು ಹಣ ಕಳೆದುಕೊಂಡು ದುಃಖಿಸುತ್ತಿದ್ದಾರೆ.(ಏಜೆನ್ಸೀಸ್​)
ದೇಹದ ಅಂಗಗಳ ಬಗ್ಗೆ ಅಶ್ಲೀಲವಾಗಿ ಮಾತನಾಡುವುದು… ಸೌಂದರ್ಯದ ಗಣಿ ಹನಿ ರೋಸ್​ ಶಾಕಿಂಗ್​ ಹೇಳಿಕೆ

ವಿಶ್ವಕಪ್​​ ಫೈನಲ್​​ ಕ್ಯಾಚ್​ ಅಲ್ಲ ಇದು ನನ್ನ ಜೀವನದ ಮುಖ್ಯ ಕ್ಯಾಚ್​! 8 ವರ್ಷ ಹಿಂದಿನ ಘಟನೆ ನೆನೆದ ಸೂರ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 3 =
Remember me
