ನವದೆಹಲಿ:ಶ್ರದ್ಧಾ ವಾಕರ್​ ಭೀಕರ ಕೊಲೆ ಪ್ರಕರಣದ ಆರೋಪಿ ಅಫ್ತಾಬ್​ ಅಮಿನ್​ ಪೂನಾವಾಲಾನನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವ್ಯಾನ್​ಗೆ ಇಂದು ಸಂಜೆ ಖಡ್ಗಧಾರಿಗಳ ಗುಂಪು ಅಡ್ಡಗಟ್ಟಿದ ಘಟನೆಯೊಂದು ನಡೆದಿದೆ. ಪೊಲೀಸರು ಪ್ರಕರಣವನ್ನು ಸಮರ್ಥವಾಗಿ ಎದುರಿಸಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.
ಪಶ್ಚಿಮ ದೆಹಲಿಯಲ್ಲಿನ ಫೊರೆನ್ಸಿಕ್ ಸೈನ್ಸ್​ ಲ್ಯಾಬೊರೇಟರಿಯಿಂದ ಜೈಲಿಗೆ ವಾಪಸ್​ ಕರೆದುಕೊಂಡು ಬರುತ್ತಿರುವಾಗ ಎಫ್​ಎಸ್​ಎಲ್​ ಕಟ್ಟಡದ ಹೊರಗೆ ಈ ಪ್ರಕರಣ ನಡೆದಿದೆ. ಈ ದಾಳಿಗೆ ಹಿಂದೂ ಸೇನಾ ಹೊಣೆಯನ್ನು ಹೊತ್ತುಕೊಂಡಿದೆ. ಹಿಂದೂ ಸೇನಾ ಎಂಬ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತ, ಅಫ್ತಾಬ್​ ಹೇಗೆ ಹಿಂದೂ ಹುಡುಗಿಯನ್ನು ತುಂಡು ತುಂಡಾಗಿಸಿದ ಎಂಬುದನ್ನು ನೋಡಲು ಇಡೀ ದೇಶವೇ ಕಾಯುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.

ಖಡ್ಗಧಾರಿಗಳು ಅವರ ಕಾರನ್ನು ಪೊಲೀಸ್ ವ್ಯಾನ್​ಗೆ ಅಡ್ಡಲಾಗಿ ನಿಲ್ಲಿಸಿದ್ದರು. ಬಳಿಕ ಐವರು ಖಡ್ಗ ಝಳಪಿಸುತ್ತ ಪೊಲೀಸ್ ವ್ಯಾನ್​ನತ್ತ ಬಂದಿದ್ದರು. ಆದರೆ ಪೊಲೀಸರು ಅವರ ಆಯುಧ ತೆಗೆದು ಖಡ್ಗಧಾರಿಗಳನ್ನು ಎದುರಿಸಿದ್ದರು. ಇದರಲ್ಲಿ ಯಾರಿಗೂ ಗಾಯವಾಗಿಲ್ಲ ಹಾಗೂ ಇಬ್ಬರು ಖಡ್ಗಧಾರಿಗಳನ್ನು ವಶಕ್ಕೆ ಪಡೆಯಲಾಗಿದೆ. ಅವರು ತಮ್ಮ ಹೆಸರನ್ನು ನಿಗಮ್ ಗುಜ್ಜಾರ್​, ಕುಲ್​ದೀಪ್ ಥಾಕೂರ್ ಹಾಗೂ ತಾವು ಗುರುಗ್ರಾಮ ನಿವಾಸಿಗಳು ಮತ್ತು ಹಿಂದೂ ಸೇನಾ ಸದಸ್ಯರು ಎಂಬುದಾಗಿ ಹೇಳಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ನೀರಿಗೆ ಬಿತ್ತು ಪ್ರಪೋಸ್ ಮಾಡಲೆಂದು ತಂದ ಉಂಗುರ; ಸಮುದ್ರಕ್ಕೇ ಧುಮುಕಿದ ಪ್ರಿಯಕರ: ಆಮೇಲೇನಾಯ್ತು!

ಮಗಳ ಮದುವೆಗೆ ಕೆಲವು ಗಂಟೆಗಳು ಬಾಕಿ ಇರುವಾಗ ನೇಣು ಹಾಕಿಕೊಂಡ ತಂದೆ; ಮದ್ಯಪಾನ ಮಾಡಿದ್ದಕ್ಕೆ ಬೈದಿದ್ದೇ ಕಾರಣ?

ರಾಜ್ಯದಲ್ಲಿ ಒಂದೇ ದಿನ 108 ಇನ್​ಸ್ಪೆಕ್ಟರ್​ಗಳ ವರ್ಗಾವಣೆ; ನಿಮ್ಮೂರಿಗೆ ಯಾರು ಇನ್​ಸ್ಪೆಕ್ಟರ್? ಇಲ್ಲಿದೆ ಪೂರ್ತಿ ಪಟ್ಟಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 3 =
Remember me
