ನರ್ನೂಲ್​:ಆಘಾತಕಾರಿ ಘಟನೆ ಒಂದರಲ್ಲಿ ಮೃತ ಪತಿಯ ಅಂತ್ಯಸಂಸ್ಕಾರವನ್ನು ಪತ್ನಿ ಮನೆಯಲ್ಲೇ ನೆರವೇರಿಸಿರುವ ಘಟನೆ ಆಂಧ್ರಪ್ರಧೇಶದ ಕರ್ನೂಲ್​ ಜಿಲ್ಲೆಯ ಪತ್ತಿಕೊಂಡದಲ್ಲಿ ನಡೆದಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಹರಿಕೃಷ್ಣ ಪ್ರಸಾದ್​(63) ಅವರು ಸೋಮವಾರ ನಿಧನರಾಗಿದ್ಧಾರೆ. ಅವರ ಪತ್ನಿ ಲಲಿತಾ ಮಾನಸಿಕ ಅಸ್ವಸ್ಥರಾಗಿದ್ದು ಪತಿಯ ಅಂತ್ಯಸಂಸ್ಕಾರವನ್ನು ಮನೆಯಲ್ಲಿಯೇ ನೆರವೇರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪತ್ತಿಕೊಂಡ ಪೊಲೀಸ್​ ಠಾಣಾಧಿಕಾರಿ ಮುರಳಿ ಮೋಹನ್​ ಮಧ್ಯಾಹ್ನ 12:00 ಘಂಟೆಗೆ ಸಂಭವಿಸಿದ್ದು ಆರೋಪಿ ಲಲಿತಾರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.
ಕಳೆದ ಕೆಲ ವರ್ಷಗಳಿಂದ ಅನಾರೊಗ್ಯದಿಂದ ಬಳಲುತ್ತಿದ್ದ ತಮ್ಮ ಪತಿ ಸೋಮವಾರ ಬೆಳಗ್ಗ ಮೃತಪಟ್ಟಿದ್ದಾರೆ. ನೆರೆ ಹೊರಯವರಿಗೆ ವಿಷಯ ತಿಳಿಸಿದ್ದರೆ ಯಾರು ಬರುವುದಿಲ್ಲ ಎಂದು ಭಾವಿಸಿದ ಮಹಿಳೆ ತಮ್ಮ ಇಬ್ಬರು ಪುತ್ರರಿಗೆ ವಿಚಾರವ್ನು ತಿಳಿಸದೆ ಮನೆಯಲ್ಲಿದ್ದ ಪುಸ್ತಕಗಳನ್ನ ಪತಿಯ ದೇಹದ ಮೇಲೆ ಇಟ್ಟು ಬೆಂಕಿ ಹಚ್ಚಿ ಅಂತ್ಯಕ್ರಿಯೆ ಮಾಡಿದ್ದಾಳೆ.
ಇದನ್ನೂ ಓದಿ:ಮಟನ್​ ಕರಿ ಕಡಿಮೆ ನೀಡಿದ್ದಕ್ಕೆ ಜೈಲರ್​ಗಳ ಮೇಲೆ ಹಲ್ಲೆ ನಡೆಸಿದ ಆರೋಪಿ!
ಈ ಕುರಿತು ನೆರೆ ಮನೆಯ ನಿವಾಸಿ ಒಬ್ಬರು ಪೊಲೀಸ್​ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ತೆರಳಿ ಪರಿಶೀಲಿಸಿದಾಗ ದೇಹವು ಶೇ 80ರಷ್ಟು ಸುಟ್ಟು ಹೋಗಿತ್ತು. ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳಿದ್ದು ಮೊದಲನೆಯವರು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು ಎರಡನೇಯವರು ಕೆನೆಡಾದಲ್ಲಿ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತಿ ಸಾವಿನಿಂದ ಆಘಾತಕ್ಕೊಳಗಾದ ಪತ್ನಿ ಲಲಿತಾ ಮತಿಭ್ರಮಣೆ ಅಥವಾ ದಿಗ್ಭ್ರಮೆಗೊಂಡು ಅಥವಾ ದಿಗ್ಭ್ರಮೆಗೊಂಡು ಈ ರಿತಿ ಮಾಡಿರಬಹುದು ಎಂದು ಪತ್ತಿಕೊಂಡ ಪೊಲೀಸ್​ ಠಾಣಾಧಿಕಾರಿ ಮುರಳಿ ಮೋಹನ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
