ಆಂಧ್ರಪ್ರದೇಶ:ಕರ್ನೂಲ್​ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಶನಿವಾರ ರೋಗಿಯೊಬ್ಬ ತಿರುಗುವ ಫ್ಯಾನ್​ಗೆ ಕೈ ಹಾಕಿ ಮುರಿದು ಹಾಕಿದ್ದು, ಸಿಬ್ಬಂದಿ ಜತೆ ಗಲಾಟೆ  ಮಾಡಿ  ಕೆಲಕಾಲ ಆತಂಕ ಸೃಷ್ಟಿಸಿದ್ದಾನೆ.
ಜಿಲ್ಲೆಯ ಆರೆಕಲ್ ಗ್ರಾಮದ ರಾಘವೇಂದ್ರ ಎಂಬುವ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಕೆಲ ದಿನಗಳಿಂದ ಮಾನಸಿಕ ಆಸ್ವವಸ್ಥೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆ ತಪಾಸಣೆಗೆ ಆಸ್ಪತ್ರೆಗೆ ಕರೆ ತಂದಾಗ ಈ ಘಟನೆ ನಡೆದಿದೆ.
ಆಸ್ಪತ್ರೆಯ ಬೆಡ್ ಒಂದರ ಮೇಲೆ ನಿಂತ ರಾಘವೇಂದ್ರ,  ವೈದ್ಯಕೀಯ ಉಪಕರಣದೊಂದಿಗೆ ಹಾಸಿಗೆಯ ಮೇಲೆ ನಿಂತು ಆಸ್ಪತ್ರೆಯ ಸಿಬ್ಬಂದಿಗೆ ಬೆದರಿಕೆ ಹಾಕುತ್ತಿರುವುದನ್ನು ಕಾಣಬಹುದು. ಫ್ಯಾನ್ ಮತ್ತು ಅಲ್ಲಿನ ಉಪಕರಣಗಳಿ ಹಾನಿ ಮಾಡಿರುವ ಘಟನೆ ಮೊಬೈಲ್​ನಲ್ಲಿ ಸೆರೆಯಾಗಿದೆ. ಬಳಿಕ ಆತನನ್ನು ಸಿಬ್ಬಂದಿ ನೆರವಿನಿಂದ ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ನಂತರ ಚಿಕಿತ್ಸೆ ನೀಡಲಾಗಿದ್ದು, ಉತ್ತಮ ಚಿಕಿತ್ಸೆಗೆ ಶಿಫರಾಸ್ಸು ಮಾಡಲಾಗಿದೆ.
ರಾಘವೇಂದ್ರ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಅವರ ವಿಕೃತ ವರ್ತನೆಗೆ ಮೂಲ ಕಾರಣ ಎಂದು ರಾಘವೇಂದ್ರ ಕುಟುಂಬದವರು ತಿಳಿಸಿದ್ದಾರೆ.
Mentally Unstable Man Causes Chaos in Andhra Hospital, Attacks Staff | Over Rs 1 Lakh Damage | Police Complaint Filedpic.twitter.com/uBNGIEt8rh
— The Times Patriot (@thetimespatriot)July 28, 2024

ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಶ್ರೀನಿವಾಸ್ ನಾಯಕ್ ಸುದ್ದಿಗಾರರ ಜತೆ ಮಾತನಾಡಿ, ಆಸ್ಪತ್ರೆಯಲ್ಲಿ 1 ಲಕ್ಷಕ್ಕೂ ಅಧಿಕ ಮೌಲ್ಯದ ಉಪಕರಣಗಳಿಗೆ ಹಾನಿ ಮಾಡಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
