ಮುಂಬೈ:ಸೃಜನಾತ್ಮಕ ಸಾಮಾಜಿಕ ಜಾಲತಾಣ ಪೋಸ್ಟ್​ಗಳಿಗೆ ಹೆಸರುವಾಸಿಯಾಗಿರೋ ಮುಂಬೈ ಪೊಲೀಸರು ಮತ್ತೊಮ್ಮೆ ಅದ್ಭುತ ಪೋಸ್ಟ್​ನಿಂದ ಗಮನ ಸೆಳೆದಿದ್ದಾರೆ. ಈ ಬಾರಿಯ ಪೋಸ್ಟ್​ ಸಂದೇಶವಾಗಿರದೇ ಜನತೆಗೆ ಎಚ್ಚರಿಕೆಯನ್ನೂ ಸಹ ನೀಡಿದೆ.
ಬೆಕ್ಕಿನ ಚಿತ್ರದೊಂದಿಗೆ ಟ್ವೀಟ್​ ಮಾಡಿರುವ ಮುಂಬೈ ಪೊಲೀಸರು, “ಮಿಯಾಂವ್​ ಮಿಯಾಂವ್ ಮಾತ್ರ ಇಲ್ಲಿ ಸ್ವೀಕೃತವಾಗುತ್ತದೆ. ಡ್ರಗ್ಸ್​ಗೆ ನೋ ಎನ್ನಿ” ಎಂದು ಕರೆ ನೀಡಿದ್ದಾರೆ.
The only 'meow meow' that is acceptable!#SayNoToDrugspic.twitter.com/XoplxiED64
— मुंबई पोलीस – Mumbai Police (@MumbaiPolice)June 6, 2020

ಮಿಯಾಂವ್​ ಮಿಯಾಂವ್​ಗೂ ಬೆಕ್ಕಿಗೂ ಏನು ಸಂಬಂಧ ಎಂಬ ಪ್ರಶ್ನೆ ನಿಮ್ಮಲ್ಲಿ ಉಂಟಾಗಬಹುದು, ಅದಕ್ಕೆ ಉತ್ತರ ಮುಂದಿದೆ. ಅಂದಹಾಗೆ ಮಿಯಾಂವ್​ ಮಿಯಾಂವ್ (Meow meow) ಸ್ಟ್ರೀಟ್​ ಡ್ರಗ್​ನ ಹೆಸರು. ಇದರ ವೈಜ್ಞಾನಿಕ ಹೆಸರು ಮೆಫೆಡ್ರೋನ್​. ಕೊಕೇನ್​ನಷ್ಟೇ ಸ್ಟ್ರೀಟ್​ ಡ್ರಗ್​ ಸಹ ಹೆಚ್ಚು ಪರಿಣಾಮಕಾರಿಯಾಗಿದೆ. ಸ್ಟ್ರೀಟ್​ ಡ್ರಗ್​ಗೆ ಇಂಟರ್ನೆಟ್​ನಲ್ಲಿ ಭಾರಿ ಬೇಡಿಕೆ ಬಂದ ಹಿನ್ನೆಲೆಯಲ್ಲಿ 2007ರಿಂದ ಮಿಯಾಂವ್​ ಮಿಯಾಂವ್​ ಎಂದು ಕರೆಯಲು ಆರಂಭಿಸಲಾಯಿತು.ಇದನ್ನೂ ಓದಿ:ಆನೆ ತಿಂದಿದ್ದು ಪೈನಾಪಲ್​ನಲ್ಲಿ ತುಂಬಿದ್ದ ಸ್ಪೋಟಕವಲ್ಲ: ಓರ್ವ ಆರೋಪಿಯ ಬಂಧನ ಬಳಿಕ ಪ್ರಕರಣಕ್ಕೆ ತಿರುವು!​
ಇನ್ನು ಭಾರತದಲ್ಲಿ ಅಕ್ಟೋಬರ್​ 2ರ ಗಾಂಧಿ ಜಯಂತಿ ಸಂಭ್ರಮದೊಂದಿಗೆ ರಾಷ್ಟ್ರೀಯ ಮಾದಕ ವಸ್ತು ವ್ಯಸನ ವಿರೋಧಿ ದಿನವನ್ನು ಆಚರಿಸುತ್ತೇವೆ. ಗಾಂಧೀಜಿಯು ಸಹ ಡ್ರಗ್ಸ್​ ಅನ್ನು ತೀವ್ರವಾಗಿ ಖಂಡಿಸಿದ್ದರು.
ಮಾದಕ ವಸ್ತುಗಳು ಆರೋಗ್ಯದ ಮೇಲೆ ಅತೀವ ಪರಿಣಾಮವನ್ನು ಬೀರುತ್ತದೆ. ಮೆದುಳು ಸಂಬಂಧಿ ರೋಗಕ್ಕೆ ತುತ್ತಾಗುವುದರಿಂದ ವೃತ್ತಿ, ಕುಟುಂಬ, ಪ್ರೀತಿ ಪಾತ್ರದವರು ಹಾಗೂ ನಾಗರಿಕ ಪ್ರಜ್ಞೆಯನ್ನು ಡ್ರಗ್ಸ್​ ಕಸಿದುಕೊಳ್ಳುತ್ತಾರೆ. ಕೆಲವರು ಕುತೂಹಲಕ್ಕಾಗಿ ಅಥವಾ ಫನ್​ಗಾಗಿ ಡ್ರಗ್​ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಜೀವ ಉಳಿಸುವ ಔಷಧಗಳನ್ನೇ ಡ್ರಗ್ಸ್​ ಆಗಿ ತೆಗೆದುಕೊಳ್ಳುತ್ತಾರೆ ಎಂದು ಪರಿಣಿತರು ಹೇಳಿದ್ದಾರೆ.(ಏಜೆನ್ಸೀಸ್​)ಇದನ್ನೂ ಓದಿ:VIDEO| ಸಾಗರದಾಳದಲ್ಲಿ ಪತ್ತೆಯಾದ ಪ್ರಮುಖ 10 ನಿಗೂಢ ಪ್ರಾಣಿಗಳಿವು…!
ಇನ್ನು2-3 ದಿನಗಳಲ್ಲಿ ಚೀನಾಕ್ಕೆ ಸೆಡ್ಡು ಹೊಡೆಯಲಿದೆ ಮಹಾರಾಷ್ಟ್ರ…! ದಾಖಲೆ ಬರೆಯುವತ್ತ ಸಾಗಿದೆ ಈ ರಾಜ್ಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen + four =
Remember me
