ನವದೆಹಲಿ:ಮೇರಾ ಘರ್​ ಪೂರಾ ಹಿಂದೂಸ್ತಾನ್ (ನನ್ನ ಮನೆ ಇಡೀ ಭಾರತ) ಎಂದು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಇಂದು ಹೇಳಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ತಮ್ಮ ಅಧಿಕೃತ ಬಂಗಲೆ ಕುರಿತಂತೆ ಸುದ್ದಿಗಾರರ ಜತೆ ಮಾತನಾಡಿದ ರಾಹುಲ್ ಗಾಂಧಿ ಈ ಮಾತನ್ನು ಹೇಳಿದರು.
ಅಸ್ಸಾಂ ಕಾಂಗ್ರೆಸ್​ ನಾಯಕರ ಜತೆ ಮಾತುಕತೆ ನಡೆಸಲು ಇಂದು ದೆಹಲಿಯ ಎಐಸಿಸಿ ಹೆಡ್​ ಕ್ವಾರ್ಟರ್ಸ್​ಗೆ ಬಂದ ರಾಹುಲ್ ಗಾಂಧಿ ಅಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸುತ್ತ ಒಂದಷ್ಟು ಅನಿಸಿಕೆಗಳನ್ನು ಹಂಚಿಕೊಂಡರು.
ಇದನ್ನೂಓದಿ:ತುಂಡಾಗಿ ದೇಹದಿಂದ ದೂರದಲ್ಲಿ ಬಿದ್ದ ಕೈ; ಭೀಕರ ಅಪಘಾತದಲ್ಲಿ ಮೂವರಿಗೆ ಗಾಯ, ಒಬ್ಬರ ಸ್ಥಿತಿ ಗಂಭೀರ
‘ಮೋದಿ ಉಪನಾಮ’ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ವಯನಾಡ್​ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದ ರಾಹುಲ್ ಗಾಂಧಿ, ಲೋಕಸಭೆ ಸಚಿವಾಲಯ ಹೊರಡಿಸಿದ ಹೊಸ ಆದೇಶದ ಪ್ರಕಾರ ತಮ್ಮ ಸ್ಥಾನವನ್ನು ಮರಳಿ ಪಡೆದಿದ್ದಾರೆ.
ಆದರೆ ಈ ಹಿಂದೆ ಅನರ್ಹಗೊಂಡಿದ್ದಾಗ 12 ತುಘಲಕ್​ ಲೇನ್​ನಲ್ಲಿನ ತಮ್ಮ ಅಧಿಕೃತ ನಿವಾಸವನ್ನು ಅವರು ತೆರವುಗೊಳಿಸಿದ್ದರು. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, ಇಡೀ ಭಾರತವೇ ನನ್ನ ಮನೆ ಎಂದು ಹೇಳಿದ್ದಾರೆ. –ಏಜೆನ್ಸೀಸ್
ಕಾರ್ಪೋರೇಟ್​​​ ಉದ್ಯೋಗ ಬಿಟ್ಟು ಕ್ಯಾಬ್ ಓಡಿಸುತ್ತಿರುವ ಈ ಇಂಜಿನಿಯರ್​ಗೆ ಅಲ್ಲಿಗಿಂತ ಇಲ್ಲೇ ಜಾಸ್ತಿ ಸಂಪಾದನೆ!

ಮದುವೆಯಾಗುವ ಕನಸು ಚಿಗುರಿಸಿದ ಟೊಮ್ಯಾಟೋ; ಹುಡುಗಿ ಹುಡುಕಲು ಮುಂದಾದ ಕೃಷಿಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 7 =
Remember me
