ಪುಣೆ:ನಿತ್ಯವೂ ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಹಾಗೂ ತಮಾಷೆ ಎನಿಸುವಂತಹ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಇಂತದ್ದೇ ವಿಡಿಯೋವನ್ನು ವೈರಲ್ ಆಗುತ್ತಿದ್ದೆ. ಇದನ್ನು ನೋಡಿದ ಜನರು ತಮಾಷೆಯ ಕಮೆಂಟ್ ಮಾಡುತ್ತಿದ್ದಾರೆ.
ನಗರ ಪ್ರದೇಶಗಳ ರಸ್ತೆ ಮಧ್ಯೆ ಯಾವುದೇ ವಾಹನಗಳು ಕೆಟ್ಟು ನಿಂತರೆ ಟೋಯಿಂಗ್ ಮಾಡಲಾಗುತ್ತದೆ. ಆದರೆ ಗ್ರಾಮೀಣ ಭಾಗಗಲ್ಲಿ ಹೀಗಲ್ಲ, ಯಾವುದಾದರು ವಾಹನ ರಸ್ತೆ ಮಧ್ಯೆ ಬಾಕಿಯಾದರೆ, ಬೇರೆ ಗೂಡ್ಸ್ ವಾಹನಕ್ಕೆ ಹಗ್ಗ ಕಟ್ಟಿ ಎಳೆದುಕೊಂಡು ಹೋಗಲಾಗುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋ ಈ ದೃಶ್ಯವನ್ನು ನೆನಪಿಸುವಂತಿದೆ.
ಅತ್ಯಂತ ದುಬಾರಿ ಬೆಲೆಯ ಕಾರುಗಳಲ್ಲಿ ಮರ್ಸಿಡಿಸ್ ಬೆಂಜ್‌ ಕಾರುಗಳಿಗೆ ಅಗ್ರಸ್ಥಾನ. ಇದೀಗ ಈ ಬೆಂಜ್‌ ಕಾರನ್ನು ಆಟೋ ಚಾಲಕನೊಬ್ಬ ತನ್ನ ಕಾಲಿನಿಂದ ತಳ್ಳಿಕೊಂಡು ಹೋಗಿದ್ದಾನೆ. ಅರ್ರೇ… ಇದು ಹೇಗೆ ಸಾಧ್ಯ ಎಂದು ಯೋಚಿಸಬಹುದು! ಆದರೆ ಸಾಧ್ಯ ಎಂಬುದಕ್ಕೆ ವೈರಲ್ ಆಗಿರುವ ಈ ವಿಡಿಯೋ ಸಾಕ್ಷಿ.
KP ❤️🤣संकटकाळी मदतीला येणारा एक रिक्षावाला मित्र पाहिजेच…💪🏼pic.twitter.com/qRpcm2F8RX— पुणेरी स्पिक्स™ Puneri Speaks (@PuneriSpeaks)December 15, 2022
KP ❤️🤣संकटकाळी मदतीला येणारा एक रिक्षावाला मित्र पाहिजेच…💪🏼pic.twitter.com/qRpcm2F8RX
ವಿಡಿಯೋದಲ್ಲಿ ಆಟೋ ಚಾಲಕ ಚಲಿಸುತ್ತಿರುವಾಗಲೇ ಕೆಂಪು ಬಣ್ಣದ ಮರ್ಸಿಡಿಸ್ ಬೆಂಜ್‌ ಕಾರನ್ನು ತಳ್ಳುತ್ತಿರುವುದು ಕಾಣಬಹುದು. ಸಂಚಾರ ದಟ್ಟಣೆ ಇರುವ ರಸ್ತೆಯಲ್ಲಿಯೇ ಈ ಘಟನೆ ನಡೆದಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಐಷಾರಾಮಿ ಕಾರಿಗೆ ಆಟೋ ರಿಕ್ಷಾ ಸಹಾಯಹಸ್ತ ಚಾಚಿದೆ ಎಂದಿದ್ದಾರೆ. ಇನ್ನೊಬ್ಬರು ಮರ್ಸಿಡಿಸ್ ಬೆಂಜ್‌ ಕಾರು ಮೆಕ್ಯಾನಿಕ್ ಬಳಿ ತಲುಪಲ್ಲಿ ಆಟೋ ರಿಕ್ಷಾ ಡ್ರಾಪ್ ನೀಡಿದೆ ಎಂದು ಲೇವಡಿ ಮಾಡಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:sixteen − 9 =
Remember me
