ಬೆಂಗಳೂರು:ಭಾರತೀಯ ವಾಣಿಜ್ಯ ಹಾಗೂ ಕೈಗಾರಿಕಾ ಮಹಾಮಂಡಳಿ (FICCI)ಗೆ ಮೆಟಾ ಕಂಪನಿಯ ಬೆಂಬಲ ಲಭಿಸಿದೆ. ಎಕ್ಸ್ಆರ್​ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಭಾರತದ ಕೊಡುಗೆಯನ್ನು ವರ್ಧಿಸುವ ತನ್ನ ಬದ್ಧತೆಯ ನಿರ್ಮಾಣದಲ್ಲಿ ಮೆಟಾ, ಓಪನ್ ಸೋರ್ಸ್(XROS) ಫೆಲೋಶಿಪ್ ಪ್ರೊಗ್ರಾಮ್‍ಗಾಗಿ ಮೆಟಾ 1 ಮಿಲಿಯನ್ ಡಾಲರ್ ನೀಡುವ ಮೂಲಕ ಬೆಂಬಲವಾಗಿ ನಿಲ್ಲಲಿದೆ.
ಎಫ್​ಐಸಿಸಿಐ ನಡೆಸಿಕೊಡುವ XROS, 100 ಭಾರತೀಯ ಡೆವಲಪರ್‍ಗಳಿಗೆ ಸ್ಟೈಪಂಡ್ ಮತ್ತು ಮಾರ್ಗದರ್ಶನ ಒಳಗೊಂಡಂತೆ, ಫೆಲೋಶಿಪ್ ಒದಗಿಸುವ ಮೂಲಕ ವಿಸ್ತರಿತ ವಾಸ್ತವತೆ (XR)ತಂತ್ರಜ್ಞಾನಗಳ ಮೇಲೆ ಕಾರ್ಯನಿರ್ವಹಿಸಲು ಬೆಂಬಲ ಒದಗಿಸಲಿದೆ. ವಿದ್ಯುನ್ಮಾನ ಮತ್ತು ಮಾಹಿತಿತಂತ್ರಜ್ಞಾನ ಸಚಿವಾಲಯದ (MeitY) ಉಪಕ್ರಮವಾದ ರಾಷ್ಟ್ರೀಯ ಇ-ಆಡಳಿತ ವಿಭಾಗವು ಈ ಕಾರ್ಯಕ್ರಮದ ತಾಂತ್ರಿಕ ಭಾಗೀದಾರನಾಗಿರಲಿದೆ.
ಎಕ್ಸ್​ಆರ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಮುಕ್ತ ಮೂಲದ ಯೋಜನೆಗಳಿಗೆ ಕೊಡುಗೆ ಸಲ್ಲಿಸುವುದಕ್ಕೆ ಡೆವಲಪರ್​​ಗಳಿಗೆ ಬೆಂಬಲ ನೀಡಿ ಕೈಗೆಟುಕುವಂತಹ, ಸೂಕ್ತವಾದ ಹಾಗು ಭಾರತೀಯ ಭಾಷೆಗಳಿಗೆ ಸ್ಥಳೀಕರಿಸಲಾದ ಭಾರತದ ನಿರ್ದಿಷ್ಟ ಪರಿಹಾರಗಳಿಗೆ ಈ ಪ್ರೋಗ್ರಾಮ್​ ಅಡಿಪಾಯ ಹಾಕಲಿದೆ. ಎಕ್ಸ್​ಆರ್​- ಪ್ರೋಗ್ರಾಮ್, ಮೆಟಾದ ಜಾಗತಿಕ ಎಕ್ಸ್​ಆರ್​ ಹಾಗು ಸಂಶೋಧನಾ ನಿಧಿಯ ಭಾಗವಾಗಿದ್ದು ಇದಕ್ಕಾಗಿ ಈ ವರ್ಷದ ಆರಂಭದಲ್ಲಿ ಸಂಸ್ಥೆಯು, MeitY ಜತೆ XR ಸ್ಟಾರ್ಟ್‍ಅಪ್ ಪ್ರೋಗ್ರಾಮ್​ಗಾಗಿ 2 ಮಿಲಿಯನ್ ಡಾಲರ್ ಘೋಷಿಸಿದೆ. ಮುಂದುವರಿದು XROS, ಡಿಜಿಟಲ್ ಸಾರ್ವಜನಿಕ ವಸ್ತುಗಳನ್ನು ಸೃಷ್ಟಿಸಲು ಮತ್ತು ಎಕ್ಸ್​ಆರ್​​ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಸಂಭಾವ್ಯ ಉದ್ಯೋಗಾವಕಾಶಗಳನ್ನು ಉತ್ಪತ್ತಿ ಮಾಡಲು ಅಗತ್ಯವಾದ ಸಂಪನ್ಮೂಲಗಳನ್ನು ಡೆವಲಪರ್​​ಗಳಿಗೆ ಒದಗಿಸುವ ಗುರಿ ಹೊಂದಿದೆ.
ಮೆಟಾವರ್ಸ್ ಒಂದು ಸಂಸ್ಥೆಯಿಂದ ನಿರ್ಮಾಣಗೊಳ್ಳುವುದಿಲ್ಲ. ಎಕ್ಸ್​ಆರ್​​ ಓಪನ್ ಸೋರ್ಸ್‍ನಂತಹ ಪ್ರೋಗ್ರಾಮ್‍ಗಳ ಮೂಲಕ ಈ ಕೌತುಕಮಯ ತಂತ್ರಜ್ಞಾನಗಳ ಮೇಲೆ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಡೆವಲಪರ್​ಗಳಿಗೆ ನಾವು ಬೆಂಬಲ ಒದಗಿಸುತ್ತೇವೆ. ಅವರ ಪ್ರತಿಭೆ, ಅಂತದೃಷ್ಟಿ ಹಾಗು ಶ್ರಮದೊಂದಿಗೆ, ಮುಕ್ತವಾದ, ಸಹಯೋಗಾತ್ಮಕವಾದ ಮತ್ತು ಪ್ರವೇಶಾವಕಾಶ ಇರುವ ರೀತಿಯಲ್ಲಿ ನಿರ್ಮಾಣಗೊಂಡಿರುವ ಇಂಟರ್​ನೆಟ್​ ತಂತ್ರಜ್ಞಾನಗಳ ಮುಂದಿನ ಪೀಳಿಗೆಯನ್ನು ಖಾತರಿಪಡಿಸುವ ಆಶಯ ನಮ್ಮದು ಎಂದು ಮೆಟಾ ಜಾಗತಿಕ ವ್ಯವಹಾರಗಳ ವಿಭಾಗದ ಅಧ್ಯಕ್ಷ ನಿಕ್ ಕ್ಲೆಗ್ ತಿಳಿಸಿದ್ದಾರೆ.
ಎರಡನೆ ಮತ್ತು ಮೂರನೆ ದರ್ಜೆ ನಗರಗಳೂ ಒಳಗೊಂಡಂತೆ ಯುವ ಡೆವಲಪರ್​ಗಳು ಮತ್ತು ಸ್ಟಾರ್ಟ್‍ಅಪ್‍ಗಳು ಮೆಟಾವರ್ಸ್‍ನಲ್ಲಿರುವ ಎಕ್ಸ್​ಆರ್​​ನಂತಹ ಭವಿಷ್ಯತ್ತಿನ ತಂತ್ರಜ್ಞಾನಗಳಿಗೆ ನೆರವು ಒದಗಿಸಿದರೆ ಮಾತ್ರ ಭಾರತದ ತಂತ್ರಜ್ಞಾನ ದಶಕದ ಕನಸು ನನಸಾಗುತ್ತದೆ. ಡೆವಲಪರ್​​ಗಳಿಗೆ ಆರ್ಥಿಕ ಮುನ್ನಡೆ ಮಾತ್ರವಲ್ಲದೆ ತೊಡಗಿಕೊಳ್ಳುವಂತಹ ತಂತ್ರಜ್ಞಾಗಳನ್ನು ನಿರ್ಮಾಣ ಮಾಡಲು ಅವರಿಗೆ ಸರಿಯಾದ ಮಾರ್ಗದರ್ಶನದ ಬೆಂಬಲ ಕೂಡ ಒದಗಿಸುವುದರ ಮೇಲೂ ಗಮನ ಕೇಂದ್ರೀಕರಿಸುತ್ತಿರುವ ಈ ಉಪಕ್ರಮವನ್ನು ಎಫ್‍ಐಸಿಸಿಐ ಮತ್ತು ಮೆಟಾ ಪ್ರಾರಂಭಿಸುತ್ತಿರುವುದು ನನಗೆ ಸಂತೋಷದ ವಿಷಯ ಎಂದು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹಗಾರರಾದ ಪ್ರೊ.ಅಜಯ್‍ ಕುಮಾರ್ ಸೂದ್ ಎಂದು ಹೇಳಿದರು.

ಮುಕ್ತಮೂಲ ತಂತ್ರಜ್ಞಾನಚಾಲಿತ ಪರಿಸರವ್ಯವಸ್ಥೆಗಳು, ಪರಸ್ಪರ ಕಾರ್ಯಚರಣೀಯವಾದ ಮತ್ತು ಸಂಯೋಜಿತ ಆರ್ಕಿಟೆಕ್ಚರ್ ಅನುಸರಿಸುವ ಪ್ರಬಲವಾದ ಸಾರ್ವಜನಿಕ ವಸ್ತುಗಳ ನಿರ್ಮಾಣದಲ್ಲಿ ದೊಡ್ಡ ಪಾತ್ರ ವಹಿಸಬಲ್ಲದು. ಭಾರತೀಯ ಡೆವಲಪರ್​​ಗಳು ಅದರಲ್ಲೂ ವಿಶೇಷವಾಗಿ ಎರಡನೆ ಮತ್ತು ಮೂರನೆ ದರ್ಜೆ ನಗರಗಳಿಂದ ಬಂದ ಡೆವಲಪರ್​ಗಳು ಭಾರತದ ಹಾಗು ವಿಶ್ವಕ್ಕಾಗಿ ವಿಕಸನಗೊಳ್ಳುತ್ತಿರುವ ತಂತ್ರಜ್ಞಾನ ಮತ್ತು ಮೆಟಾವರ್ಸ್‍ನ ಭವಿಷ್ಯ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಲಿದ್ದಾರೆ ಎಂದು NeGD ಅಧ್ಯಕ್ಷ ಮತ್ತು ಸಿಇಒ ಅಭಿಷೇಕ್ ಸಿಂಗ್ ಹೇಳುತ್ತ ಪ್ರೋಗ್ರಾಮ್​ನ ಸಹಭಾಗಿತ್ವದ ಕುರಿತು ತಿಳಿಸಿದರು.
XROS ಉಪಕ್ರಮಕ್ಕೆ ಬೆಂಬಲ ಒದಗಿಸುತ್ತಿರುವುದಕ್ಕೆ ನಮಗೆ ಬಹಳ ಸಂತೋಷವಾಗುತ್ತಿದೆ ಮತ್ತು ಭಾರತದ ತೊಡಗಿಕೊಳ್ಳುವ ತಂತ್ರಜ್ಞಾನ ಡೆವಲಪರ್ ಪರಿಸರ ವ್ಯವಸ್ಥೆ ಮತ್ತು ಓಪನ್ ಸೋರ್ಸ್ ಸಮುದಾಯವನ್ನು ಪೋಷಿಸುವಲ್ಲಿ ಈ ಕಾರ್ಯಕ್ರಮವು ವೇಗವರ್ಧಕವಾಗಿ ಕಾರ್ಯನಿರ್ವಹಿಸಲಿದೆ ಎಂದು ಆಶಿಸುತ್ತೇವೆ. ಈ ದಶಕವನ್ನು ಭಾರತದ ತಂತ್ರಜ್ಞಾನದಶಕವಾಗಿ ಮಾಡುವಲ್ಲಿ ಇದು ಮಹತ್ವದ ಹೆಜ್ಜೆಯಾಗಿರುತ್ತದೆ ಎಂದು ಭಾವಿಸಿದ್ದೇವೆ ಎಂದು ಹೇಳಿದರು.
ಎಕ್ಸ್​ಆರ್​ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಓಪನ್ ಸೋರ್ಸ್ ಯೋಜನೆಗಳಿಗೆ ಮಹತ್ತರವಾದ ಕೊಡುಗೆ ಸಲ್ಲಿಸುವುದಕ್ಕಾಗಿ ಭಾರತೀಯ ಡೆವಲಪರ್ ಗಳಿಗೆ ಬೆಂಬಲ ಒದಗಿಸುವ ಗುರಿ ಇರಿಸಿಕೊಂಡಿರುವ ಉಪಕ್ರಮ ಎಕ್​ಆರ್​ಒಎಸ್​ ಫೆಲೋಶಿಪ್ ಪ್ರೊಗ್ರಾಮ್ ಆಗಿದೆ. 2025ರ ವೇಳೆಗೆ ಭಾರತವನ್ನು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡಬೇಕೆನ್ನುವ ಸರ್ಕಾರದ ದೂರದೃಷ್ಟಿಗೆ ಅನುಗುಣವಾಗಿ ಭವಿಷ್ಯತ್ತಿನ ತಂತ್ರಜ್ಞಾನಗಳಲ್ಲಿ ಹೂಡಿಕೆಗಳ ಬೆಳವಣಿಗೆಯನ್ನು ವರ್ಧಿಸುವಲ್ಲಿ ಇದು ಅಗತ್ಯವಾದ ಒತ್ತು ನೀಡುತ್ತದೆ. ಈ ಕಾರ್ಯಕ್ರಮಕ್ಕೆ ಬೆಂಬಲ ಒದಗಿಸುತ್ತಿರುವುದಕ್ಕಾಗಿ ಮೆಟಾಗೆ ಮತ್ತು ಈ ಕಾರ್ಯಕ್ರಮದ ಭಾಗೀದಾರನಾಗಿರುವುದಕ್ಕಾಗಿ NeGDಗೆ ನಾವು ಧನ್ಯವಾದ ಅರ್ಪಿಸುತ್ತೇವೆ ಎಂದು ಎಫ್‍ಐಸಿಸಿಐ ಸಮಿತಿ ಸದಸ್ಯ ಮತ್ತು ಸಿಂಡಿಕ್ಯಾಟಮ್ ರಿನ್ಯೂವೇಬಲ್ ಎನರ್ಜಿಯ ಭಾರತ ಮುಖ್ಯಸ್ಥ ದೆವಿನ್ ನಾರಂಗ್ ತಿಳಿಸಿದರು.
ಎಕ್ಸ್​ಆರ್​ ಓಪನ್ ಸೋರ್ಸ್ ಪ್ರೋಗ್ರಾಮ್ ಭಾರತದಲ್ಲಿ ಎರಡನೇ ಕಾರ್ಯಕ್ರಮವಾಗಿದ್ದು, ಇದರ ಮೂಲಕ ಮೆಟಾ ತೊಡಗಿಕೊಳ್ಳುವಂತಹ ತಂತ್ರಜ್ಞಾನಗಳ ಸುತ್ತ ಡೆವಲಪರ್ ಪರಿಸರವ್ಯವಸ್ಥೆಯನ್ನು ವರ್ಧಿಸಿ ಮೆಟಾವರ್ಸ್ ನಿರ್ಮಾಣಕ್ಕಾಗಿ ಮುಕ್ತ ಪರಿಸರವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಆರಂಭದಿಂದಲೇ ಮೆಟಾ, ನೋ ಲಾಂಗ್ವೇಜ್ ಲೆಫ್ಟ್ ಬಿಹೈಂಡ್ (NLLB), 25 ಭಾರತೀಯ ಭಾಷೆಗಳೂ ಒಳಗೊಂಡಂತೆ, 200 ಕಡಿಮೆ ಸಂಪನ್ಮೂಲ ಭಾಷೆಗಳಿಗೆ ಬೆಂಬಲ ಒದಗಿಸುವ ಒಂದೇ ಬಹುಭಾಷಾ ಎಐ ಮಾಡಲ್ ಒದಗಿಸುವಿಕೆ ಮುಂತಾದ ಹಲವಾರು ಉಪಕ್ರಮಗಳಿಗೆ ಬೆಂಬಲ ಒದಗಿಸಲಾರಂಭಿಸಿದೆ.
ಮುಂದಿನ 3 ವರ್ಷಗಳಲ್ಲಿ 10 ದಶಲಕ್ಷಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಮತ್ತು 1 ದಶಲಕ್ಷಕ್ಕಿಂತ ಹೆಚ್ಚಿನ ಶಿಕ್ಷಕರಿಗೆ ತೊಡಗಿಕೊಳ್ಳುವ ತಂತ್ರಜ್ಞಾನಗಳನ್ನು ತರಲು ಪ್ರೌಢಶಾಲಾ ಶಿಕ್ಷಣದ ಕೇಂದ್ರೀಯ ಮಂಡಳಿ(ಸಿಬಿಎಸ್‍ಇ) ಜತೆ ಮೆಟಾ ಕಳೆದ ವರ್ಷ ಸಹಭಾಗಿತ್ವ ಏರ್ಪಡಿಸಿಕೊಂಡಿತ್ತು. ಸಿಬಿಎಸ್‍ಇ ಜತೆಗಿನ ಈ ಸಹಭಾಗಿತ್ವವು ಭಾರತಕ್ಕೆ ಮೆಟಾದ ಬದ್ಧತೆಯನ್ನು ಪುನರುಚ್ಚರಿಸುವುದಲ್ಲದೆ, ಭಾರತದಾದ್ಯಂತ ಇರುವ ವಿದ್ಯಾರ್ಥಿಗಳು ಗುಣಮಟ್ಟದ ಶೈಕ್ಷಣಿಕ ಕಂಟೆಂಟ್‍ಗೆ ಸಮಾನ ಪ್ರವೇಶಾವಕಾಶ ಪಡೆದುಕೊಂಡು ಡಿಜಿಟಲ್ ರೂಪದ ಶಕ್ತಿ ಪಡೆದುಕೊಂಡಿರುವ ಆರ್ಥಿಕತೆಯಲ್ಲಿ ಭವಿಷ್ಯತ್ತಿನ ಕೆಲಸಕ್ಕಾಗಿ ಸಿದ್ಧವಾಗಿರುವುದನ್ನು ಖಾತರಿ ಪಡಿಸುವಮೂಲಕ STEM ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವ ಜಂಟಿ ಮಹತ್ವಾಕಾಂಕ್ಷೆಯನ್ನೂ ಪ್ರತಿಬಿಂಬಿಸುತ್ತದೆ. 2022ರ ಜೂನ್​ನಲ್ಲಿ ಮೆಟಾವರ್ಸ್‍ನಲ್ಲಿ 40,000 ವಿದ್ಯಾರ್ಥಿಗಳಿಗೆ ತರಬೇತಿ ಒದಗಿಸಲು LeARn Program ಪ್ರಾರಂಭಿಸಿತ್ತು ಮತ್ತು ಮೆಟಾಸ್ಪಾರ್ಕ್‍ನಲ್ಲಿ ಆಧುನಿಕ ಸಾಮರ್ಥ್ಯಗಳ ಮೇಲೆ ಕಾರ್ಯನಿರ್ವಹಿಸಲು 1000 ಡೆವಲಪರ್​ಗಳ ಕೌಶಲ್ಯವರ್ಧನೆ ಮಾಡುವಂತಹ ಸ್ಕೂಲ್ ಆಫ್ ಎಆರ್ ಎಂಬ ಪ್ರಮುಖ ಪ್ರೋಗ್ರಾಮ್​ ಕೂಡ ಪ್ರಾರಂಭಿಸಿತ್ತು. ಮೆಟಾದ ಎಕ್ಸ್​ಆರ್​​ ಪ್ರೋಗ್ರಾಮ್​ಗಳು ಮತ್ತು ಸಂಶೋಧನಾ ನಿಧಿಯು, ಕೈಗಾರಿಕಾ ಭಾಗೀದಾರರು, ನಾಗರಿಕ ಹಕ್ಕುಗಳ ಗುಂಪುಗಳು, ಸರ್ಕಾರಗಳು, ಲಾಭಕ್ಕಾಗಿಯಲ್ಲದ ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಪ್ರೋಗ್ರಾಮ್ ಮತ್ತು ಬಾಹ್ಯ ಸಂಶೋಧನಾ ಪ್ರೋಗ್ರಾಮ್‍ಗಳಲ್ಲಿ ಎರಡು ವರ್ಷಗಳಲ್ಲಿ 50 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ.
ಐಸಿಯುನಲ್ಲಿ ವೆಂಟಿಲೇಟರ್ ಶಬ್ದದಿಂದ ಕಿರಿಕಿರಿ ಆಗ್ತಿತ್ತು ಅಂತ ಆಫ್ ಮಾಡಿದ ವೃದ್ಧೆ; ಸಾವಿಗೀಡಾದ ರೋಗಿ

ಆರು ತಿಂಗಳ ಹಿಂದಷ್ಟೇ ಬಡ್ತಿ ಹೊಂದಿದ್ದ ಪೊಲೀಸ್ ಅಧಿಕಾರಿ ಇನ್ನಿಲ್ಲ; ಇನ್​ಸ್ಪೆಕ್ಟರ್ ಪ್ರಾಣ ತೆಗೆದ ಕ್ಯಾನ್ಸರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 8 =
Remember me
