ನವದೆಹಲಿ: ‘ಮೆಟ್ರೊ ಮ್ಯಾನ್’ ಎಂದು ಖ್ಯಾತಿಯಾಗಿರುವ ದೆಹಲಿ ಮೆಟ್ರೊ ಮಾಜಿ ಮುಖ್ಯಸ್ಥ ಇ ಶ್ರೀಧರನ್ ಅವರು ಗುರುವಾರ ಸಂಜೆ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಕೇರಳದ ಮಲ್ಲಪುರಂನಲ್ಲಿ ಆಯೋಜಿಸಿದ್ದ ಬಿಜೆಪಿ ವಿಜಯ ಯಾತ್ರೆಯಲ್ಲಿ ಕೇಂದ್ರ ಸಚಿವ ಆರ್ ಕೆ ಸಿಂಗ್ ಅವರ ನೇತೃತ್ವದಲ್ಲಿ ಇ ಶ್ರೀಧರನ್ ಬಿಜೆಪಿ ಸೇರ್ಪಡೆಯಾದರು. ಈ ವೇಳೆ ಬೃಹತ್ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಮಾವೇಶಗೊಂಡಿದ್ದರು.ಮುಂಬರುವ ತಿಂಗಳುಗಳಲ್ಲಿ ಕೇರಳ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಆ ಚುನಾವಣೆಯಲ್ಲಿ ಶ್ರೀಧರನ್ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಕೇರಳ ಚುನಾವಣೆಯಲ್ಲಿ ಶತಾಯ ಗತಾಯ ಅಧಿಕಾರ ಹಿಡಿಯಬೇಕು ಎಂಬ ತಯಾರಿಯಲ್ಲಿ ಬಿಜೆಪಿ ಇದೆ. ಹೀಗಾಗಿ ಬಿಜೆಪಿ ಹಲವರಿಗೆ ಗಾಳ ಹಾಕಿದೆ. ಶ್ರೀಧರನ್ ಅವರು, ತಾವು ಕೇರಳ ಮುಖ್ಯಮಂತ್ರಿಯಾಗಲು ಅರ್ಹ ಅಭ್ಯರ್ಥಿ ಎಂದು ಈಗಾಗಲೇ ಹೇಳಿಕೊಂಡಿದ್ದಾರೆ.
88ರ ವಯೋಮಾನದ ಶ್ರೀಧರನ್ ಅವರು ಮೂಲತಃ ಕೇರಳದ ಪಾಲಕ್ಕಾಡ್ ಜಿಲ್ಲೆಯವರು. ಭಾರತದ ದೆಹಲಿ ಮೆಟ್ರೋ ಸೇರಿದಂತೆ ಇತರ ನಗರಗಳ ಮೆಟ್ರೋ ಯೋಜನೆ ಹಾಗೂ ಮಹತ್ವದ ರೈಲು ಯೋಜನೆಗಳಲ್ಲಿ ಶ್ರೀಧರನ್ ಪಾತ್ರ ತುಂಬಾ ದೊಡ್ಡದಿದೆ. ಅದ್ಭುತ ಎಂಜಿನಿಯರ್ ಆಗಿರುವ ಅವರನ್ನು ಮೆಟ್ರೊ ಮ್ಯಾನ್ ಎಂದೇ ಕರೆಯಲಾಗುತ್ತಿದೆ.
ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿ ವಿಧಾನಸಭೆಗೆ ಚುನಾವಣಾ ವೇಳಾಪಟ್ಟಿ ಇಂದು ಪ್ರಕಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + four =
Remember me
