ಚೆನ್ನೈ:ಕರೊನಾ ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳುತ್ತಿದ್ದಂತೆಯೇ ಎಲ್ಲ ರಾಜ್ಯ ಸರ್ಕಾರಗಳು ರಾಜ್ಯದ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹಾಕಲಾರಂಭಿಸಿವೆ. ತಮಿಳುನಾಡಿನ ಚೆನ್ನೈನ ಮೆಟ್ರೋ ರೈಲು ಪ್ರಯಾಣ ದರದಲ್ಲೂ ಇದೀಗ ಹಲವು ಬದಲಾವಣೆಯನ್ನು ತರಲಾಗಿದೆ.
ಚೆನ್ನೈ ಮೆಟ್ರೋ ರೈಲಿನ ಗರಿಷ್ಠ ಟಿಕೆಟ್​ ದರವನ್ನು 20 ರೂಪಾಯಿ ಇಳಿಸಿರುವುದಾಗಿ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ತಿಳಿಸಿದ್ದಾರೆ. ಈ ಹಿಂದೆ 70 ರೂಪಾಯಿಯಿದ್ದ ಗರಿಷ್ಠ ಟಿಕೆಟ್​ ದರ ಇನ್ನು ಮುಂದೆ 50 ರೂಪಾಯಿಯಾಗಿರಲಿದೆ.
2 ಕಿಮೀವರೆಗಿನ ದೂರಕ್ಕೆ 10 ರೂಪಾಯಿ, 2ರಿಂದ 5 ಕಿಮೀ ದೂರಕ್ಕೆ 20 ರೂಪಾಯಿ ಹಾಗೂ 5ರಿಂದ 12 ಕಿಮೀ ದೂರಕ್ಕೆ 30 ರೂಪಾಯಿ ಟಿಕೆಟ್​ ದರ ನಿಗದಿಪಡಿಸಲಾಗಿದೆ. 12ರಿಂದ 21 ಕಿಮೀವರೆಗಿನ ಪ್ರಯಾಣಕ್ಕೆ 40 ರೂಪಾಯಿ ತೆರಬೇಕಾಗುತ್ತದೆ. ಹಾಗೂ 21 ಕಿಮೀಗಿಂತ ಹೆಚ್ಚಿನ ಪ್ರಯಾಣಕ್ಕೆ (32 ಕಿಮೀವರೆಗೆ) 50 ರೂಪಾಯಿ ಟಿಕೆಟ್​ ಕೊಂಡುಕೊಳ್ಳಬೇಕಾಗುತ್ತದೆ. ಈ ಎಲ್ಲ ನಿಯಮಗಳು ಸೋಮವಾರದಿಂದ ಅಂದರೆ ಫೆಬ್ರವರಿ 22ರಿಂದಲೇ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)
ಮದುವೆ ದಿನವೇ ನಾಪತ್ತೆಯಾದ ವಧು! ಅಕ್ಕನ ಬದಲು ತಂಗಿಗೆ ತಾಳಿ ಕಟ್ಟಿದ ವರ!

ಗಂಡನಿಗೆ ಗುಡ್ ಬೈ ಹೇಳಲು ಸಿದ್ದಳಾದ ಈ ಮಾದಕ ನಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
