ದೆಹಲಿ:ಮೆಟ್ರೋ, ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು ಮತ್ತು ನಗರದ ಇತರ ಜನನಿಬಿಡ ಪ್ರದೇಶಗಳಲ್ಲಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ಐವರು ಕಳ್ಳಿಯರನ್ನು ದೆಹಲಿ ಪೊಲೀಸರ ಮೆಟ್ರೋ ಘಟಕವು ಬಂಧಿಸಿದೆ.ಇದನ್ನೂ ಓದಿ:ಅಪ್ರಾಪ್ತ ವಯಸ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ತಂದೆ-ಮಗಆರೋಪಿಗಳನ್ನು 28 ವರ್ಷದ ಪೂಜಾ, ರಾಗಿಣಿ (25), ಸಂಧ್ಯಾ (24), ವರ್ಷಾ (25), ಮತ್ತು ಆಶಾ (35) ಎಂದು ಗುರುತಿಸಲಾಗಿದೆ. ಎಲ್ಲರೂ ನಗರದ ಆನಂದ್ ಪರ್ಬತ್ ಪ್ರದೇಶದ ನಿವಾಸಿಗಳಾಗಿದ್ದಾರೆ. ಜುಲೈ 30ರಂದು ನಡೆದ ಜೇಬುಗಳ್ಳತನದ ಘಟನೆಯ ಬಗ್ಗೆ ದೆಹಲಿ ಮೆಟ್ರೋ ಪ್ರಯಾಣಿಕರ ದೂರಿನ ನಂತರ ಈ ಐವರನ್ನು ಬಂಧಿಸಲಾಗಿದೆ.ಇನ್‌ಸ್ಪೆಕ್ಟರ್ ಸಮೀರ್ ಶ್ರೀವಾಸ್ತವ ನೇತೃತ್ವದಲ್ಲಿ ವಿಶೇಷ ಸಿಬ್ಬಂದಿ ಮೆಟ್ರೋ ತಂಡವನ್ನು ರಚಿಸಲಾಗಿದ್ದು, ದೆಹಲಿ ಮೆಟ್ರೋದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ತಂಡವು ನಗರದ ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಿತು. ಬಾರಾಖಂಬಾ ಮೆಟ್ರೋ ನಿಲ್ದಾಣದ ಬಳಿ ತಂಡವು ಶಂಕಿತ ಮಹಿಳೆಯರನ್ನು ಬಂಧಿಸಿದ್ದು, ಈ ದಾಳಿಗಳ ಸಂದರ್ಭದಲ್ಲಿ ಐವರಿಂದ 10,000 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.ಇದನ್ನೂ ಓದಿ:ನಕಲಿ ದೇಸಿ ತುಪ್ಪ ತಯಾರಿಸುವವರ ವಿರುದ್ಧ ಕಠಿಣ ಕ್ರಮ: ಐವರಿಗೆ ಜೀವಾವಧಿ ಶಿಕ್ಷೆವಿಚಾರಣೆ ವೇಳೆ ಆರೋಪಿಗಳು ಮೆಟ್ರೊ ರೈಲು, ಬಸ್ ನಿಲ್ದಾಣ, ರೈಲು ನಿಲ್ದಾಣ ಹಾಗೂ ಜನಸಂದಣಿ ಇರುವ ಮಾರುಕಟ್ಟೆ ಪ್ರದೇಶದಗಳಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದ್ದು,ಆರೋಪಿಗಳೆಲ್ಲರೂ ನಿರುದ್ಯೋಗಿಗಳು ಮತ್ತು ಅನಕ್ಷರಸ್ಥರು ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 7 =
Remember me
