ತಿರುವನಂತಪುರಂ:ಕೇರಳದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿಂಬಿತವಾಗಿದ್ದ ಮೆಟ್ರೊಮ್ಯಾನ್​ ಈ. ಶ್ರೀಧರನ್​ ಸಕ್ರಿಯ ರಾಜಕಾರಣವನ್ನು ತೊರೆಯುತ್ತಿರುವುದಾಗಿ ಇಂದು ಘೋಷಿಸಿದ್ದಾರೆ. ಭಾರತೀಯ ಜನತಾ ಪಕ್ಷವನ್ನು ಸೇರಿ ಒಂದು ವರ್ಷ ಕಳೆಯುವುದಕ್ಕೂ ಮುಂಚೆಯೇ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.
ಕೇರಳದ ಮಲಪ್ಪುರಂನಲ್ಲಿ ಈ ಬಗ್ಗೆ ಸುದ್ದಿಗಾರರಿಗೆ ತಿಳಿಸಿದ ಶ್ರೀಧರನ್​, ನಾನು ಯಾವಾಗಲೂ ರಾಜಕಾರಣಿಯಾಗಿರಲಿಲ್ಲ. ಆದರೆ ರಾಜಕೀಯದಲ್ಲಿ ಸಕ್ರಿಯವಾಗಿರುವುದಿಲ್ಲ ಎಂದ ಮಾತ್ರಕ್ಕೆ ರಾಜಕಾರಣದಿಂದ ಹಿಂದೆ ಸರಿಯುತ್ತೇನೆ ಎಂದರ್ಥವಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕಾಲುವೆಗೆ ಬಿದ್ದ ಟ್ರ್ಯಾಕ್ಟರ್ ಪಲ್ಟಿ; ಜಮೀನಿಗೆ ಹೊರಟ ಚಾಲಕ ಸ್ಥಳದಲ್ಲೇ ಸಾವು…
ಕಳೆದ ಏಪ್ರಿಲ್​ನಲ್ಲಿ ನಡೆದ ಚುನಾವಣೆಯಲ್ಲಿ ಪಲಕ್ಕಾಡ್​ ವಿಧಾನಸಭಾ ಕ್ಷೇತ್ರಕ್ಕಾಗಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀಧರನ್​ ಅವರನ್ನು ಕೇರಳದ ಸಿಎಂ ಅಭ್ಯರ್ಥಿ ಎಂದೇ ಬಿಂಬಿಸಲಾಗಿತ್ತು. ಆದರೆ ಬಳಿಕ ಅವರು ಶಾಸಕ ಶಫಿ ಪರಂಬಿಲ್​​ ವಿರುದ್ಧ 3,859 ಮತಗಳಿಂದ ಪರಾಭವ ಕಂಡಿದ್ದರು.
ಇದನ್ನೂ ಓದಿ:ಯುವಕನ ಬರ್ಬರ ಕೊಲೆ: ಕರೆ ಮಾಡಿ ಕರೆಸಿಕೊಂಡು ಚಾಕುವಿನಿಂದ ಚುಚ್ಚಿದ್ರು, ಹಳ್ಳಕ್ಕೆ ತಳ್ಳಿ ತಲೆ ಮೇಲೆ ಕಲ್ಲು ಹಾಕಿದ್ರು..
ನಾನು ಸೋತಾಗ ಬೇಸರವಾಗಿತ್ತು. ಆದರೆ, ಆ ಸಮಯ ಈಗ ಕಳೆದಿದೆ. ನನಗೀಗ 90 ವರ್ಷ. ರಾಜಕೀಯದಲ್ಲಿ ಹೆಚ್ಚು ತೊಡಗಿಕೊಳ್ಳುವುದು ಅಪಾಯಕಾರಿ. ನನ್ನ ನೆಲದ ಸೇವೆ ಮಾಡಲು ನನಗೆ ರಾಜಕೀಯದ ಅಗತ್ಯವಿಲ್ಲ. ಮೂರು ಟ್ರಸ್ಟ್​ಗಳ ಮೂಲಕ ನಾನಾಗಲೇ ಅದನ್ನು ಮಾಡುತ್ತಿದ್ದೇನೆ ಎಂದು ಶ್ರೀಧರನ್​ ತಿಳಿಸಿದ್ದಾರೆ.
ಸುದ್ದಿಯ ಶೀರ್ಷಿಕೆ ತಿರುಚಿದ ಕಿಡಿಗೇಡಿಗಳ ವಿರುದ್ಧ ಪೊಲೀಸರಿಗೆ ದೂರು

ಕುಡಿಯಬೇಡ ಎಂದಿದ್ದಕ್ಕೆ ಮನೆ ಬಿಟ್ಟ ಗಂಡ; ಮನನೊಂದು ವಿಷ ಸೇವಿಸಿದ ಪತ್ನಿ-ಪುತ್ರಿ; ಸತಿಯ ಸಾವಿನ ಸುದ್ದಿ ಕೇಳಿ ಪತಿಯೂ ಆತ್ಮಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + eleven =
Remember me
