ನವದೆಹಲಿ:ದೆಹಲಿಯ ಕೋವಿಡ್ -19 ಆರೈಕೆ ಕೇಂದ್ರಗಳಿಗೆ ಭಾರತೀಯ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂಬ ಮಾಧ್ಯಮಗಳ ಕೆಲವು ವರದಿಗಳಿಗೆ ಗೃಹ ಸಚಿವಾಲಯ (ಎಂಎಚ್‌ಎ) ಶುಕ್ರವಾರ ಪ್ರತಿಕ್ರಿಯಿಸಿದ್ದು, ಇದನ್ನು “ವಾಸ್ತವದಿಂದ ದೂರವಿರುವ ಸುದ್ದಿ” ಎಂದು ಕರೆದಿದೆ.ಭಾರತೀಯ ಸೇನೆಯನ್ನು ಕರೆಸಿಲ್ಲ ಮತ್ತು ಸಶಸ್ತ್ರ ಪಡೆ ಮತ್ತು ಸಿಎಪಿಎಫ್‌ನ ವೈದ್ಯಕೀಯ ಸಿಬ್ಬಂದಿಯನ್ನು ಮಾತ್ರ ದೆಹಲಿಯ ಕೆಲವು ವೈದ್ಯಕೀಯ ಕೇಂದ್ರಗಳಲ್ಲಿ ಸಹಾಯ ಮಾಡಲು ಕೋರಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಇದನ್ನೂ ಓದಿ:ಡ್ರ್ಯಾಗನ್ ಕಳ್ಳಾಟ, ಗಡಿಯಲ್ಲಿ ಕಣ್ಣಾಮುಚ್ಚಾಲೆ
ಪ್ರಕರಣಗಳು ಉಲ್ಬಣಗೊಂಡಂತೆ ದೆಹಲಿಯಲ್ಲಿ ಆರೈಕೆ ಕೇಂದ್ರಗಳನ್ನು ನಡೆಸಲು ಭಾರತ ಸೇನೆಯನ್ನು ಕರೆದಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು. ಈ ಸುದ್ದಿ ವಾಸ್ತವದಿಂದ ದೂರವಿದೆ ಎಂದು ಸಚಿವಾಲಯ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಈ ರೀತಿ ಸ್ಪಷ್ಟಪಡಿಸಿದೆ- ‘ಸೇನೆಯನ್ನು ಕರೆಸಲಾಗಿಲ್ಲ, ಸಶಸ್ತ್ರ ಪಡೆ ಹಾಗೂ ಸಿಎಪಿಎಫ್​​ನ ವೈದ್ಯಕೀಯ ಸಿಬ್ಬಂದಿಯನ್ನು ಮಾತ್ರ ದೆಹಲಿ ವೈದ್ಯಕೀಯ ಕೇಂದ್ರಗಳಿಗೆ ಸಹಾಯ ಮಾಡಲು ಕೋರಲಾಗಿದೆ’ ಎಂದಿದೆ.
ಸ್ಪಷ್ಟೀಕರಣವನ್ನು ನೀಡುವ ಮೊದಲು, ಗೃಹ ಸಚಿವಾಲಯವು ದಕ್ಷಿಣ ದೆಹಲಿಯ ಛತ್ತರ್​ಪುರ ಪ್ರದೇಶದಲ್ಲಿ ಇತ್ತೀಚೆಗೆ ಆರಂಭಿಸಲಾದ ಕೋವಿಡ್ ಆರೈಕೆ ಕೇಂದ್ರದ ಒಂದೆರಡು ಚಿತ್ರಗಳನ್ನು ಹಂಚಿಕೊಂಡಿದೆ. ಚಿತ್ರಗಳಲ್ಲಿ ಅನೇಕ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಪಿಬಿ) ವೈದ್ಯಕೀಯ ಸಿಬ್ಬಂದಿ ಕೇಂದ್ರದ ಸುಗಮ ಕಾರ್ಯನಿರ್ವಹಣೆಯನ್ನು ನೋಡಿಕೊಳ್ಳಲು ಅಲ್ಲಿ ಬೀಡುಬಿಟ್ಟಿರುವುದನ್ನು ಕಾಣಬಹುದು.
ಹಲವು ದೇವರುಗಳಿಗೆ ಹರಕೆ ಹೊತ್ತ ನಂತರ ಹುಟ್ಟಿದವನು ಸುಶಾಂತ್​ ಸಿಂಗ್​ ರಜಪೂತ್​

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:three + 11 =
Remember me
