ನವದೆಹಲಿ:ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಗೆ (CAPF) ಕಾನ್ಸ್‌ಟೇಬಲ್ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ಗೃಹ ವ್ಯವಹಾರಗಳ ಸಚಿವಾಲಯ ಮಹತ್ವದ ನಿರ್ಧಾರ ಕೈಗೊಂಡಿದೆ. ಅಭ್ಯರ್ಥಿಗಳು ಇನ್ನು ಮುಂದೆ ಕನ್ನಡ, ತೆಲುಗು, ತಮಿಳು ಸೇರಿದಂತೆ 13 ಭಾಷೆಗಳಲ್ಲಿ ಪರೀಕ್ಷೆ ಬರೆಯಬಹುದಾಗಿದೆ.
ಇದನ್ನೂ ಓದಿ:ಚುನಾವಣಾ ಜಾಗೃತಿ ಅಭಿಯಾನಕ್ಕೆ ಎನ್​ಜಿಒ ಸಾಥ್; ​ಸಮುದ್ರ ತೀರ, ರೈಲು, ಬಸ್ಸು, ಸಂತೆಗಳಲ್ಲಿ ಮತದಾರರಿಗೆ ಮನವರಿಕೆ

In a historic decision, MHA decides to conduct the Constable (GD) CAPF exams in 13 regional languages also. It will give an impetus to participation of local youth in CAPFs.The decision reflects PM@narendramodiJi's commitment to developing and encouraging regional languages.pic.twitter.com/Dd1iNWzyL5
ಕೇಂದ್ರದ ಈ ಮಹತ್ವದ ನಿರ್ಧಾರದಿಂದ ಅಭ್ಯರ್ಥಿಗಳು ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಎದುರಿಸಬಹುದಾಗಿದೆ. ಈ ಮೊದಲು ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ ಪರೀಕ್ಷೆ ಬರೆಯಬೇಕಾಗಿತ್ತು. ಪ್ರತಿಯೊಂದು ರಾಜ್ಯದ ಯುವಕ-ಯುವತಿಯರು ತಮ್ಮ ಮಾತೃಭಾಷೆಯಲ್ಲಿ ಪರೀಕ್ಷೆಯನ್ನು ಎದುರಿಸುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ಮೂಲಕ ದೇಶಕ್ಕೆ ಸೇವೆ ಸಲ್ಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಬೇಕು ಎಂದು ಎಮ್​ಎಚ್​ಗೆ ಆದೇಶದಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ:ಕಾಂಗ್ರೆಸ್​-ಬಿಜೆಪಿ ಉತ್ತರ-ದಕ್ಷಿಣ ಗುರಿ; ಹೆಚ್ಚು ಸ್ಥಾನಕ್ಕೆ ಎರಡೂ ಪಕ್ಷಗಳಿಂದ ಸ್ಪಷ್ಟ ಲೆಕ್ಕಾಚಾರ
ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡದಲ್ಲಿ ಮೊದಲು ಆರಂಭಿಸಿದ್ದು ಹಾಗೂ ರೈಲ್ವೆ ಚೀಟಿಗಳನ್ನು ಕನ್ನಡದಲ್ಲಿ ಮೊದಲು ಮುದ್ರಿಸಲು ಆರಂಬಿಸಿದ್ದು ಬಿಜೆಪಿ. ಇದೀಗ CAPF ಕಾನ್ಸ್ಟೇಬಲ್ ಹುದ್ದೆಗಳ ಪರೀಕ್ಷೆಯಲ್ಲೂ ಕನ್ನಡಕ್ಕೆ ಮನ್ನಣೆ ದೊರೆತಿದೆ. ಕನ್ನಡದ ಕೈಂಕರ್ಯಕ್ಕೆ ಬಿಜೆಪಿಯೇ ಭರವಸೆ ಎಂಬುದು ವಿರೋಧಿಗಳಿಗೂ ತಿಳಿದಿದೆ! ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.
ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯುವುದು ನಮ್ಮ ಹಕ್ಕು. ಅದನ್ನು ಈವರೆಗೆ ನಮಗೆ ನಿರಾಕರಿಸಲಾಗಿತ್ತು. ಈ ತಪ್ಪನ್ನು ನಮ್ಮ ತೀವ್ರ ಪ್ರತಿಭಟನೆಯ ಕಾರಣಕ್ಕೆ ಸರಿಪಡಿಸಲಾಗಿದೆ. ಇದರ ಕ್ರೆಡಿಟ್ ಕನ್ನಡಿಗರು ಮತ್ತು ಭಾಷಾಪ್ರೇಮಿಗಳಿಗೆ ಹೋಗಬೇಕೆ ಹೊರತು, ರಾಜ್ಯ ಬಿಜೆಪಿಯಂತಹ ಹಿಂದಿ ಪ್ರೇಮಿಗಳಿಗೆ ಅಲ್ಲ ಎಂದು ಜೆಡಿಎಸ್ ಟ್ವೀಟ್ ಮಾಡಿ ಟಾಂಗ್ ಕೊಟ್ಟಿದೆ.
ಇದನ್ನೂ ಓದಿ:ಸರ್ಕಾರಿ ನೌಕರರೇ ಹುಷಾರ್​; ಕರ್ತವ್ಯಕ್ಕೆ ಬಾರದಿದ್ರೆ ಅರೆಸ್ಟ್​!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
