ನವದೆಹಲಿ:ದೇಶದಲ್ಲಿ ಕಳೆದ ತಿಂಗಳು ಜಾರಿಯಾಗಿರುವ ಅನ್​ಲಾಕ್​-05ನ್ನು ನವೆಂಬರ್​ 30ರವರೆಗೆ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಕರೊನಾ ವೈರಸ್​ ಲಾಕ್​ಡೌನ್​ ನಂತರ ಒಂದೊಂದೇ ಹಂತವಾಗಿ ಅನ್​ಲಾಕ್​ ಮಾಡುತ್ತಿರುವ ಕೇಂದ್ರ ಸರ್ಕಾರ, ಆಯಾ ರಾಜ್ಯಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದೂ ಹೇಳಿದೆ. ಸೆ.30ರಂದು ಅನ್​ಲಾಕ್​ 5ನೇ ಹಂತ ಜಾರಿಗೊಳಿಸಿ ಕೇಂದ್ರ ಗೃಹ ಇಲಾಖೆ ಜಾರಿಗೊಳಿಸಿ, ಸಂಬಂಧಪಟ್ಟ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತ್ತು. ಅಕ್ಟೋಬರ್​ 15ರಿಂದ ದೇಶಾದ್ಯಂತ ಸಿನಿಮಾ ಥಿಯೇಟರ್​, ಕ್ರೀಡಾಪಟುಗಳ ತರಬೇತಿಗೆ ಸ್ವಿಮ್ಮಿಂಗ್​ ಪೂಲ್​ಗಳನ್ನು ತೆರೆಯಲು ಅನುಮತಿ ನೀಡಿತ್ತು. ಅನ್​ಲಾಕ್​-05ರ ಈ ಎಲ್ಲ ಮಾರ್ಗಸೂಚಿಗಳು ಅಕ್ಟೋಬರ್​ 31ರವರೆಗೆ ಅನ್ವಯ ಆಗುವಂತೆ ರೂಪಿಸಲಾಗಿತ್ತು. ಆದರೆ ಇಂದು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕೇಂದ್ರ ಗೃಹ ಸಚಿವಾಲಯ, ಅನ್​ಲಾಕ್​-05 ನವೆಂಬರ್​ 30ರವರೆಗೂ ಮುಂದುವರಿಯಲಿದೆ ಎಂದು ತಿಳಿಸಿದೆ.ಇದನ್ನೂ ಓದಿ:ಭಟ್ಕಳ​ ಸಹೋದರರು ಸೇರಿ 18 ಮಂದಿಯನ್ನು ಉಗ್ರರೆಂದು ಘೋಷಿಸಿದ ಕೇಂದ್ರ ಸರ್ಕಾರ
ಹಾಗೇ ಕಂಟೇನ್​ಮೆಂಟ್​ ಝೋನ್​​ಗಳಲ್ಲಿ ಯಾವುದೇ ಅನ್​ಲಾಕ್​ ಇಲ್ಲ ಎಂಬುದನ್ನೂ ಹೇಳಿದೆ. ಉಳಿದಂತೆ ಎಲ್ಲ ಕಡೆಗಳಲ್ಲಿ ಆರ್ಥಿಕ ಚಟುವಟಿಕೆಗಳು ಮುಂದುವರಿಯಲಿವೆ. ಮೆಟ್ರೋ, ರೈಲ್ವೆ ನಿಲ್ದಾಣ, ಹೋಟೆಲ್​, ಧಾರ್ಮಿಕ ಸ್ಥಳಗಳಲ್ಲಿ ಜನರು ಗುಂಪುಗೂಡಬಹುದು. ಆದರೆ ಸಾಮಾಜಿಕ ಅಂತರ ನಿಯಮ, ಮಾಸ್ಕ್​ ಧರಿಸುವುದು ಕಡ್ಡಾಯ ಎಂದು ಗೃಹ ಇಲಾಖೆ ಇನ್ನೊಮ್ಮೆ ಎಚ್ಚರಿಕೆ ನೀಡಿದೆ.
ಸೆಪ್ಟೆಂಬರ್​ 30ರ ಮಾರ್ಗಸೂಚಿಯನ್ನೇ ಮುಂದುವರಿಸಲಾಗುವುದು. ಶಿಕ್ಷಣ ಸಂಸ್ಥೆಗಳನ್ನು ತೆರೆಯುವುದು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟ ನಿರ್ಧಾರ ಎಂದು ತಿಳಿಸಿದೆ.ಇದನ್ನೂ ಓದಿ:ಭಟ್ಕಳ​ ಸಹೋದರರು ಸೇರಿ 18 ಮಂದಿಯನ್ನು ಉಗ್ರರೆಂದು ಘೋಷಿಸಿದ ಕೇಂದ್ರ ಸರ್ಕಾರ
ಈ ಮಧ್ಯೆ ದೇಶದಲ್ಲಿ ಕರೊನಾ ಸೋಂಕಿನ ಪ್ರಮಾಣ ಸ್ವಲ್ಪ ಮಟ್ಟಿಗೆ ತಗ್ಗಿದೆ. ಕಳೆದ 24ಗಂಟೆಯಲ್ಲಿ 488ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 27,860 ಜನರು ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್​​ಚಾರ್ಜ್ ಆಗಿದ್ದಾರೆ. ಅಲ್ಲಿಗೆ ಸಕ್ರಿಯ ಪ್ರಕರಣಗಳು ಕೇವಲ 6,25,857 ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. (ಏಜೆನ್ಸೀಸ್​)
ಪೊಲೀಸ್​​ ಅಧಿಕಾರಿಯನ್ನು ಬಲಿ ಪಡೆದ ಕೋಳಿ: ದುರಂತ ಘಟನೆ ಹಿಂದಿದೆ ಶಾಕಿಂಗ್​ ಕಾರಣ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
