ತಿರುವನಂತಪುರಂ:ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸಿಕ್ಕ 30 ಕೆ.ಜಿ. ತೂಕದ ಚಿನ್ನದ ಪ್ರಕರಣ ದಿನೇದಿನೆ ಕಗ್ಗಂಟಾಗುತ್ತಿದೆ.ಪ್ರಕರಣವನ್ನು ಸಿಬಿಐನಂತಹ ಯಾವುದಾದರೂ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಕೇರಳದ ಕಾಂಗ್ರೆಸ್​ ಒತ್ತಾಯಿಸಿದೆ.ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ಈ ಸ್ಮಗ್ಲಿಂಗ್​ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್​ಐಎ)ಕ್ಕೆ ವಹಿಸಿದೆ.
ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿರುವ ಚಿನ್ನದ ಹಿಂದೆ ಮುಖ್ಯಮಂತ್ರಿ ಕಚೇರಿಯ ಕೈವಾಡವೂ ಇದೆ. ಸಿಎಂ ಪಿಣರಾಯಿ ವಿಜಯನ್​ ರಾಜೀನಾಮೆ ನೀಡಬೇಕು ಎಂದು ಕೇರಳದಲ್ಲಿ ಪ್ರತಿಪಕ್ಷಗಳು ಆಗ್ರಹ ಮಾಡಿದ್ದವು. ಅದಾದ ಬಳಿಕ ಪಿಣರಾಯಿ ವಿಜಯನ್​ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಗಳಿಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದರು.ಇದನ್ನೂ ಓದಿ:ಕರೊನಾ ಸೋಂಕಿನ ಬಗ್ಗೆ ಈಗ ಎಚ್ಚೆತ್ತುಕೊಂಡ ಪಾಕಿಸ್ತಾನ ಸರ್ಕಾರ; ಒಂದು ದಾಖಲೆಯನ್ನೂ ಮಾಡಿದೆ…
ಸಿಎಂ ಪತ್ರಕ್ಕೆ ಮಾನ್ಯತೆ ನೀಡಿ ಕೇರಳ ಸ್ಮಗ್ಲಿಂಗ್ ತನಿಖೆಯನ್ನು ಎನ್​ಐಎಗೆ ವಹಿಸಲಾಗಿದೆ. ರಾಷ್ಟ್ರದ ಭದ್ರತೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಕಳೆದವಾರ ಏರ್​ಪೋರ್ಟ್​ನಲ್ಲಿ ರಾಜತಾಂತ್ರಿಕ ಬ್ಯಾಗೇಜ್​​ನಲ್ಲಿ 30 ಕೆಜಿ ಚಿನ್ನ ಪತ್ತೆಯಾಗಿತ್ತು. ಇದು ತಿರುವನಂತಪುರಂನಲ್ಲಿರುವ ಯುಎಇ ಕಾನ್ಸುಲೇಟ್‌ ಕಚೇರಿಗೆ ಸೇರಿದ್ದು ಎಂಬುದು ಗೊತ್ತಾಗಿತ್ತು. (ಏಜೆನ್ಸೀಸ್​)
ಕುತೂಹಲ ಮೂಡಿಸುತ್ತಿದ್ದಾಳೆ ‘ಚಿನ್ನದ ರಾಣಿ’: ಐಎಎಸ್‌ ಅಧಿಕಾರಿ ತಲೆದಂಡ!

‘ವಿಕಾಸ್​ ದುಬೆ ಇದ್ದಿದ್ದು ಬಿಜೆಪಿಯಲ್ಲಲ್ಲ..ಅವನಿದ್ದಿದ್ದು.. ‘ ತಾಯಿ ಸರಳಾದೇವಿ ಬಾಯಿಬಿಟ್ಟ ಶಾಕಿಂಗ್​ ಸತ್ಯ ಇದು…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 1 =
Remember me
