ನವದೆಹಲಿ:ಮೈಕ್ರೋಸಾಫ್ಟ್​ ಕ್ಲೌಡ್​ ಸರ್ವೀಸ್​ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳ ವಿಮಾನ ಸೇವೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ.
ಅಮೆರಿಕ, ಫ್ರಾನ್ಸ್​, ಹಾಂಗ್​ಕಾಂಗ್​, ಆಸ್ಟ್ರೇಲಿಯಾ ಮತ್ತು ಭಾರತ ಸೇರಿ ಅನೇಕ ರಾಷ್ಟ್ರಗಳಲ್ಲಿ ವಿಮಾನ ಸೇವೆಗೆ ಅಡ್ಡಿ ಉಂಟಾಗಿದ್ದು, ಹಲವು ಏರ್​ಪೋರ್ಟ್​ನಲ್ಲಿ ಪ್ರಯಾಣಿಕರು ಪರದಾಟ ಅನುಭವಿಸಿದ್ದಾರೆ. ಏರ್​ಪೋರ್ಟ್​ಗಳಲ್ಲಿ ವಿಮಾನಗಳು ಟೇಕಾಫ್ ಸಹ ಆಗಿಲ್ಲ. ಅಲ್ಲದೆ, ಟಿಕೆಟ್​ ಬುಕ್ಕಿಂಗ್​ ಆಗದೇ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ.
ವಿಮಾನ ಸೇವೆ ಮಾತ್ರವಲ್ಲದೆ, ಷೇರು ಮಾರುಕಟ್ಟೆ, ಜಿಮೇಲ್​, ಅಮೇಜಾನ್​ ಹಾಗೂ ಬ್ಯಾಂಕಿಂಗ್​ ಕ್ಷೇತ್ರದ ಮೇಲೂ ಮೈಕ್ರೋಸಾಫ್ಟ್​ ಕ್ಲೌಡ್​ ಸವೀಸ್​ ಸಮಸ್ಯೆ ಪರಿಣಾಮ ಬೀರಿದೆ. ಅಮೆರಿಕಾದ್ಯಂತ 911 ವಿಮಾನ ಸೇವೆಗಳು ಸ್ಥಗಿತಗೊಂಡಿವೆ. ಲಂಡನ್​ನ ಷೇರು ಮಾರುಕಟ್ಟೆಯಲ್ಲೂ ವ್ಯತ್ಯಯವಾಗಿದೆ. ಆಸ್ಟ್ರೇಲಿಯಾದ ಐಟಿ ಕಂಪನಿಗಳಲ್ಲಿ ತಲ್ಲಣ ಉಂಟಾಗಿದೆ. ಮೈಕ್ರೋಸಾಫ್ಟ್​ ಆ್ಯಪ್​ಗಳ ಕಾರ್ಯ ಸ್ಥಗಿತಗೊಂಡಿದೆ.
ಸೇವೆಯಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಮೈಕ್ರೋಸಾಫ್ಟ್​ ತಕ್ಷಣ ಟ್ವೀಟ್​ ಮೂಲಕ ಸ್ಪಷ್ಟನೆ ನೀಡಿದ್ದು, ಶೀಘ್ರದಲ್ಲೇ ಸಮಸ್ಯೆ ಸರಿಪಡಿಸಲಾಗುವುದು ಎಂದು ಹೇಳಿದೆ. ಅಲ್ಲದೆ, ಸಾಫ್ಟ್​ವೇರ್​ ಬಳಕೆದಾರರು ಸಹಕರಿಸಲು ವಿನಂತಿಸಿದೆ.
We’re investigating an issue impacting users ability to access various Microsoft 365 apps and services. More info posted in the admin center under MO821132 and onhttps://t.co/W5Y8dAkjMk
— Microsoft 365 Status (@MSFT365Status)July 18, 2024

ನೋ ರನ್ನಿಂಗ್​, ನೋ ಮೆಡಿಸಿನ್…ಕೇವಲ 21 ದಿನದಲ್ಲಿ ತೂಕ ಇಳಿಕೆ! ಮಾಧವನ್ ಬಿಚ್ಚಿಟ್ಟ ಡಯಟ್​ ಸೀಕ್ರೆಟ್​ ಇದು

ಮದ್ವೆ ಆಮಂತ್ರಣ ಪತ್ರ ಹಿಡಿದು ಜೈಲಿನಲ್ಲಿರುವ ದರ್ಶನ್​ ಭೇಟಿಯಾದ ತರುಣ್! ಸೋನಾಲ್​ ಜತೆ ಯಾವಾಗ ಮದ್ವೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 7 =
Remember me
