ನವದೆಹಲಿ:ಮಧ್ಯದ ಸೀಟುಗಳನ್ನು ಖಾಲಿ ಬಿಟ್ಟು ವಿಮಾನದೊಳಗೆ ದೈಹಿಕ ಅಂತರ ಕಾಯ್ದುಕೊಳ್ಳಲು ಅವಕಾಶ ಮಾಡಿಕೊಡಬೇಕು. ಇಲ್ಲವೇ, ಮಧ್ಯದ ಸೀಟ್​ನಲ್ಲಿ ಕೂರುವ ಎಲ್ಲ ಪ್ರಯಾಣಿಕರಿಗೂ ಮಾಸ್ಕ್​ ಮತ್ತು ಶೀಲ್ಡ್​ ಅಲ್ಲದೆ, ಸಂಪೂರ್ಣ ಮೈಮುಚ್ಚುವ ರೀತಿಯ ಗೌನ್​ಗಳನ್ನು ಕೊಡಬೇಕು ಎಂದು ವಿಮಾನಯಾನ ಸಂಸ್ಥೆಗಳಿಗೆ ನಾಗರಿಕ ವಿಮಾನಯಾನ ಮಹಾಪ್ರಧಾನ ನಿರ್ದೇಶಕರು (ಡಿಜಿಸಿಎ) ನಿರ್ದೇಶನ ನೀಡಿದ್ದಾರೆ.
ಪ್ರಯಾಣಿಕರ ಒತ್ತಡ ಮತ್ತು ಸಂಖ್ಯೆ ಕಡಿಮೆಯಿದ್ದಲ್ಲಿ, ವಿಮಾನಯಾನ ಸಂಸ್ಥೆಗಳು ಸಾಧ್ಯವಾದಷ್ಟು ಮಧ್ಯದ ಸೀಟುಗಳು ಖಾಲಿ ಇರುವಂತೆ ನೋಡಿಕೊಳ್ಳಬೇಕು. ಒಂದೇ ಕುಟುಂಬದ ಸದಸ್ಯರಾಗಿದ್ದರೆ, ಮಧ್ಯದ ಸೀಟ್​ ಸೇರಿ ಮೂರು ಸೀಟ್​ಗಳನ್ನು ಭರ್ತಿ ಮಾಡಲು ಅಡ್ಡಿಯಿಲ್ಲ ಎಂದು ಡಿಜಿಸಿಎ ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ವಾರ ಮೊದಲೇ ಎಸ್​ಎಸ್​ಎಲ್​ಸಿ ಪರೀಕ್ಷಾರ್ಥಿಗಳ ಆರೋಗ್ಯ ತಪಾಸಣೆ
ಕ್ಯಾಬಿನ್​ ಅನ್ನು ಪದೇಪದೆ ಸ್ಯಾನಿಟೈಸ್​ ಮಾಡುವುದು, ಕ್ಯಾಬಿನ್​ನಲ್ಲಿನ ಗಾಳಿಯನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುವುದು, ಆರೋಗ್ಯದ ದೃಷ್ಟಿಯಿಂದ ಹೊರತುಪಡಿಸಿ ವಿಮಾನದಲ್ಲಿ ಆಹಾರ ಸೇವನೆ ಮತ್ತು ನೀರು ಸೇವನೆಗೆ ನಿರ್ಬಂಧಿಸುವ ಕೆಲಸ ನಿಯಮಗಳನ್ನು ಆದೇಶದಲ್ಲಿ ಪುನರುಚ್ಚರಿಸಲಾಗಿದೆ.
ಕೋವಿಡ್​-19 ಸಾಂಕ್ರಾಮಿಕ ಹಬ್ಬದಂತೆ ತಡೆಯಲು ದೈಹಿಕ ಅಂತರ ಕಾಯ್ದುಕೊಳ್ಳುವುದು ಅವಶ್ಯವಾಗಿದೆ. ಆದ್ದರಿಂದ, ವಿಮಾನಗಳಲ್ಲಿನ ಮಧ್ಯದ ಸೀಟುಗಳನ್ನು ಭರ್ತಿ ಮಾಡದೆ ಖಾಲಿ ಬಿಟ್ಟು, ದೈಹಿಕ ಅಂತರ ಕಾಯ್ದುಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಸುಪ್ರೀಂಕೋರ್ಟ್​ ಇತ್ತೀಚೆಗಿನ ತನ್ನ ಆದೇಶದಲ್ಲಿ ತಿಳಿಸಿತ್ತು. ಇದರ ಬೆನ್ನಲ್ಲೇ ಡಿಜಿಸಿಎ ಈ ಆದೇಶವನ್ನು ಜಾರಿಗೊಳಿಸಿದೆ.
ಪ್ರಿಯಕರನ ಹೆಸರು ‘ಕಚಡಾ ಲೋಫರ್’ ಎಂದು ಸೇವ್ ಮಾಡಿಕೊಂಡಿದ್ದ ನಟಿ ಚಂದನಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
