ನವದೆಹಲಿ:ಪಂಜಾಬ್​ನ ಹೊಷಿಯಾರ್​ಪುರ ಜಿಲ್ಲೆಯ ಜಾಲಂಧರ್​ ಬಳಿ ಭಾರತೀಯ ವಾಯುಪಡೆಯ ಯುದ್ಧವಿಮಾನ ಮಿಗ್​ 29 ಇಂಟರ್​ಸೆಪ್ಟರ್​ ಶುಕ್ರವಾರ ಬೆಳಗ್ಗೆ ಪತನಗೊಂಡಿದೆ. ಆದರೆ, ಪೈಲಟ್​ ಸುರಕ್ಷಿತವಾಗಿ ಹೊರಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವಿಮಾನವನ್ನು 1999ರ ಕಾರ್ಗಿಲ್​ ಯುದ್ಧದಲ್ಲಿ ಕಾರ್ಯಾಚರಣೆಗೆ ಬಳಸಲಾಗಿತ್ತು.ದೈನಂದಿನ ಕಸರತ್ತಿನ ವೇಳೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಇದನ್ನು ಗ್ರಹಿಸಿದ ಪೈಲಟ್​ ತಕ್ಷಣವೇ ವಿಮಾನದಿಂದ ಹೊರಹಾರಿ ಪ್ಯಾರಾಚೂಟ್​ ನೆರವಿನಿಂದ ಸುರಕ್ಷಿತವಾಗಿ ಕೆಳಗಿಳಿದರು ಎನ್ನಲಾಗಿದೆ. ಪೈಲಟ್​ ಇಳಿದಿದ್ದ ಸ್ಥಳಕ್ಕೆ ತಕ್ಷಣವೇ ಧಾವಿಸಿದ ವಾಯುಪಡೆ ಸಿಬ್ಬಂದಿ, ಅವರನ್ನು ರಕ್ಷಿಸಿ, ಹೆಲಿಕಾಪ್ಟರ್​ನಲ್ಲಿ ಆಸ್ಪತ್ರೆಗೆ ಸ್ಥಳಾಂತರಿಸಿದರು.ಅಪಘಾತಕ್ಕೆ ನಿಜವಾದ ಕಾರಣ ಏನು ಎಂಬುದನ್ನು ತನಿಖೆ ಮಾಡಲು ವಿಚಾರಣಾ ಸಮಿತಿಯನ್ನು ರಚಿಸಿರುವುದಾಗಿ ಭಾರತೀಯ ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ. (ಏಜನ್ಸೀಸ್)
ಬಾಕ್ಸಿಂಗ್​ನಲ್ಲಿ ಯುವತಿಗೆ ಎದುರಾಳಿಯಾಗಿದ್ಯಾರು? ಫಲಿತಾಂಶವೇನು ಗೊತ್ತೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 1 =
Remember me
