
ಪಣಜಿ:ಭಾರತೀಯ ನೌಕಾಪಡೆಯ ಮಿಗ್​-21ಕೆ ಯುದ್ಧ ವಿಮಾನವು ಬುಧವಾರ ಗೋವಾದ ಪಣಜಿ ಬಳಿಯ ಸಮುದ್ರದಲ್ಲಿ ಪತನವಾಗಿದ್ದು, ಅದೃಷ್ಟವಶಾತ್​ ಪೈಲಟ್​ ಅಪಾಯದಿಂದ ಪಾರಾಗಿದ್ದಾರೆ. ಸಾವಿನ ದವಡೆಯಿಂದ ಪೈಲಟ್​ ಪಾರಾದ ಆ ಕ್ಷಣ ಹೀಗಿತ್ತು…
‘ಎರಡು ಇಂಜಿನ್​ ಹೊಂದಿರುವ ಯುದ್ಧ ವಿಮಾನ ನಿತ್ಯದ ಕ್ರಮದಂತೆ ಹಾರಾಟ ನಡೆಸಿ ತನ್ನ ಬೇಸ್​ಗೆ ಹಿಂತಿರುಗುತ್ತಿತ್ತು. ಈ ಸಮಯದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಅಪಾಯದಿಂದ ಪಾರಾಗಲು ಪೈಲಟ್​ ತಮ್ಮನ್ನು ತಾವು ವಿಮಾನದಿಂದ ಇಜೆಕ್ಟ್ ಮಾಡಿಕೊಂಡಿದ್ದಾರೆ. ಕೂಡಲೇ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಿ ಪೈಲಟ್​​ನನ್ನು ರಕ್ಷಿಸಲಾಯಿತು’ ಎಂದು ನೌಕಾದಳ ತಿಳಿಸಿದೆ.
ಮಿಗ್​ ಯುದ್ಧ ವಿಮಾನಗಳಲ್ಲಿ ಪೈಲಟ್​ ಕೂರುವ ಕುರ್ಚಿಯ ಕೆಳಗೆ ರಾಕೆಟ್​ ಮೋಟರ್​ ಅಳವಡಿಸಲಾಗಿರುತ್ತದೆ. ಇಜೆಕ್ಟ್ ಬಟನ್​ ಒತ್ತಿದ ಕೂಡಲೇ ವಿಮಾನದ ಗಾಜು ತೆರೆದುಕೊಂಡು ಕುರ್ಚಿ ಜೋರಾಗಿ ಮೇಲಕ್ಕೆ ಚಿಮ್ಮುತ್ತದೆ. ಮೇಲಕ್ಕೆ ಚಿಮ್ಮುವಾಗ ಪೈಲಟ್​ ಮೂರ್ಛೆ ತಪ್ಪುವ ಅಪಾಯ ಇರುತ್ತದೆ. ಮೂರ್ಛೆ ತಪ್ಪಿದ ಪೈಲಟ್ ನೀರಿಗೆ ಬಿದ್ದರೆ ಉಸಿರುಗಟ್ಟುವ ಸಾಧ್ಯತೆ ಹೆಚ್ಚು. ಅದೃಷ್ಟವಷಾತ್​ ಪೈಲಟ್​ ಅಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿದ್ದಾರೆ ಎಂದು ನೌಕಾದಳ ವಿವರಿಸಿದೆ.
ವಿಮಾನ ಪತನಕ್ಕೆ ಕಾರಣ ಏನೆಂದು ತಿಳಿಯಲು ಬಿಒಐ (ಬೋರ್ಡ್​ ಆಫ್​ ಇನ್ವೆಸ್ಟಿಗೇಶನ್​)ಗೆ ತನಿಖೆ ನಡೆಸುಂತೆ ನೌಕಾದಳ ಸೂಚಿಸಿದೆ. ಜಗತ್ತಿನಲ್ಲಿ ಮಿಗ್​-21ಕೆ ಯುದ್ಧ ವಿಮಾನಗಳನ್ನು ಬಳಸುತ್ತಿರುವ ಏಕೈಕ ರಾಷ್ಟ್ರ ಭಾರತ. ರಷ್ಯಾದಿಂದ ಐಎನ್​ಎಸ್​ ವಿಕ್ರಮಾದಿತ್ಯವನ್ನು (ಮೂಲ ಹೆಸರು ಆಡ್ಮಿರಲ್​ ಗೋರ್ಶ್ಕೋವ್​) ಖರೀದಿಸುವಾಗ ಜತೆಗೆ ಖರೀದಿಸಲಾಗಿತ್ತು.
ಈ ಹಿಂದೆಯೂ ಅನೇಕ ಮಿಗ್​ ವಿಮಾನಗಳು ಪತನವಾಗಿವೆ. ಅಪಘಾತ ಸರಣಿಗಳಿಂದಾಗಿ ಮಿಗ್ ವಿಮಾನಗಳಿಗೆ ‘ಫ್ಲಯಿಂಗ್ ಕಾಫಿನ್​’ ಎಂದು ಕರೆಯಲಾಗುತ್ತೆ. ಮಿಗ್ ವಿಮಾನಗಳ ಬದಲಾಗಿ ಬೇರೆ ಯುದ್ಧ ವಿಮಾನಗಳನ್ನು ಖರೀದಿಸಲು ಸೇನೆ ಉದ್ದೇಶಿಸಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + twenty =
Remember me
