ಕಟಕ್​: ಲಾಕ್​ಡೌನ್​ ವಲಸೆ ಕಾರ್ಮಿಕರನ್ನು ಕಾಡಿದಷ್ಟು ಬಹುಶಃ ಬೇರೆಯವನ್ನು ಕಾಡಲಿಲ್ಲ. ಅವರು ತಮ್ಮ ಸ್ವಂತ ಊರಿಗೆ ತೆರಳಲು ಪಟ್ಟ ಕಷ್ಟ ಮಾತ್ರ ಹೇಳತೀರದು.
ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ದೂರದ ಒಡಿಶಾ ಮೂಲದ ಮೂವರು ಬೈಸಿಕಲ್​ ಮೂಲಕ ತಮ್ಮ ಸ್ವಗ್ರಾಮ ತಲುಪಿದ್ದಾರೆ.ಚಂದನ್​ ಹಾಗೂ ಅವರ ಪತ್ನಿ ಮತ್ತೊಂದು ಬೈಸಿಕಲ್​ನಲ್ಲಿ ಚಂದನ್​ ಸ್ನೇಹಿತ ಜಿನಾ ಕಟಕ್​ ತಲುಪಿದರು. ಕಟಕ್​ನಲ್ಲಿ ಬೈಸಿಕಲ್​ ತುಳಿಯುತ್ತಿರುವುದನ್ನು ನೋಡಿದ ಸ್ಥಳೀಯರು ಸುರಕ್ಷಿತವಾಗಿ ಟ್ರಕ್​ ಮೂಲಕ ಸ್ವಗ್ರಾಮ ತಲುಪುವಂತೆ ಮಾಡಿದ್ದಾರೆ.
ಇದನ್ನೂ ಓದಿಬುದ್ಧಿವಾದ ಹೇಳಿದ್ದಕ್ಕೆ ಹೆತ್ತವರನ್ನೇ ಕೊಂದ ಮಗ
ಚಂದನ್​ ಮತ್ತು ಟಪಾನ್​ ಜಿನಾ ಒಡಿಶಾದ ಭದ್ರಾಕ್​ ಜಿಲ್ಲೆಯರು . ಚಂದನ್​ ವಿವಾಹವಾಗಿದ್ದರು. ಮೂವರು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಕರೊನಾ ವೈರಸ್​ ಹರಡುತ್ತಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲಾಕ್​ಡೌನ್​ ಜಾರಿಗೊಳಿಸಿತು. ಕೆಲಸ ಇಲ್ಲದ ಪರಿಣಾಮ ತಮ್ಮ ಸ್ವಗ್ರಾಮಕ್ಕೆ ತೆರಳಲು ನಿರ್ಧರಿಸಿದರು. ಆದರೆ ಇವರ ಬಳಿ ಹಣ ಇರಲಿಲ್ಲ. ಕೊನೆಗೆ ಬೈಸಿಕಲ್​ ಖರೀದಿಸಿ ಅದರಲ್ಲಿ ಸ್ವಗ್ರಾಮ ತಲುಪಲು ನಿರ್ಧರಿಸಿದರು.
ಚಂದನ್​ ಬೈಸಿಕಲ್​ನಲ್ಲಿ ಪತ್ನಿಯನ್ನು ಕರೆದುಕೊಂಡು ತೆರಳಲು ಮುಂದಾದರು. ಎರಡು ಬೈಸಿಕಲ್​ನಲ್ಲಿ ಮೂವರು ಬೆಂಗಳೂರು ಬಿಟ್ಟು ತೆರಳಿದರು. ಕಟಕ್​ನಲ್ಲಿ ಬೈಸಿಕಲ್​ ತುಳಿಯುತ್ತಿದ್ದ ಚಂದನ್​ ಹಾಗೂ ಜಿನಾ ಅವರನ್ನು ನೋಡಿದ ಸ್ಥಳೀಯರು ಅವರಿಗೆ ಆಹಾರ ನೀಡಿ ನಂತರ ಟ್ರಕ್​ ಮೂಲಕ ಸ್ವಗ್ರಾಮಕ್ಕೆ ಕಳುಹಿಸಿಕೊಟ್ಟರು. (ಏಜೆನ್ಸೀಸ್​)
ಸತ್ತ ತಾಯಿಯ ಎಬ್ಬಿಸುತ್ತಿದ್ದ ಮಗುವಿಗೆ ಶಾರೂಖ್​ ಸಹಾಯ …

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + eleven =
Remember me
