ನವದೆಹಲಿ:ತಮ್ಮ ಊರುಗಳಿಗೆ ತೆರಳಲು ಕಾಲ್ನಡಿಗೆಯಲ್ಲಿ ಹೊರಟಿದ್ದ ವಲಸೆ ಕಾರ್ಮಿಕರು ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಜತೆ ಮಾತನಾಡಿದರು ಎಂಬ ಕಾರಣಕ್ಕೆ ಬಂಧಿಸಲಾಗಿದೆ ಎಂದು ಕಾಂಗ್ರೆಸ್​ ಆರೋಪಿಸಿದೆ.
ನವದೆಹಲಿಯ ಸುಖದೇವ್​ ವಿಹಾರ್​ ಮೇಲ್ಸೇತುವೆ ಮೇಲೆ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ಸಾಗುತ್ತಿದ್ದರು. ಇದನ್ನು ಗಮನಿಸಿದ ರಾಹುಲ್​ ಗಾಂಧಿ, ಅವರೊಂದಿಗೆ ಮಾತನಾಡಿ ಕ್ಷೇಮ ಸಮಾಚಾರ ವಿಚಾರಿಸಿದ್ದಲ್ಲದೆ, ಅವರ ಅಹವಾಲುಗಳನ್ನು ಕೇಳಿಕೊಂಡರು. ಇದು ಕೇಂದ್ರ ಸರ್ಕಾರವನ್ನು ಕೆರಳಿಸಿದೆ. ಈ ಹಿನ್ನೆಲೆಯಲ್ಲಿ ಅವರೆಲ್ಲರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಕಾಂಗ್ರೆಸ್​ ಕಾರ್ಯಕರ್ತರು ಆರೋಪಿಸಿದ್ದಾರೆ.
ಇದನ್ನೂ ಓದಿ:ಶ್ರಮಿಕ್ ರೈಲಿನಲ್ಲಿ ಬಂದ 1241 ವಲಸಿಗರು
ರಾಹುಲ್​ ಗಾಂಧಿ ಜತೆ ಅವರೆಲ್ಲರೂ ಮಾತನಾಡಿದ ಬಳಿಕ ಅವರವರ ಊರುಗಳಿಗೆ ಕಳುಹಿಸಿಕೊಡಲು ಕಾಂಗ್ರೆಸ್​ ವತಿಯಿಂದ ವಾಹನಗಳನ್ನು ವ್ಯವಸ್ಥೆ ಮಾಡಲಾಯಿತು. ಆ ವಾಹನಗಳು ಸ್ಥಳಕ್ಕೆ ಬಂದಾಗ, ಅವನ್ನು ಹತ್ತದಂತೆ ವಲಸೆ ಕಾರ್ಮಿಕರನ್ನು ಪೊಲೀಸರು ತಡೆದರು ಎಂದು ದೂರಿದ್ದಾರೆ.
ಆದರೆ, ಲಾಕ್​ಡೌನ್​ ನಿಯಮ ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಪಾಲಿಸುವ ಸಲುವಾಗಿ ಸಾಮೂಹಿಕವಾಗಿ ವಾಹನದಲ್ಲಿ ಪ್ರಯಾಣಿಸದಂತೆ ಇವರೆಲ್ಲರನ್ನೂ ತಡೆದಿರುವುದಾಗಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದಲ್ಲಿ ಸಕ್ರಿಯ ಕರೊನಾ ಕೇಸ್​ಗಳು 559, ಮರಣ ಸಂಖ್ಯೆ 36; 13 ಮಂದಿ ಐಸಿಯುವಿನಲ್ಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
