ಝಾನ್ಸಿ:38 ವರ್ಷ ವಯಸ್ಸಿನ ವಲಸೆ ಕಾರ್ಮಿಕರೊಬ್ಬರ ಮೃತದೇಹವು ಉತ್ತರ ಪ್ರದೇಶದ ಝಾನ್ಸಿ ರೈಲ್ವೆ ನಿಲ್ದಾಣ ರೈಲೊಂದರ ಟಾಯ್ಲೆಟ್​​ನಲ್ಲಿ ಗುರುವಾರ ಸಂಜೆ ಪತ್ತೆಯಾಗಿದೆ. ಮೂರು ದಿನಗಳವರೆಗೆ ಮೃತದೇಹ ರೈಲಿನಲ್ಲೇ ಇತ್ತು ಎನ್ನಲಾಗಿದ್ದು, ರೈಲು ಶುಚಿಗೊಳಿಸುವ ಸಿಬ್ಬಂದಿಯಿಂದ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ:2ನೇ ಮದುವೆಯನ್ನು ಪ್ರಶ್ನಿಸಿದ ಪತ್ನಿ-ಮಗಳನ್ನೇ ಹಿಗ್ಗಾಮುಗ್ಗಾ ಥಳಿಸಿದ ಭೂಪ!
ಮೃತ ವ್ಯಕ್ತಿಯನ್ನು ಪೂರ್ವ ಉತ್ತರ ಪ್ರದೇಶದ ಬಾಸ್ತಿ ಜಿಲ್ಲೆಯ ನಿವಾಸಿ ಮೋಹನ್ ಲಾಲ್​ ಶರ್ಮ ಎಂದು ಗುರುತಿಸಲಾಗಿದೆ. ಮುಂಬೈ ದಿನಗೂಲಿ ನೌಕರನಾಗಿದ್ದ ಶರ್ಮ ಲಾಕ್​ಡೌನ್​ನಿಂದ ಕೆಲಸವಿಲ್ಲದೇ ಮುಂಬೈ ತೊರೆದಿದ್ದ ಎಂದು ತಿಳಿದುಬಂದಿದೆ.
ಇತರೆ ಕಾರ್ಮಿಕರೊಂದಿಗೆ ಬಾಸ್ತಿಯಿಂದ 70 ಕಿ.ಮೀ ದೂರದಲ್ಲಿರುವ ಗೋರಖ್​ಪುರ ತಲುಪಲು ಜಿಲ್ಲಾಡಳಿತ ಕಳಹಿಸಿದ್ದ ಟ್ರೈನ್​ನಲ್ಲಿ ತವರಿಗೆ ಮರಳುತ್ತಿದ್ದರು. ಗೋರಖ್​ಪುರವೇ ಅಂತಿಮ ನಿಲ್ದಾಣವಾಗಿತ್ತಾ ಎಂಬುದರ ಬಗ್ಗೆ ಇನ್ನು ಸ್ಪಷ್ಟವಿಲ್ಲ. ಶರ್ಮ ಮೇ 23ರಂದು ಹೇಗೋ ಝಾನ್ಸಿ ತಲುಪಿದ್ದ. ಮತ್ತೆ ಗೋರಖ್​ಪುರಕ್ಕೆ ಹೋಗಿದ್ದ ಟ್ರೈನ್ ಬುಧವಾರ​ ಮರಳಿ ಝಾನ್ಸಿಗೆ ಬಂದಿತ್ತು. ಗುರುವಾರ ಟ್ರೈನ್​ ಶುಚಿಗೊಳಿಸುವಾಗ ಶರ್ಮ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ:ಬಿಎಸ್​ವೈ ನಮ್ಮ ಸಿಎಂ ಅಷ್ಟೇ, ನನ್ನ ನಾಯಕರು ವಾಜಪೇಯಿ, ಪ್ರಧಾನಿ ಮೋದಿ: ಬಸನಗೌಡ ಪಾಟೀಲ್​ ಯತ್ನಾಳ್
ಕೆಲಸವಿಲ್ಲದೇ ಆತ ಊರಿಗೆ ಮರಳುತ್ತಿದ್ದ ಎಂಬುದನ್ನು ಊರಿನ ಮುಖ್ಯಸ್ಥ ಮಾಹಿತಿ ನೀಡಿದ್ದಾರೆ. ಶವವನ್ನು ಪರೀಕ್ಷೆ ನಡೆಸಿ ಕರೊನಾ ವೈರಸ್​ ಸೋಂಕು ಇಲ್ಲದಿರುವುದನ್ನು ದೃಢಪಡಿಸಿಕೊಂಡು ಶವವವನ್ನು ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಳೆದ ಎರಡು ತಿಂಗಳಿಂದ ಸುಮಾರು 20 ಲಕ್ಷ ವಲಸೆ ಕಾರ್ಮಿಕರು ವಾಪಸ್ಸಾಗಿದ್ದು, ಅವರ ಆರೋಗ್ಯ ತಪಾಸಣೆಯೇ ಒಂದು ಸವಾಗಿದೆ.(ಏಜೆನ್ಸೀಸ್​)
ಗಡಿಯಲ್ಲಿ ಶಾಂತಿ ಕಾಯ್ದುಕೊಳ್ಳಲು ಬದ್ಧ: ಚೀನಾದ ಮೊದಲ ಪ್ರತಿಕ್ರಿಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + six =
Remember me
