ನವದೆಹಲಿ:ಕರೊನಾ ವೈರಸ್​ ನಿಯಂತ್ರಣಕ್ಕಾಗಿ ಇಡೀ ದೇಶವನ್ನೇ ಲಾಕ್​ಡೌನ್ ಮಾಡಲಾಗಿದೆ. ಹೀಗೆ ಲಾಕ್​ಡೌನ್ ಆಗಿದ್ದೇ ಆಗಿದ್ದು ಅನೇಕರಿಗೆ ತೊಂದರೆಯಾಗಿದೆ. ಅದರಲ್ಲೂ ಹೊಟ್ಟೆಪಾಡಿಗಾಗಿ ತಮ್ಮ ಸ್ವಂತ ಊರು ಬಿಟ್ಟು ಬೇರೆ ಕಡೆ ಹೋಗಿ ಉಳಿದುಕೊಂಡಿದ್ದ ವಲಸೆ ಕಾರ್ಮಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಮಾರ್ಚ್​ 24ರ ಮಧ್ಯರಾತ್ರಿ ಲಾಕ್​ಡೌನ್ ಆದಾಗಿನಿಂದಲೂ ದೇಶದ ವಿವಿಧ ವಲಸೆ ಕಾರ್ಮಿಕರು ಗುಂಪುಗುಂಪಾಗಿ ನಡೆದುಕೊಂಡೇ ತಮ್ಮ ಸ್ವಂತ ಊರಿಗೆ ಹೊರಟಿದ್ದಾರೆ. ಹಾಗೇ ಒಂದಷ್ಟು ಕಡೆ ಸಿಕ್ಕ ವಾಹನಗಳನ್ನು ಹತ್ತಿಕೊಂಡು ತೆರಳುತ್ತಿದ್ದಾರೆ.
ಲಾಕ್​ಡೌನ್​ ಆಗಿ ಮೂರು ದಿನವಾದರೂ ವಲಸೆ ಕಾರ್ಮಿಕರ ಸಮಸ್ಯೆ ಬಗೆಹರಿದಿಲ್ಲ. ಶನಿವಾರ ದೆಹಲಿಯ ಆನಂದ್​ ವಿಹಾರ್​ ಬಸ್​ ಟರ್ಮಿನಲ್​ ಅಂತೂ ಈ ಕೆಲಸಗಾರರಿಂದಲೇ ತುಂಬಿಹೋಗಿತ್ತು. ಸ್ವಂತ ಊರುಗಳಿಗೆ ತೆರಳಲು ಇಲ್ಲಿಗೆ ಅಪಾರಸಂಖ್ಯೆಯಲ್ಲಿ ವಲಸಿಗರು ಆಗಮಿಸಿದ್ದರು.
ತಮ್ಮ ಊರುಗಳಿಗೆ ತೆರಳಲು ಬಸ್​ ಸಿಗಬಹುದೇನೋ ಎಂಬ ಆಸೆಯಿಂದ ಆಗಮಿಸಿದ್ದ ದಿನಗೂಲಿ ಕೆಲಸಗಾರರು, ವಲಸೆ ಕಾರ್ಮಿಕರಿಗೆ ಒಂದೆಡೆ ಕರೊನಾ ವೈರಸ್ ಭಯವಾದರೆ, ಮತ್ತೊಂದೆಡೆ ಊರು ತಲುಪಿಕೊಳ್ಳುವ ತವಕ. ಅಲ್ಲಿಗೆ ಗುಂಪು ಸೇರಲು ಅವಕಾಶ ಕೊಡಬಾರದು ಎಂಬ ಸರ್ಕಾರದ ಆದೇಶ ಸಂಪೂರ್ಣ ಉಲ್ಲಂಘನೆಯಾದಂತಾಗಿದೆ.
ಮಹಿಳೆಯರು, ಮಕ್ಕಳು, ವೃದ್ಧರು ಸೇರಿ ಅನೇಕರು ತಮ್ಮ ಚೀಲಗಳೊಂದಿಗೆ, ಮುಖಕ್ಕೆ ಮಾಸ್ಕ್​ ಹಾಕಿಕೊಂಡು ಆನಂದ್​ ವಿಹಾರ್​ ಅಂತಾರಾಜ್ಯ ಬಸ್​ ಟರ್ಮಿನಲ್​ಗೆ ಆಗಮಿಸಿದ್ದರು. ಬಸ್​ಗಾಗಿ ಕಾಯುತ್ತಿದ್ದರು. ಇಂತಹ ವಲಸೆ ಕಾರ್ಮಿಕರಿಗಾಗಿ ಉತ್ತರ ಪ್ರದೇಶ ಸರ್ಕಾರ ಸುಮಾರು 1000 ಬಸ್​​ಗಳ ವ್ಯವಸ್ಥೆ ಮಾಡಿದೆ. (ಏಜೆನ್ಸೀಸ್​)
#WATCHMigrant workers in very large numbers at Delhi's Anand Vihar bus terminal, to board buses to their respective home towns and villagespic.twitter.com/4nXZ1D1UNn
— ANI (@ANI)March 28, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + one =
Remember me
