ವಿವಿಧ ರಾಜ್ಯಗಳಲ್ಲಿದ್ದ ವಲಸೆ ಕಾರ್ವಿುಕರು ತಮ್ಮ ರಾಜ್ಯಗಳಿಗೆ ಮರಳುತ್ತಿರುವುದು ಹೊಸ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಛತ್ತೀಸ್​ಗಢಕ್ಕೆ ಮರಳಿದ 14 ವಲಸೆ ಕಾರ್ವಿುಕರನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದ್ದು ಅವರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ. ಕರ್ನಾಟಕ ಮತ್ತು ರಾಜಸ್ಥಾನಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಅವರೆಲ್ಲರೂ ಅಂತಾರಾಜ್ಯ ಗಡಿ ದಾಟಿ ಬಂದವರು. ಛತ್ತೀಸ್​ಗಢದಲ್ಲಿ ವಲಸೆ ಕಾರ್ವಿುಕರಲ್ಲಿ ಸೋಂಕು ಕಂಡು ಬಂದಿದ್ದು ರೋಗಿಗಳ ಸಂಖ್ಯೆ ಒಮ್ಮೆಲೆ ಏರಲು ಕಾರಣವಾಗಿದೆ.
ಹಲವು ರಾಜ್ಯಗಳಿಗೆ ಕಳವಳ:ಗುಜರಾತ್​ನಿಂದ ಅಕ್ರಮವಾಗಿ ಬರುತ್ತಿರುವ ವಲಸೆ ಕಾರ್ವಿುಕರಿಂದಾಗಿ ರಾಜಸ್ಥಾನದಲ್ಲಿ ಸೋಂಕು ಹರಡುವ ಅಪಾಯ ಹೆಚ್ಚಾಗಿದೆ.ದುಂಗರ್​ಪುರ ಗ್ರಾಮದ ನಿವಾಸಿಯೊಬ್ಬನಿಗೆ ಸೋಂಕು ತಗಲಿದ್ದು, ಬುಡಕಟ್ಟು ಜನರೇ ಹೆಚ್ಚಿರುವ ಜಿಲ್ಲೆಯಲ್ಲಿ ದೃಢಪಟ್ಟ ಆರನೇ ಪ್ರಕರಣ ಇದಾಗಿದೆ. ಈ ವ್ಯಕ್ತಿ ಏಪ್ರಿಲ್ 17ರಂದು ಗಡಿ ದಾಟಿ ಬಂದಿದ್ದ. ಅದನ್ನು ಕೆಲವು ಸ್ಥಳೀಯರು ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರು. ಆತನನ್ನು ಏಪ್ರಿಲ್ 23ರಂದು ಪತ್ತೆ ಹಚ್ಚಿ ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಆತನ ಮೊದಲ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು ಭಾನುವಾರದ ಎರಡನೇ ವರದಿ ಪಾಸಿಟಿವ್ ಆಗಿದೆ. ಈ ಹಿನ್ನೆಲೆಯಲ್ಲಿ ಇಡೀ ಗ್ರಾಮವನ್ನು ಸೀಲ್​ಡೌನ್ ಮಾಡಲಾಗಿದೆ.
ಇದನ್ನೂ ಓದಿ:ಚೆನ್ನೈನ ಈ ಹಣ್ಣು ಮಾರುಕಟ್ಟೆ ಈಗ ಭಯ ಹುಟ್ಟಿಸುತ್ತಿರುವುದೇಕೆ?
ರಾಜ್ಯಗಳ ಕ್ರಮ:ವಲಸೆ ಕಾರ್ವಿುಕರ ಮರಳುವಿಕೆಯಿಂದ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ವಿವಿಧ ರಾಜ್ಯಗಳು ನಾನಾ ಬಗೆಯ ಕ್ರಮಗಳನ್ನು ಕೈಗೊಳ್ಳುತ್ತಿವೆ.ಮಹಾರಾಷ್ಟ್ರ:ರಾಜ್ಯದಿಂದ ಹೊರಹೋಗಬಯಸುವ ವಲಸೆ ಕಾರ್ವಿುಕರು ತಲಾ 25ರ ಗುಂಪಿನಲ್ಲಿ ನೋಂದಣಿ ಅರ್ಜಿ ಸಲ್ಲಿಸಬೇಕು. ವೈದ್ಯಕೀಯ ಪ್ರಮಾಣಪತ್ರವನ್ನೂ ನೀಡಬೇಕು.ರಾಜಸ್ಥಾನ:ವಲಸಿಗರಿಗಾಗಿ ಹೆಲ್ಪ್​ಲೈನ್ ಸ್ಥಾಪಿಸಿದ ಮೊದಲ ರಾಜ್ಯ. ಒಟ್ಟು 10 ಲಕ್ಷ ಕರೆಗಳು ಬಂದಿವೆ. ಮಧ್ಯಪ್ರದೇಶ ಮತ್ತು ಛತ್ತೀಸ್​ಗಢದ ಸರ್ಕಾರಿ ಬಸ್​ಗಳನ್ನು ಹತ್ತುವ ಮುನ್ನ 15 ಚೆಕ್​ಪೋಸ್ಟ್​ಗಳಲ್ಲಿ ತಪಾಸಣೆ.
ಇದನ್ನೂ ಓದಿ:VIDEO: ಸಂಸದೆ ಶೋಭಾ ಕರಂದ್ಲಾಜೆಗೆ ಗಲ್ಫ್ ರಾಷ್ಟ್ರಗಳಿಂದ ಜೀವ ಬೆದರಿಕೆ ಕರೆ!
ಗುಜರಾತ್​:ತವರಿಗೆ ಮರಳಲು ಬಯಸುವ ವಲಸೆ ಕಾರ್ವಿುಕರು ಪೋರ್ಟಲ್​ನಲ್ಲಿ ನೋಂದಾಯಿಸಬೇಕು. ವೈದ್ಯಕೀಯ ಸರ್ಟಿಫಿಕೆಟ್ ಸಲ್ಲಿಕೆ ಕಡ್ಡಾಯ. ರೈಲು/ಬಸ್ ನಿಲ್ದಾಣಗಳಲ್ಲಿ ದೇಹದ ಉಷ್ಣತೆ ಪರೀಕ್ಷೆ. ಸೋಂಕಿನ ಲಕ್ಷಣವಿರುವವರಿಗೆ ಪ್ರಯಾಣಕ್ಕೆ ಅನುಮತಿ ನಿರಾಕರಣೆ.ಒಡಿಶಾ:ವಾಪಸ್ ಹೋಗಬಯಸುವ ವ್ಯಕ್ತಿಯ ತವರು ರಾಜ್ಯದ ಅನುಮತಿಯನ್ನು ಮೊದಲು ಪಡೆಯಲಾಗುತ್ತದೆ. ಆರೋಗ್ಯ ತಪಾಸಣೆ ಕಡ್ಡಾಯ.ಗೋವಾ:ರಾಜ್ಯ ಪ್ರವೇಶಿಸಿದ ಪ್ರತಿಯೊಬ್ಬರಿಗೆ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್. ಗೋವಾದ ನಿವಾಸಿಯೆನ್ನುವುದಕ್ಕೆ ವಿಳಾಸದ ಆಧಾರ ಒದಗಿಸುವವರಿಗೆ ಕ್ವಾರಂಟೈನ್​ಗೆ ಉಚಿತ ಸೌಲಭ್ಯ. ಗೋವಾಯೇತರ ಜನರಿಗೆ ದೈನಿಕ 2,500 ರೂಪಾಯಿ ಶುಲ್ಕ.
ಇದನ್ನೂ ಓದಿ:ಪೆಟ್ರೋಲ್​, ಡೀಸೆಲ್​ಗಳನ್ನೂ ಜಿಎಸ್​ಟಿ ವ್ಯಾಪ್ತಿಗೆ ತನ್ನಿ: ಅಸೋಚಾಮ್ ಮನವಿ
ತೆಲಂಗಾಣ:ಚೆಕ್​ಪಾಯಿಂಟ್​ಗಳಲ್ಲಿ ಆರೋಗ್ಯ ತಂಡಗಳಿಂದ ತಪಾಸಣೆ. ವಾಪಸ್ ಹೋಗುವವರು. ಕೆಂಪು ವಲಯದಲ್ಲಿ ವಾಸಿಸುತ್ತಿದ್ದರೆ ಅದನ್ನು ನಮೂದಿಸುವುದು ಕಡ್ಡಾಯ.ಕೇರಳ:ರೈಲು ಮೂಲಕ ಪ್ರಯಾಣಿಸುವ ವಲಸಿಗರ ತಪಾಸಣೆಗೆ ಕೌಂಟರ್​ಗಳ ಸ್ಥಾಪನೆ. ಜ್ವರದಂಥ ಲಕ್ಷಣವಿರುವವರ ಪ್ರಯಾಣಕ್ಕೆ ಅನುಮತಿ ನಿರಾಕರಣೆ. ಇತರ ರಾಜ್ಯಗಳ ಕೇರಳಿಗರ ಪ್ರಯಾಣಕ್ಕೆ ಮಾತ್ರ ಸದ್ಯ ಅವಕಾಶ.ಪಶ್ಚಿಮ ಬಂಗಾಳ:ರಾಜ್ಯಕ್ಕೆ ವಾಪಸ್ ಬಂದ ಎಲ್ಲರನ್ನು 14 ದಿನಗಳ ಸಾಂಸ್ಥಿಕ ಕ್ವಾರಂಟೈನ್​ಗೆ ಒಳಪಡಿಸಲಾಗುವುದು.
ಚೆನ್ನೈನ ಈ ಹಣ್ಣು ಮಾರುಕಟ್ಟೆ ಈಗ ಭಯ ಹುಟ್ಟಿಸುತ್ತಿರುವುದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
