ನವದೆಹಲಿ:ಕರೊನಾ ಕಾಲಮಾನದಲ್ಲಿ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾದವರೆಂದರೆ ವಲಸೆ ಕಾರ್ಮಿಕರು. ವಿವಿಧ ರಾಜ್ಯಗಳಿಂದ ಅದರಲ್ಲೂ ಮುಖ್ಯವಾಗಿ ಉತ್ತರಭಾರತದಿಂದ ವಿವಿಧೆಡೆ ವಲಸೆ ತೆರಳಿದ್ದವರು ಉದ್ಯೋಗ, ಆದಾಯವನ್ನೆಲ್ಲ ಕಳೆದುಕೊಂಡು ಕಾಲ್ನಡಿಗೆಯಲ್ಲಿ ಊರು ತಲುಪವಂತಾಯಿತು.
ವಲಸೆ ಕಾರ್ಮಿಕರಲ್ಲಿ ಬಿಹಾರ, ಉತ್ತರಪ್ರದೇಶದ ಜನರೇ ಹೆಚ್ಚಾಗಿದ್ದರು. ಅದರಲ್ಲೂ ಉದ್ಯೋಗ ಅರಸಿ ತೆರಳಿದವರನ್ನು ಕರೆಯಿಸಿಕೊಳ್ಳಲು ಬಿಹಾರ ಅಷ್ಟೊಂದು ಆಸಕ್ತಿ ತೋರಲಿಲ್ಲ ಎಂಬ ಆರೋಪವೂ ಇದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಲಸೆ ಕಾರ್ಮಿಕರ ವಿಚಾರವೇ ಮುಖ್ಯವಾಗಲಿದೆ ಜತೆಗೆ ಇವರೇ ನಿರ್ಣಾಯಕರಾಗಲಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಇದನ್ನೂ ಓದಿ;ಸಾಮೂಹಿಕ ಪ್ರಾರ್ಥನೆ ಬಂದ್​, ಪಾಲಕರಿಗೂ ನಿರ್ಬಂಧ, ಮನೆಯೂಟ ಕಡ್ಡಾಯ… ಶಾಲಾರಂಭಕ್ಕೆ ಹೀಗಿರಲಿದೆಯೇ ಮಾರ್ಗಸೂಚಿ?
ರಾಷ್ಟ್ರೀಯ ಲೋಕ ಸಮತಾವಾದಿ ಪಕ್ಷದ ಅಧ್ಯಕ್ಷ ಹಾಗೂ ಕೇಂದ್ರದ ಮಾಜಿ ಸಚಿವ ಉಪೇಂದ್ರ ಖುಷ್ವಾಹ, ವಲಸೆ ಕಾರ್ಮಿಕರ ವಿಚಾರದ ಮೇಲೆ ಮುಂದಿನ ಚುನಾವಣೆ ನಡೆಯಲಿದೆ ಎಂದು ಹೇಳಿದ್ದಾರೆ. ಸಿಎಂ ನಿತಿಶ್​ಕುಮಾರ್​ ವಲಸೆ ಕಾರ್ಮಿಕರನ್ನು ಇಷ್ಟವಿಲ್ಲದೇ ಬರಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬೇರೆಡೆ ಇರುವ ರಾಜ್ಯದ ಕಾರ್ಮಿಕರಿಗೆ ತಲಾ 10 ಸಾವಿರ ರೂ.ಗಳನ್ನು ನೀಡಿದ್ದರೆ, ಅವರು ಇಲ್ಲಿಗೆ ಬರುವ ಅಗತ್ಯವೇ ಎದುರಾಗುತ್ತಿರಲಿಲ್ಲ. ಅವರನ್ನು ಕರೆತಂದು ಕ್ವಾರಂಟೈನ್​ ಮಾಡುವ ಖರ್ಚನ್ನೇ ನೀಡಿದ್ದರೆ ಆಗುತ್ತಿತ್ತು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಷ್ಟಕ್ಕೂ ತಮ್ಮೂರಿಗೆ ಬರುವ ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ.
ಇದನ್ನೂ ಓದಿ;ಭಾರತಕ್ಕೂ ಬಂದಿದೆ ‘ಬಾಳೆ ಕರೊನಾ’, ಫಾರಂ​ ಕ್ವಾರಂಟೈನ್​ವೊಂದೇ ಪರಿಹಾರ…!
ರಾಜ್ಯದ ಕ್ವಾರಂಟೈನ್​ ಕೇಂದ್ರಗಳಲ್ಲಿ ಅವರನ್ನು ಕುರಿಗಂತೆ ತುಂಬಲಾಗಿತ್ತು. ವ್ಯಕ್ತಿಗತ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿಲ್ಲ ಎಂದು ಉಪೇಂದ್ರ ದೂರಿದ್ದಾರೆ.243 ಸದಸ್ಯ ಬಲದ ಬಿಹಾರ ವಿಧಾನಸಭೆಯ ಅವಧಿ ನವೆಂಬರ್​ 29ಕ್ಕೆ ಪೂರ್ಣಗೊಳ್ಳಲಿದೆ. ಅದಕ್ಕೂ ಮುನ್ನ ಅಂದರೆ ಅಕ್ಟೋಬರ್​ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ.
ಚಿಕ್ಕವರಿಗಿಲ್ಲ ಇನ್ನೂ ಮೂರು ತಿಂಗಳು ಶಾಲೆ, ದೊಡ್ಡವರಿಗೆ ಪಾಳಿ ಪದ್ಧತಿ; ಕೇಂದ್ರ ಸಿದ್ಧಪಡಿಸುತ್ತಿದೆ ಪುನರಾರಂಭದ ಮಾರ್ಗಸೂಚಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 6 =
Remember me
