ನವದೆಹಲಿ:ಭಾರತ-ಚೀನಾ ಗಡಿಭಾಗದಲ್ಲಿ ಕಳೆದ ವರ್ಷದ ಏಪ್ರಿಲ್ ತಿಂಗಳಿಂದ ಉಲ್ಬಣಗೊಂಡಿದ್ದ ಬಿಕ್ಕಟ್ಟಿಗೆ ತೆರೆ ಎಳೆಯುವ ಪ್ರಯತ್ನಗಳು ನಡೆದರೂ, ಎರಡೂ ದೇಶಗಳು ಸೇನಾ ನಿಯೋಜನೆ ಹೆಚ್ಚಿಸುತ್ತಿರುವುದು ಮಾತ್ರ ಕುತೂಹಲ ಕೆರಳಿಸಿದೆ. ಇತ್ತೀಚಿಗೆ, ಭಾರತ ಸರ್ಕಾರ ಗಡಿಯಲ್ಲಿ 50 ಸಾವಿರ ಹೆಚ್ಚುವರಿ ಸೇನಾ ಟ್ರೂಪ್​ಗಳನ್ನು ನಿಯೋಜಿಸುವ ಮೂಲಕ ಚೀನಾ ಗಡಿಯಲ್ಲಿರುವ ಟ್ರೂಪ್​ಗಳ ಸಂಖ್ಯೆ 2 ಲಕ್ಷಕ್ಕೇರಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಟ್ರೂಪ್​ಗಳ ಸಂಖ್ಯೆ ಶೇ.40ರಷ್ಟು ಹೆಚ್ಚಿದೆ. ಸೇನೆ ಮತ್ತು ಫೈಟರ್ ಜೆಟ್ ಸ್ಕಾ್ವಡ್ರನ್​ಗಳನ್ನು ಚೀನಾ ಗಡಿಯಲ್ಲಿ ಮೂರು ವಿಭಿನ್ನ ಪ್ರದೇಶಗಳಿಗೆ ವಿಸ್ತರಿಸಲಾಗಿದ್ದು, ಇದನ್ನು ಐತಿಹಾಸಿಕ ಬೆಳವಣಿಗೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಗಡಿಯಲ್ಲಿ ನಿಯೋಜನೆಗೊಂಡಿರುವ ಚೀನಾ ಸೈನಿಕರ ಸಂಖ್ಯೆ ಬಗ್ಗೆ ಸ್ಪಷ್ಟತೆಯಿಲ್ಲ. ಆದರೆ ಚೀನಾದ ಪೀಪಲ್ಸ್ ಲಿಬರೇಶನ್ ಆರ್ವಿು, ಇತಿ್ತೕಚೆಗೆ ಹೆಚ್ಚುವರಿ ಪಡೆಗಳನ್ನು ಟಿಬೆಟ್​ನಿಂದ ಕ್ಸಿನ್​ಜಿಯಾಂಗ್ ಮಿಲಿಟರಿ ಕಮಾಂಡ್​ಗೆ ಸ್ಥಳಾಂತರಿಸಿದೆ. ಇದು ಹಿಮಾಲಯದ ಉದ್ದಕ್ಕೂ ವಿವಾದಿತ ಪ್ರದೇಶಗಳಲ್ಲಿ ಗಸ್ತು ತಿರುಗುವ ಜವಾಬ್ದಾರಿ ಹೊಂದಿದೆ. ಚೀನಾವು ಟಿಬೆಟ್​ನ ವಿವಾದಿತ ಗಡಿಯಲ್ಲಿ ಫೈಟರ್ ಜೆಟ್​ಗಳನ್ನು ನೆಲೆಗೊಳಿಸಲು ಹೊಸ ರನ್​ವೇ ಕಟ್ಟಡಗಳು, ಬಾಂಬ್ ನಿರೋಧಕ ಬಂಕರ್ ನಿರ್ಮಾಣ ಮಾಡಿದೆ. ಅಲ್ಲದೆ, ಚೀನಾ ಸರ್ಕಾರ ಕಳೆದ ಕೆಲವು ತಿಂಗಳುಗಳಿಂದ ಲಾಂಗ್ ರೇಂಜ್ ಫಿರಂಗಿ, ಟ್ಯಾಂಕ್, ರಾಕೆಟ್ ರೆಜಿಮೆಂಟ್ ಮತ್ತು ಟ್ವಿನ್ ಎಂಜಿನ್ ಫೈಟರ್​ಗಳನ್ನು ಕೂಡ ನೆಲೆಗೊಳಿಸುತ್ತಿದೆ. ಈ ಬಗ್ಗೆ ಚೀನಾ ಸರ್ಕಾರ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಗಡಿಯ ಎರಡೂ ಬದಿಗಳಲ್ಲಿ ಈ ಪ್ರಮಾಣದಲ್ಲಿ ಸೇನೆ ನೆಲೆಗೊಂಡಿರುವುದು ಅಪಾಯಕಾರಿ. ಸಣ್ಣ ಭಿನ್ನಾಭಿಪ್ರಾಯ, ಬಿಕ್ಕಟ್ಟು ಭಾರೀ ಹಾನಿಗೆ ಕಾರಣವಾಗಬಲ್ಲದು ಎಂದು ರಕ್ಷಣಾ ವಿಶ್ಲೇಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಭಾರತ-ಚೀನಾ ನಡುವೆ ಘರ್ಷಣೆಗೆ ಕಾರಣವಾಗಿದ್ದ ಲಡಾಖ್​ನ ಉತ್ತರ ಭಾಗದಲ್ಲಿ ಭಾರತೀಯ ಸೈನಿಕರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಪಾಕ್ ವಿರುದ್ಧದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವರು ಸೇರಿದಂತೆ ಸುಮಾರು 20 ಸಾವಿರ ಸೈನಿಕರು ಇಲ್ಲಿ ನಿಯೋಜನೆಗೊಂಡಿದ್ದಾರೆ. ಚೀನಾ ವಿರುದ್ಧ ಎತ್ತರದ ಹಿಮಾಲಯದಲ್ಲಿ ಹೋರಾಡಲು ಹೆಚ್ಚು ಸೈನಿಕರನ್ನು ನಿಯೋಜಿಸುತ್ತಿರುವುದರಿಂದ ಪಾಕಿಸ್ತಾನದ ಪಶ್ಚಿಮ ಗಡಿಯಲ್ಲಿ ಮೀಸಲಾಗಿರುವ ಸೈನಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ನಡುವೆ, 1962ರ ಭಾರತ-ಚೀನಾ ಯುದ್ಧ ಅತಿ ಹೆಚ್ಚು ನಡೆದ ಮತ್ತು ಅಧಿಕ ಗಡಿ ಸೇನಾಪಡೆಗಳು ನಿಯೋಜನೆಗೊಂಡಿದ್ದ ಅರುಣಾಚಲ ಪ್ರದೇಶದಲ್ಲೂ ಚೀನಾಗೆ ಸೆಡ್ಡು ಹೊಡೆಯಲು ಫ್ರೆಂಚ್ ನಿರ್ವಿುತ ರಫೇಲ್ ಯುದ್ಧ ವಿಮಾನಗಳನ್ನು ದೂರಗಾಮಿ ಕ್ಷಿಪಣಿಗಳೊಂದಿಗೆ ಸಜ್ಜುಗೊಳಿಸಲಾಗುತ್ತಿದೆ. ಹಾಗೆಯೇ, ದಕ್ಷಿಣ ಟಿಬೆಟ್ ಪ್ರಸ್ಥಭೂಮಿಯ ಜನನಿಬಿಡ ಪ್ರದೇಶಲ್ಲಿಯೂ ಭಾರತೀಯ ಸೇನೆಯ ಚಲನವಲನಗಳು ಹೆಚ್ಚಾಗಿದೆ.
ಗಡಿ ಭಾಗದ 63 ಸೇತುವೆ ಉದ್ಘಾಟನೆ:ಉತ್ತರಾಖಂಡದ ಪಿತೋರಾಗಢ ಜಿಲ್ಲೆಯ ಭಾರತ-ಚೀನಾ ಗಡಿಯಲ್ಲಿರುವ ಧಾರ್ಚುಲಾ ಉಪ ವಿಭಾಗದಲ್ಲಿ ಮೂರು ಗಡಿ ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಡಿಯೋ ಕಾನ್ಪರೆನ್ಸ್ ಮೂಲಕ ಉದ್ಘಾಟಿಸಿದ್ದಾರೆ. ಬಾರ್ಡರ್ ರೋಡ್ ಆರ್ಗನೈಸೇಷನ್ (ಬಿಆರ್​ಒ) ಈ ಸೇತುವೆಗಳನ್ನು ನಿರ್ವಿುಸಿದೆ. ಇದರಿಂದ ಭದ್ರತಾ ಪಡೆ ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚು ಅನುಕೂಲವಾಗಲಿದೆ. ಮೂರು ಗಡಿ ಸೇತುವೆ ಸೇರಿದಂತೆ ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಸಂರ್ಪಸುವ 63 ಸೇತುವೆಗಳನ್ನು ಅವರು ವರ್ಚುವಲ್ ಮೂಲಕ ಉದ್ಘಾಟಿಸಿದರು. ಅರುಣಾಚಲ ಪ್ರದೇಶದಲ್ಲಿ 29, ಲಡಾಖ್​ನಲ್ಲಿ 11, ಸಿಕ್ಕಿಂ 11, ಉತ್ತರಾಖಂಡ 6, ಜಮ್ಮು ಮತ್ತು ಕಾಶ್ಮೀರ 4, ಹಿಮಾಚಲ ಪ್ರದೇಶ 3, ನಾಗಾಲ್ಯಾಂಡ್, ಮಣಿಪುರಗಳಲ್ಲಿ ತಲಾ ಒಂದು ಸೇತುವೆಗಳು ಉದ್ಘಾಟನೆಗೊಂಡವು. ಈ ಎಲ್ಲ ಸೇತುವೆಗಳ ನಿರ್ಮಾಣ ವೆಚ್ಚ 240 ಕೋಟಿ ರೂ. ಎಂದು ಬಿಆರ್​ಒ ತಿಳಿಸಿದೆ.
ಬೃಹತ್ ಜಲವಿದ್ಯುತ್ ಯೋಜನೆಗೆ ಚೀನಾ ಚಾಲನೆ:ನೈಋತ್ಯ ಚೀನಾದ ಯಾಂಗ್ಸ್ ನದಿಯ ಜಲಾಶಯದ ವಿಶ್ವದ ಎರಡನೇ ಅತಿದೊಡ್ಡ ಜಲವಿದ್ಯುತ್ ಅಣೆಕಟ್ಟಿನ ಮೊದಲ ಎರಡು ಉತ್ಪಾದನಾ ಘಟಕಗಳು ಸೋಮವಾರ ಕಾರ್ಯಾರಂಭ ಮಾಡಿವೆ. ಯಾಂಗ್ಸ್ ನದಿಯ ಉಪನದಿ ಜಿನ್ಶಾ ನದಿಯಲ್ಲಿರುವ ಬೖಹೆಟನ್ ಜಲಾಶಯವನ್ನು ಪರಿಸರ ಕಾರಣಗಳಿಗಾಗಿ ನೆರೆದೇಶಗಳು ವಿರೋಧಿಸಿದ್ದವು. ಆದರೆ ತ್ಯಾಜ್ಯ ಇಂಧನದ ಬೇಡಿಕೆ ತಡೆದು ಜಲವಿದ್ಯುತ್ ಸಾಮರ್ಥ್ಯ ಹೆಚ್ಚಿಸಬೇಕೆಂಬುದು ಚೀನಾ ಉದ್ದೇಶ. ಅದಕ್ಕಾಗಿ ಈ ಯೋಜನೆ ಕೈಗೆತ್ತಿಕೊಂಡಿದೆ. ಈ ಜಲಾಶಯದಿಂದ ನೆರೆದೇಶಗಳು ಪ್ರವಾಹ ಎದುರಿಸುತ್ತಿರುವುದಲ್ಲದೆ ಕೃಷಿಭೂಮಿಗಳು ಮತ್ತು ನದಿಗಳ ಪರಿಸರ ಸಮತೋಲನಕ್ಕೂ ಅಡ್ಡಿಯಾಗಿದೆ. ಮೀನು ಮತ್ತು ಇತರ ಪ್ರಭೇದಗಳಿಗೂ ಅಪಾಯ ಒಡ್ಡಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ. ಚೀನಾ ಕಲ್ಲಿದ್ದಲಿನ ಮೇಲಿನ ಅವಲಂಬನೆ ಕಡಿಮೆ ಮಾಡಲು ಮತ್ತು ಆಮದು ಮಾಡಿಕೊಳ್ಳುವ ತೈಲ ಮತ್ತು ಅನಿಲಕ್ಕೆ ಹೆಚ್ಚುತ್ತಿರುವ ಬೇಡಿಕೆ ತಗ್ಗಿಸುವ ಸಲುವಾಗಿ ನದಿಗಳಿಗೆ ಅಣೆಕಟ್ಟುಗಳನ್ನು ನಿರ್ವಿುಸುತ್ತಿದೆ.
ಜಮ್ಮು:ಉಗ್ರರು ಜಮ್ಮು ವಾಯುಸೇನಾ ನಿಲ್ದಾಣದ ಮೇಲೆ ಡ್ರೋನ್ ದಾಳಿ ನಡೆಸಿದ ಹಲವು ಗಂಟೆಗಳ ಅಂತರದಲ್ಲಿ ಮತ್ತೆರಡು ಡ್ರೋನ್​ಗಳು ಮಿಲಿಟರಿ ಸ್ಟೇಶನ್ ಸಮೀಪ ಪತ್ತೆಯಾಗಿದ್ದವು. ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದಾಗ ತಪ್ಪಿಸಿಕೊಂಡ ಡ್ರೋನ್​ಗಳು ಹಿಂದಕ್ಕೆ ತೆರಳಿವೆ. ಇದರಿಂದ ಸಂಭಾವ್ಯ ಅನಾಹುತ ತಪ್ಪಿದೆ. ಜಮ್ಮುವಿನ ರತ್ನುಚಕ್- ಕಲುಚಕ್ ಮಿಲಿಟರಿ ಸ್ಟೇಶನ್ ಸಮೀಪ ಜೂನ್ 27-28ರ ನಡುವಿನ ರಾತ್ರಿಯಲ್ಲಿ ಎರಡು ಡ್ರೋನ್​ಗಳು ಪತ್ತೆಯಾದವು. ಮೊದಲ ಡ್ರೋನ್ ಭಾನುವಾರ ರಾತ್ರಿ 11.30ಕ್ಕೂ, ಎರಡನೇ ಡ್ರೋನ್ ರಾತ್ರಿ 1.30ಕ್ಕೂ ಕಾಣಿಸಿಕೊಂಡಿದ್ದವು. ಕೂಡಲೇ ಹೈ ಅಲರ್ಟ್ ಎಚ್ಚರಿಕೆ ಸೈರನ್ ಮೊಳಗಿತು. ಸೇನೆಯ ಕ್ವಿಕ್ ರಿಯಾಕ್ಷನ್ ಟೀಮ್ ಡ್ರೋನ್​ಗಳನ್ನು ಪತ್ತೆ ಹಚ್ಚಿ, ಗುಂಡಿನ ದಾಳಿ ನಡೆಸಿತ್ತು. ಅಷ್ಟರಲ್ಲಿ ಅವು ಅಲ್ಲಿಂದ ತಪ್ಪಿಸಿಕೊಂಡು ಹೋಗಿವೆ ಎಂದು ಸೇನಾ ಮೂಲಗಳು ತಿಳಿಸಿವೆ.
ಸಾಧ್ಯಾಸಾಧ್ಯತೆಯ ಪ್ರಯತ್ನ?:ಜಮ್ಮುವಿನ ಗರಿಷ್ಠ ಭದ್ರತೆ ಇರುವ ವಿಮಾನ ನಿಲ್ದಾಣದಲ್ಲಿ ಭಾನುವಾರ ನಡೆದ ಅವಳಿ ದಾಳಿ ವಿಧ್ವಂಸಕ ಕೃತ್ಯಕ್ಕೆ ಡ್ರೋನ್ ಬಳಕೆಯ ಪ್ರಯತ್ನವಾಗಿತ್ತು. ಭಾರತದ ಸೇನಾ ಸೂಕ್ಷ್ಮ ಪ್ರದೇಶಗಳಿಗೆ ಡ್ರೋನ್​ಗಳನ್ನು ತಲುಪಿಸಲು ಮತ್ತು ದಾಳಿ ನಡೆಸಲು ಸಾಧ್ಯವೆ ಎಂಬುದನ್ನು ಪರೀಕ್ಷಿಸುವ ಪ್ರಯತ್ನ ಇದಾಗಿರಬಹುದು. ಇದರ ಹಿಂದೆ ಜಮ್ಮು-ಕಾಶ್ಮೀರ ಕಣಿವೆಯ ಸ್ಲೀಪರ್ ಸೆಲ್ ಉಗ್ರರ ಕೈವಾಡ ಇರುವ ಸಾಧ್ಯತೆ ಕಡಿಮೆ ಎಂದು ಬೇಹುಗಾರಿಕಾ ಸಂಸ್ಥೆಗಳು ವಿಶ್ಲೇಷಿಸಿವೆ. ಈ ದಾಳಿಗೆ ಪಾಕ್ ಮೂಲಕ ಲಷ್ಕರ್-ಎ-ತೊಯ್ಬಾ ಮತ್ತು ಜೈಷ್-ಎ-ಮೊಹಮ್ಮದ್ ಸಂಘಟನೆಗಳು ಕಾರಣ ಇರಬಹುದು. ಈ ಸಂಘಟನೆಗಳಿಗೆ ಪಾಕ್​ನ ಐಎಸ್​ಐ ಬೆಂಬಲಿಸಿರುವ ಸಾಧ್ಯತೆ ಇದೆ ಎಂದು ಬೇಹುಗಾರಿಕಾ ಮೂಲಗಳು ಶಂಕಿಸಿವೆ. ಭಾನುವಾರ ನಸುಕಿನ ವೇಳೆ ನಡೆದ ಅವಳಿ ಡ್ರೋನ್ ದಾಳಿಗೆ ವಾಯುಪಡೆಯ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದರು. ಸುಧಾರಿತ ಸ್ಫೋಟ ಸಾಧನ ಹೊಂದಿದ್ದ ಉಗ್ರನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
300 ಡ್ರೋನ್​ಗಳು ಗೋಚರ:2019ರ ಆಗಸ್ಟ್ 5ರಂದು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಂಡ ನಂತರ ಭಾರತ ಪಾಕ್ ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆ ಬಳಿ 300ಕ್ಕೂ ಹೆಚ್ಚು ಡ್ರೋನ್​ಗಳು ಕಾಣಿಸಿಕೊಂಡಿವೆ. ಶಸ್ತ್ರ ಮತ್ತು ಡ್ರಗ್ಸ್​ಗಳನ್ನು ಗಡಿಯಾಚೆಯಿಂದ ರವಾನಿಸಲು ಇದನ್ನು ಬಳಸಲಾಗಿದೆ. ದೇಶದ ಪಶ್ಚಿಮದಲ್ಲಿ 3,323 ಕಿ.ಮೀ. ಗಡಿ ಇದ್ದು, ಇದರ ಉದ್ದಕ್ಕೂ 2019ರಲ್ಲಿ 167, 2020ರಲ್ಲಿ 77 ಮತ್ತು 2021ರ ಈವರೆಗೆ 80 ಡ್ರೋನ್​ಗಳು ಕಾಣಿಸಿವೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿ:ಸ್ವದೇಶಿ ನಿರ್ವಿುತ ಪಿನಾಕಾ ರಾಕೆಟ್ ಪರೀಕ್ಷೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಎರಡು ದಿನಗಳ ಬಳಿಕ, ಅಗ್ನಿ ಸರಣಿಯ ಹೊಸ ಅಗ್ನಿ ಪ್ರೖೆಮ್ ಕ್ಷಿಪಣಿ ಪರೀಕ್ಷೆಯನ್ನು ಕೂಡ ಡಿಆರ್​ಡಿಒ (ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್​ವೆುಂಟ್ ಆರ್ಗನೈಸೇಷನ್) ಸೋಮವಾರ ಯಶಸ್ವಿಯಾಗಿ ನೆರವೇರಿಸಿದೆ. ಒಡಿಶಾದ ಕಡಲ ತೀರದ ಡಾ.ಎಪಿಜೆ ಅಬ್ದುಲ್ ಕಲಾಂ ದ್ವೀಪದ ಟೆಸ್ಟಿಂಗ್ ಸೌಲಭ್ಯದಲ್ಲಿ ಬೆಳಗ್ಗೆ 10.55ಕ್ಕೆ ಅಗ್ನಿ ಪ್ರೖೆಮ್ ಕ್ಷಿಪಣಿಯ ಪರೀಕ್ಷೆ ನಡೆಸಲಾಯಿತು. ಇದು ನೆಕ್ಸ್ ್ಟ ಜನರೇಷನ್ ಕ್ಷಿಪಣಿಯಾಗಿದ್ದು, ಅಣ್ವಸ್ತ್ರ ಸಾಮರ್ಥ್ಯ ಹೊಂದಿರುವಂಥದ್ದಾಗಿದೆ. ಇದರ ರೇಂಜ್ 1,000-2,000 ಕಿ.ಮೀ. ಆಗಿದೆ ಎಂದು ಡಿಆರ್​ಡಿಒ ಮೂಲಗಳು ತಿಳಿಸಿವೆ. ಒಡಿಶಾದ ಚಾಂಡಿಪುರದಲ್ಲಿ ಮಲ್ಟಿ ಬ್ಯಾರೆಲ್ ರಾಕೆಟ್ ಲಾಂಚರ್​ನಿಂದ ಒಟ್ಟು 25 ಸುಧಾರಿತ ಪಿನಾಕಾ ರಾಕೆಟ್​ಗಳನ್ನು ಎರಡು ದಿನಗಳ ಹಿಂದೆ ಉಡಾವಣೆ ಮಾಡಲಾಗಿತ್ತು.
ಕೆಥೊಲಿಕ್ ಪಾದ್ರಿಗಳ ಸೆಕ್ಸ್​ ಸ್ಕ್ಯಾಂಡಲ್​: 30 ತಿಂಗಳಲ್ಲಿ 368 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ!

ಹ್ಯಾಕ್​ ಮಾಡಿದ್ದಕ್ಕೂ ಈಕೆಗೆ ಲಕ್ಷಗಟ್ಟಲೆ ರೂಪಾಯಿ ಇನಾಮು ಸಿಕ್ತು; ಮೈಕ್ರೋಸಾಫ್ಟ್​, ಫೇಸ್​ಬುಕ್​ನಿಂದ್ಲೇ ಬಹುಮಾನ

ಮನೆಯಿಂದ ದೂರದಲ್ಲಿ ಕಾರು ಪಾರ್ಕ್ ಮಾಡುತ್ತಿದ್ದೀರಾ? ಹಾಗಿದ್ರೆ ಹುಷಾರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 11 =
Remember me
