ನವದೆಹಲಿ:ಪೂರ್ವ ಲಡಾಖ್​ನ ವಾಸ್ತವ ಗಡಿ ರೇಖೆಯಲ್ಲಿ (ಎಲ್​ಎಸಿ) ಮುಂದುವರಿದಿರುವ ಗಡಿ ಉದ್ವಿಗ್ನತೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ಮಧ್ಯೆ ಪ್ರಥಮ ರಾಜತಾಂತ್ರಿಕ, ಮಿಲಿಟರಿ ಮಟ್ಟದ ಸಭೆ ಸೋಮವಾರ ನಡೆದಿದೆ.
ಚೀನಾ ಭಾಗದಲ್ಲಿರುವ ಚುಶುಲ್-ಮಾಲ್ಡೊದಲ್ಲಿ 12 ತಾಸು ಸಭೆ ನಡೆಯಿತು. ದೆಪ್ಸಾಂಗ್ ಪ್ರಸ್ಥಭೂಮಿಯಿಂದ ಪ್ಯಾಂಗಾಂಗ್ ತ್ಸೊ ವರೆಗಿನ ಎಲ್ಲ ಪ್ರಮುಖ ಸಂಘರ್ಷದ ಸ್ಥಳಗಳಿಂದ ಚೀನಾ ತನ್ನ ಸೇನೆಯನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಸಂಪೂರ್ಣವಾಗಿ ವಾಪಸ್ ಪಡೆಯಬೇಕೆಂದು ಭಾರತದ ನಿಯೋಗ ಸಭೆಯಲ್ಲಿ ಆಗ್ರಹಿಸಿತು ಎಂದು ಹೇಳಲಾಗಿದೆ. ಆದರೆ ಚುಶುಲ್ ಉಪವಲಯದಲ್ಲಿ ವಶಪಡಿಸಿಕೊಂಡಿರುವ ಎಲ್ಲ ಪ್ರಮುಖ ದಿಣ್ಣೆಗಳಿಂದ ಹಿಂದೆ ಸರಿಯುವಂತೆ ಭಾರತವನ್ನು ಚೀನಾ ಆಗ್ರಹಿಸಿತು ಎನ್ನಲಾಗಿದೆ. ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಭಾರತೀಯ ನಿಯೋಗದ ನೇತೃತ್ವ ವಹಿಸಿದ್ದರು. ಕಮಾಂಡರ್​ಗಳ ಮಟ್ಟದ ಮಾತುಕತೆ ಸರಣಿಯ ಆರನೇ ಸಭೆ ಇದಾಗಿದ್ದು, ವಿದೇಶಾಂಗ ಸಚಿವಾಲಯದ ಪೂರ್ವ ಏಷ್ಯಾ ವಿಭಾಗದ ಜಂಟಿ ಕಾರ್ಯದರ್ಶಿ ನವೀನ್ ಶ್ರೀವಾಸ್ತವ್ ನಿಯೋಗದಲ್ಲಿದ್ದರು.
ಶಾಂತ ಸಾಗರದಲ್ಲಿರುವ ಅಮೆರಿಕದ ಗುವಾಮ್ ದ್ವೀಪದ ಆಂಡರ್ಸನ್ ವಾಯು ಪಡೆಯ ನೆಲೆ ಮೇಲೆ ಎಚ್-6 ಬಾಂಬರ್​ಗಳ ಮೂಲಕ ದಾಳಿ ನಡೆಸಿದ್ದೇವೆ ಎಂದು ಚೀನಾ ಹೇಳಿಕೊಂಡಿದೆ.ಈ ಕುರಿತು 2.15 ನಿಮಿಷಗಳ ವಿಡಿಯೋವೊಂದನ್ನು ಚೀನಾ ವಾಯುಪಡೆ ಬಿಡುಗಡೆ ಮಾಡಿದೆ. ಚೀನಾ ಬಿಡುಗಡೆ ಮಾಡಿ ರುವ ವಿಡಿಯೋದಲ್ಲಿ ಹಾಲಿವುಡ್ ಸಿನಿಮಾದ ಟ್ರೖೆಲರ್​ಗಳಂತಹ ಗಂಭೀರ ದೃಶ್ಯ ಮತ್ತು ನಾಟಕೀಯ ಸಂಗೀತವಿದ್ದು, ಆಂಡರ್ಸನ್​ನ ಮರುಭೂಮಿ ಪ್ರದೇಶದ ಮೇಲೆ ಬಾಂಬ್​ಗಳನ್ನು ಹಾಕುವ ದೃಶ್ಯಗಳಿವೆ. ಆದರೆ ಚೀನಾದ ರಕ್ಷಣಾ ಸಚಿವಾಲಯ ಹಾಗೂ ಅಮೆರಿಕ ಇಂಡೋ ಫೆಸಿಫಿಕ್ ಕಮಾಂಡ್ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿಲ್ಲ. ಅಮೆರಿಕದ ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತೈಪೆಗೆ ಭೇಟಿ ನೀಡಿದ್ದಕ್ಕೆ ಆಕ್ರೋಶಗೊಂಡ ಚೀನಾ ಈ ದಾಳಿ ನಡೆಸಿರಬಹುದು ಎನ್ನಲಾಗಿದೆ.
ರಾಮಮಂದಿರ ಭೂಮಿಪೂಜೆ ಬೆನ್ನಿಗೇ ಅಯೋಧ್ಯೆಯಲ್ಲಿ ರಿಯಾಲ್ಟಿ ಬೂಮ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − one =
Remember me
