ಲಡಾಖ್:ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಶುಕ್ರವಾರ ಲೇಹ್‌ಗೆ ಅನಿರೀಕ್ಷಿತ, ಅಚ್ಚರಿಯ ಭೇಟಿ ನೀಡಿದ ನಂತರ ನಡೆದಿರುವ ಅಚ್ಚರಿಯ ಬೆಳವಣಿಗೆಯಲ್ಲಿ ಚೀನಾ ಸೇನೆ ಗಲ್ವಾನ್‌ ಕಣಿವೆಯಿಂದ ಸುಮಾರು ಒಂದೂವರೆಯಿಂದ ಎರಡು ಕಿ.ಮೀನಷ್ಟು ಹಿಂದಕ್ಕೆ ಸರಿದಿದೆ ಎಂಬುದಾಗಿ ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ಭಾರತದ ಸೇನೆ ಕೂಡ ಹಿಂದಕ್ಕೆ ಸರಿಯಲು ತಯಾರಿ ನಡೆಸಿದೆ. ಆದರೆ ಕುತಂತ್ರಿ ಚೀನಾದ ಮೇಲೆ ಹದ್ದಿನಕಣ್ಣಿಟ್ಟಿರುವ ಭಾರತೀಯ ಸೇನೆಯ ಮುಂದಿನ ನಡವಳಿಕೆಯ ಕುರಿತು ಇನ್ನಷ್ಟೇ ವರದಿ ಬರಬೇಕಿದೆ.
ಜೂನ್ 30 ರಂದು ನಡೆದ ಒಪ್ಪಂದದ ಪ್ರಕಾರ ಎರಡೂ ಸೇನೆಯು ಗಲ್ವಾನ್ ಕಣಿವೆಯಿಂದ ಹಿಂದಕ್ಕೆ ಸರಿಯಬೇಕಿತ್ತು. ಕಳೆದ ವಾರ ಕಮಾಂಡರ್ ಹಂತದ ಸಭೆಯಲ್ಲಿ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಇಬ್ಬರೂ ಕೂಡ ತನ್ನ ಸೇನೆಯನ್ನು ಹಿಂಪಡೆಯುವ ಕುರಿತು ಒಪ್ಪಂದ ಮಾಡಿಕೊಂಡಿದ್ದರು. ಅವರಿರುವ ಪ್ರದೇಶದಿಂದ 2-3 ಕಿ.ಮೀ ಹಿಂದಕ್ಕೆ ಕರೆದುಕೊಳ್ಳಬೇಕು ಎಂದು ಹೇಳಲಾಗಿತ್ತು.
Chinese heavy armoured vehicles still present in depth areas in Galwan river area. Indian army monitoring the situation with caution: Indian Army Sourceshttps://t.co/GbGnoAy4K4
— ANI (@ANI)July 6, 2020

ಆದರೆ ಸದಾ ಕುತಂತ್ರ ಬುದ್ಧಿ ಉಪಯೋಗಿಸುತ್ತಿರುವ ಚೀನಾ ಈ ಒಪ್ಪಂದವನ್ನು ಪಾಲನೆ ಮಾಡುವ ಬಗ್ಗೆ ಆತಂಕ ಇದ್ದೇ ಇತ್ತು. ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿರುವ ಬಗ್ಗೆ ಚೀನಾ ಹೇಳುತ್ತಿದ್ದರೂ, ಈಚೆಗೆ ಬಂದಿರುವ ಮಾಹಿತಿ ಪ್ರಕಾರ, ಚೀನಾಕ್ಕೆ ಸೇರಿರುವ ಕೆಲವೊಂದು ವಾಹನಗಳು ಗಡಿಯಲ್ಲಿಯೇ ನಿಂತಿರುವ ಬಗ್ಗೆ ವರದಿಯಾಗಿರುವ ಹಿನ್ನೆಲೆಯಲ್ಲಿ, ಸಂಪೂರ್ಣವಾಗಿ ಸೇನೆ ಕಾಲ್ಕಿತ್ತಿದೆಯೇ, ಇಲ್ಲವೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ಇಡೀ ಪ್ರದೇಶ ಹೆಪ್ಪುಗಟ್ಟುವ ಚಳಿಯಿಂದ ಕೂಡಿದೆ. ಅದರ ಜತೆಗೆ, ನದಿ ನೀರಿನ ಪ್ರವಾಹ ಚೀನಿ ಸೈನಿಕರ ಟೆಂಟ್‌ಗಳವರೆಗೆ ಚಾಚಿರುವುದು ಸ್ಯಾಟಲೈಟ್‌ ಚಿತ್ರಗಳಿಂದ ತಿಳಿದು ಬಂದಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಶತ್ರು ಸೈನಿಕರು ಅಲ್ಲಿಂದ ಜಾಗ ಖಾಲಿ ಮಾಡಲೇಬೇಕಾಗುವುದು ಅನಿವಾರ್ಯ ಎಂದಿದೆ ಭಾರತೀಯ ಸೇನಾ ಮೂಲ.
ಸಂಘರ್ಷ ನಡೆದ ತಾಣದಿಂದ 5 ಕಿ.ಮೀ ದೂರದಲ್ಲಿ ಠಿಕಾಣಿ ಹೂಡಿರುವ ಚೀನಿ ಸೈನಿಕ ಹಂತ ಹಂತವಾಗಿ ತಮ್ಮ ಸೇನೆಯನ್ನು ಹಿಂದಕ್ಕೆ ಪಡೆಯುವಂತೆ ಮಾತಾಗಿತ್ತು. ಇದಕ್ಕೆ ತಿಂಗಳುಗಳೇ ಹಿಡಿಯಬಹುದು ಎಂದು ಹೇಳಲಾಗಿತ್ತು. ಚೀನಾವು ನಿಯಂತ್ರಣ ಗಡಿಭಾಗದಲ್ಲಿ 20 ಸಾವಿರ ಸೈನಿಕರನ್ನು ನಿಯೋಜಿಸಿತ್ತು.
The disengagement of Indian & Chinese troops in Galwan, Ladakh has begun. This is a result of intense diplomatic, military engagement & contacts in the past 48 hours. Details are awaited. These meetings followed PM Modi's visit to Leh where a decisive & firm message was sent out.
— ANI (@ANI)July 6, 2020

ಜೂನ್ 15 ರಂದು ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತದ ಸೈನಿಕರು ಹುತಾತ್ಮರಾಗಿದ್ದರು.
ಚೀನಾದಿಂದ ಪಾಕಿಸ್ತಾನಕ್ಕೆ ಹೋಗಲಿವೆ 4 ಅಟ್ಯಾಕ್​ ಡ್ರೋನ್​ಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − three =
Remember me
