ಗಾಜಿಯಾಬಾದ್​:ಚೀನಾದಲ್ಲಿ ಕೊರೊನಾ ವೈರಸ್​ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಭಾರತೀಯ ರಾಯಭಾರಿ ಕಚೇರಿ ಚೀನಾದಲ್ಲಿ ವಾಸಿಸುತ್ತಿರುವ ಭಾರತೀಯರನ್ನು ಸ್ವದೇಶಕ್ಕೆ ವಾಪಾಸು ಕರೆತಂದಿತ್ತು. ಇದೀಗ ಇರಾನ್​ನಲ್ಲಿಯೂ ಸಹ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಇರಾನ್​ನಲ್ಲಿದ್ದ 58 ಭಾರತೀಯರನ್ನು ಇಂದು ಸ್ವದೇಶಕ್ಕೆ ಕರೆತರಲಾಗಿದೆ.
ಇರಾನ್​ನಲ್ಲಿ ಇದುವರೆಗೂ ಸುಮಾರು 7,000 ಜನರಲ್ಲಿ ಕೊರೊನಾ ವೈರಸ್​ ಪತ್ತೆಯಾಗಿದೆ. 237 ಜನರು ಮೃತರಾಗಿದ್ದಾರೆ. 2,000ಕ್ಕೂ ಹೆಚ್ಚು ಭಾರತೀಯರು ಇರಾನ್​ನಲ್ಲಿ ವಾಸವಿದ್ದು ಅವರನ್ನೆಲ್ಲ ಸ್ವದೇಶದಕ್ಕೆ ಕರೆತರುವ ವ್ಯವಸ್ಥೆಯನ್ನು ಅಲ್ಲಿನ ಭಾರತೀಯ ರಾಯಭಾರಿ ಕಚೇರಿ ಮಾಡುತ್ತಿದೆ. ಅದರ ಮೊದಲ ಹಂತವಾಗಿ ನಿನ್ನೆ (ಮಾ.9) ಇಂಡಿಯನ್​ ಏರ್​ಫೋರ್ಸ್​ನ C-17 ಏರ್​ಕ್ರಾಫ್ಟ್​ನನ್ನು ಭಾರತದಿಂದ ಇರಾನ್​ಗೆ ಕಳುಹಿಸಲಾಗಿತ್ತು. ಅಲ್ಲಿಂದ 58 ಭಾರತೀಯರನ್ನು ಹೊತ್ತು ತಂದಿರುವ ಏರ್​ಕ್ರಾಫ್ಟ್​ ಇಂದು ಬೆಳಗ್ಗೆ ಗಾಜಿಯಾಬಾದ್​ನಲ್ಲಿರುವ ಹಿಂಡನ್​ ವಾಯುನೆಲೆಯಲ್ಲಿ ಭೂಸ್ಪರ್ಶ ಮಾಡಿದೆ.
ಭಾರತಕ್ಕೆ ಬಂದಿಳಿದಿರುವ ಭಾರತೀಯರನ್ನು ವಿಶೇಷ ಚಿಕಿತ್ಸಾ ಕೊಠಡಿಗಳಲ್ಲಿ ಇರಿಸಲಾಗಿದೆ. ಈ ವಿಚಾರವಾಗಿ ಟ್ವೀಟ್​ ಮಾಡಿರುವ ವಿದೇಶಾಂಗ ಸಚಿವರಾದ ಎಸ್​.ಜೈಶಂಕರ್​, “58 ಭಾರತೀಯರನ್ನು ಹೊತ್ತಿದ್ದ C-17 ವಿಮಾನವು ಇರಾನ್​ನಿಂದ ಭಾರತಕ್ಕೆ ಸುರಕ್ಷಿತವಾಗಿ ಬಂದಿಳಿದಿದೆ. ಭಾರತೀಯ ರಾಯಭಾರಿ, ಭಾರತೀಯ ವೈದ್ಯಕೀಯ ತಂಡ ಮತ್ತು ಇಂಡಿಯನ್​ ಏರ್​ಫೋರ್ಸ್​ನ ಸಹಾಯಕ್ಕೆ ಧನ್ಯವಾದಗಳು. ಸಹಕಾರ ತೋರಿದ ಇರಾನ್​ನ ಆಡಳಿತಕ್ಕೆ ಧನ್ಯವಾದಗಳು. ಇನ್ನುಳಿದಿರುವ ಭಾರತೀಯರನ್ನು ಕರೆತರಲು ಕೆಲಸ ಮಾಡುತ್ತಿದ್ದೇವೆ” ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)
First batch of 58 Indian pilgrims being brought back from#Iran. IAF C-17 taken off from Tehran and expected to land soon in Hindon.pic.twitter.com/IqZ8NUK1M6
— Dr. S. Jaishankar (@DrSJaishankar)March 10, 2020

ಜನರನ್ನು ಬೆಚ್ಚಿಬೀಳಿಸಿರುವ ಕೊರೊನಾ ವೈರಸ್​ ಟೈಟಲ್​ಗೆ ಕನ್ನಡ ಚಿತ್ರರಂಗದಲ್ಲಿ ಭಾರಿ ಬೇಡಿಕೆ

‘ನರೇಂದ್ರ ಮೋದಿಯವರೇ ನಿಮ್ಮ ಮಾತುಗಳು ನನ್ನ ಹೃದಯವನ್ನು ಸ್ಪರ್ಶಿಸಿದವು, ನಿಮಗೆ ನನ್ನ ಕೃತಜ್ಞತೆ…’ ಶಶಿ ತರೂರ್​ ಟ್ವೀಟ್​..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − one =
Remember me
