ಲಖನೌ​:ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಪೌರ ಕಾರ್ಮಿಕನೊಬ್ಬ 9 ಐಷಾರಾಮಿ ವಾಹನಗಳ ಮಾಲೀಕನೆಂಬ ಸಂಗತಿ ಹೊರಬಿದ್ದಿದೆ. ಸಾಮಾನ್ಯ ಪೌರ ಕಾರ್ಮಿಕನೊಬ್ಬ ಇಷ್ಟೊಂದು ಆಸ್ತಿಯನ್ನು ಸಂಪಾದನೆ ಮಾಡಲು ಹೇಗೆ ಸಾಧ್ಯ ಅನ್ನೋ ವಿಚಾರ ಇದೀಗ ಇಡೀ ರಾಜ್ಯದಲ್ಲಿ ಭಾರಿ ಚರ್ಚೆಯಾಗುತ್ತಿದೆ.
ಇನ್ನೋವಾ ಮತ್ತು ಕ್ಸೆಲೋದಿಂದ ಮಹೀಂದ್ರಾ ಸ್ಕಾರ್ಪಿಯೋ ಮತ್ತು ಮಾರುತಿ ಎರ್ಟಿಗಾವರೆಗಿನ ವಾಹನಗಳು ಪೌರ ಕಾರ್ಮಿಕನ ಬಳಿ ಇವೆ. ಪತ್ನಿಯ ಹೆಸರಿನಲ್ಲಿ ಇನ್ನೋವಾ, ಸಹೋದರನ ಹೆಸರಿನಲ್ಲಿ ಎರ್ಟಿಗಾ ನೋಂದಣಿಯಾಗಿದೆ. ವಿಭಾಗೀಯ ಆಯುಕ್ತರ ಆದೇಶದ ಮೇರೆಗೆ ನಡೆಸಿದ ವಿಚಾರಣೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಪೌರಕಾರ್ಮಿಕನ ಹೆಸರಿನಲ್ಲಿ ಸಾರಿಗೆ ಇಲಾಖೆಯಲ್ಲಿ 9 ವಾಹನಗಳು ನೋಂದಣಿಯಾಗಿರುವುದು ಕಂಡುಬಂದಿದೆ. ಸಹಾಯಕ ವಿಭಾಗೀಯ ಸಾರಿಗೆ ಆಯುಕ್ತರು (ಆಡಳಿತ) ತಮ್ಮ ವಿಚಾರಣೆಯ ವರದಿಯನ್ನು ವಾಹನಗಳ ವಿವರಗಳೊಂದಿಗೆ ಹೆಚ್ಚುವರಿ ಆಯುಕ್ತರಿಗೆ ಕಳುಹಿಸಿದ್ದಾರೆ. ವರದಿಯಲ್ಲಿ ಪೌರ ಕಾರ್ಮಿಕನ ಗಳಿಕೆ ಕಂಡು ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು, ಸ್ವೀಪರ್‌ನ ಆಸ್ತಿ ವಿವರಗಳು ಮತ್ತು ಬ್ಯಾಂಕ್ ಖಾತೆಗಳ ತನಿಖೆಯಲ್ಲಿ ತೊಡಗಿದ್ದಾರೆ.
ವಿವರಣೆಗೆ ಬರುವುದಾದರೆ, ಹೆಸರು ಸಂತೋಷ್ ಜೈಸ್ವಾಲ್. ಈತ ಪುರಸಭೆಯಲ್ಲಿ ಸ್ವೀಪರ್ ಆಗಿದ್ದು, ಗೊಂಡಾದ ನಗರ ಪೊಲೀಸ್ ವ್ಯಾಪ್ತಿಯ ಪೋರ್ಟರ್ ಗಂಜ್‌ನಲ್ಲಿ ವಾಸಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಸಂತೋಷ್ ಅವರನ್ನು ಕಮಿಷನರ್ ಕಚೇರಿಗೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಈ ವೇಳೆ ನಿಯಮಗಳನ್ನು ಗಾಳಿಗೆ ತೂರಿ ಸರ್ಕಾರಿ ಕಡತಗಳನ್ನು ದುರ್ಬಳಕೆ ಮಾಡಿಕೊಂಡು, ಅವುಗಳನ್ನು ತಿರುಚುವ ಮೂಲಕ ಕೋಟ್ಯಂತರ ರೂಪಾಯಿ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈತ ತನ್ನ ಕುಟುಂಬದ ಸದಸ್ಯರ ಹೆಸರಲ್ಲಿ ಹಲವು ಐಷಾರಾಮಿ ವಾಹನಗಳನ್ನೂ ಖರೀದಿಸಿದ್ದಾನೆ. ಅಧಿಕಾರಿಗಳ ಕಣ್ಣು ತಪ್ಪಿಸಿ, ಈತ ಕಡತಗಳನ್ನು ತಿದ್ದುತ್ತಲೇ ಇದ್ದ.
ಸಂತೋಷ್​ ವಿರುದ್ಧ ದೂರು ಬಂದ ನಂತರ ಅಂದಿನ ಕಮಿಷನರ್‌ ಯೋಗೇಶ್ವರ್‌ ರಾಮ್‌ ಮಿಶ್ರಾ ವಿಚಾರಣೆ ನಡೆಸಿದಾಗ ಸಂತೋಷ್‌ ಜೈಸ್ವಾಲ್‌ ಕರಾಳ ಮುಖ ಅನಾವರಣಗೊಂಡಿತು. ಸ್ವೀಪರ್ ಸಂತೋಷ್, ನಜೀರ್ ಹುದ್ದೆಯಲ್ಲಿದ್ದಾಗ ಕಡತಗಳನ್ನು ದುರ್ಬಳಕೆ ಮಾಡಿ ಕೋಟ್ಯಂತರ ರೂಪಾಯಿ ಆಸ್ತಿ ಸಂಪಾದಿಸಿದ್ದಾರೆ ಎಂದು ವರದಿಯಾಗಿದೆ. ಆಯುಕ್ತರ ಆದೇಶದಂತೆ ಸಂತೋಷ್​ರನ್ನು ಅಮಾನತುಗೊಳಿಸಲಾಗಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ. ಅಲ್ಲದೆ, ದೇವಿಪಟ್ಟಣ ಮಂಡಲದ ಆಯುಕ್ತರಾಗಿದ್ದ ಯೋಗೇಶ್ವರ್ ರಾಮ್ ಮಿಶ್ರಾ ಅವರ ಆದೇಶದ ಮೇರೆಗೆ ಸದರ್ ತಹಸೀಲ್ದಾರ್ ಅವರು ಸಂತೋಷ್​ ಒಡೆತನದ ಐಷಾರಾಮಿ ವಾಹನಗಳ ಬಗ್ಗೆ ಮಾಹಿತಿ ನೀಡುವಂತೆ ಸಹಾಯಕ ವಿಭಾಗೀಯ ಸಾರಿಗೆ ಅಧಿಕಾರಿಗೆ ಪತ್ರ ಬರೆದಿದ್ದರು.
ದೇವಿಪಟ್ಟಣ ಮಂಡಲದ ಹಾಲಿ ಕಮಿಷನರ್ ಶಶಿಭೂಷಣ್ ಲಾಲ್ ಸುಶೀಲ್ ಅವರು ಅಧಿಕಾರ ವಹಿಸಿಕೊಂಡ ನಂತರ ವಾಹನಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಹಾಯಕ ವಿಭಾಗೀಯ ಸಾರಿಗೆ ಅಧಿಕಾರಿಗೆ ಸೂಚಿಸಿದ್ದರು. ಇದೀಗ ಸಹಾಯಕ ವಿಭಾಗೀಯ ಸಾರಿಗೆ ಅಧಿಕಾರಿ ಆಡಳಿತ ತನ್ನ ವಿಚಾರಣೆ ವರದಿಯನ್ನು ಕಳುಹಿಸಿದೆ. ವರದಿಯಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.
ಪೌರ ಕಾರ್ಮಿಕ ಸಂತೋಷ್​, ಒಂದಲ್ಲ ಒಂಬತ್ತು ಐಷಾರಾಮಿ ವಾಹನಗಳನ್ನು ಹೊಂದಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಅಧಿಕಾರಿಗಳ ಪ್ರಕಾರ ತನ್ನ ಹೆಸರಿನಲ್ಲಿ ಹಾಗೂ ಪತ್ನಿ ಮತ್ತು ಸಹೋದರ ಹೆಸರಿನಲ್ಲಿ ವಾಹನಗಳನ್ನು ನೋಂದಾಯಿಸಲಾಗಿದೆ. ಆರೋಪಿ ಸಂತೋಷ್, ಸ್ವಿಫ್ಟ್ ಡಿಜೈರ್, ಎರ್ಟಿಗಾ ಮಾರುತಿ ಸುಜುಕಿ, ಮಹೀಂದ್ರಾ ಸ್ಕಾರ್ಪಿಯೋ, ಇನ್ನೋವಾ ಮತ್ತು ಮಹೀಂದ್ರಾ ಕ್ಸೈಲೋ ಕಾರನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. ಅವರ ಸಹೋದರ ಉಮಾಶಂಕರ್ ಜೈಸ್ವಾಲ್ ಅವರು ಎರ್ಟಿಗಾ ಮಾರುತಿ ಸುಜುಕಿ ಮತ್ತು ಅವರ ಪತ್ನಿ ಬೇಬಿ ಟೊಯೋವಾ ಇನ್ನೋವಾ ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ವಾಹನ ವಿವರ ಬಹಿರಂಗಗೊಂಡ ಬಳಿಕ ತನಿಖಾಧಿಕಾರಿಗಳು ಈಗ ಸಂತೋಷ್​ ಅವರ ಆದಾಯದ ಮೂಲವನ್ನು ಪರಿಶೀಲಿಸಲು ಅವರ ಬ್ಯಾಂಕ್​ ಖಾತೆ ವಿವರಗಳನ್ನು ಹುಡುಕುತ್ತಿದ್ದಾರೆ. ಅಧಿಕಾರಿಗಳು ಬ್ಯಾಂಕ್‌ನಿಂದ ಕಳೆದ ಐದು ವರ್ಷಗಳ ವಹಿವಾಟುಗಳನ್ನು ಕೇಳಿದ್ದಾರೆ. ದಾಖಲೆಗಳನ್ನು ಪಡೆದ ನಂತರ, ಅಧಿಕಾರಿಗಳ ಪ್ರಕಾರ ಆರೋಪಿ ಪೌರ ಕಾರ್ಮಿಕ ಸಂತೋಷ್ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು.
ಆಯುಕ್ತರ ಕಚೇರಿಯಲ್ಲಿನ ಕಡತಗಳನ್ನು ಅಕ್ರಮವಾಗಿ ತಿದ್ದುವ ಮೂಲಕ ಕೋಟ್ಯಂತರ ರೂಪಾಯಿ ಆಸ್ತಿ ಸಂಪಾದಿಸಿದ ಆರೋಪ ಜೈಸ್ವಾಲ್ ಮೇಲಿದೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)
ಇದು ಗೌತಮ್​ ಗಂಭೀರ್​ ಯುಗ! ರಿಷಭ್​ ಪಂತ್​ ಬೌಲಿಂಗ್​ ಕಂಡು ನಗೆಗಡಲಲ್ಲಿ ತೇಲಿದ ನೆಟ್ಟಿಗರು

ಲಂಚದ ಹಣ ಹಂಚಿಕೊಂಡ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಮೂವರು ಟ್ರಾಫಿಕ್​ ಪೊಲೀಸರಿಗೆ ಬಿಗ್​ ಶಾಕ್​!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:19 − 1 =
Remember me
