ನವದೆಹಲಿ:‘ಎಲೆಕ್ಟ್ರಿಕ್‌’ ಎಂಬುದು ಭಾರತೀಯ ವಾಹನೋದ್ಯಮದಲ್ಲಿ ಅಬ್ಬರದ ಪದವಾಗಿದೆ. ನೂರಾರು ಮಾದರಿಯ ಹೊಸ ಎಲೆಕ್ಟ್ರಿಕ್ ವಾಹನಗಳು, ಬ್ಯಾಟರಿ ಮತ್ತು ಚಾರ್ಜಿಂಗ್ ಸೇರಿದಂತೆ ಮೂಲಸೌಕರ್ಯ ಕಂಪನಿಗಳು ಹೂಡಿಕೆಗೆ ಸಜ್ಜಾಗಿರುವುದರಿಂದ ಈ ವಲಯದಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ.
ಇದನ್ನೂ ಓದಿ:ಜಾಗತಿಕ ರಕ್ಷಣಾ ವಲಯಕ್ಕೆ ಭರವಸೆ ಮೂಡಿಸಿದೆ ಭಾರತದ ಮಾರುಕಟ್ಟೆ : ಥೇಲ್ಸ್ ಸಿಇಒ
ತಯಾರಕರ ಅತ್ಯಾಸಕ್ತಿಯ ಫಲವಾಗಿ ಎಲೆಕ್ಟ್ರಿಕ್ ವಾಹನಗಳ ವಲಯದಲ್ಲಿ ‘ಹಸಿರು’ ಕೌಶಲ್ಯ ಹೊಂದಿರುವ ಕಾರ್ಮಿಕರ ಬೇಡಿಕೆಯು ಗಗನಕ್ಕೇರಿದೆ. ಭಾರತದಲ್ಲಿ ಪರಿಣಿತ ಕೆಲಸಗಾರರು ಲಭ್ಯವಿದ್ದು, ಈ ಕ್ಷೇತ್ರದಲ್ಲಿ ದೇಶವು ಇತರ ದೇಶಗಳನ್ನು ಹಿಂದಿಕ್ಕಲಿದೆ ಎಂದು ಲಿಂಕ್ಡ್‌ ಇನ್‌ನ ಗ್ಲೋಬಲ್ ಗ್ರೀನ್ ಸ್ಕಿಲ್ಸ್ ವರದಿಯಲ್ಲಿ ತಿಳಿಸಲಾಗಿದೆ.
ಕಳೆದ 5ವರ್ಷಗಳಲ್ಲಿ ಯುಎಸ್​ಎ, ಮೆಕ್ಸಿಕೋ, ಕೆನಡಾ ಮತ್ತು ಕೆಲವು ಯುರೋಪಿಯನ್ ರಾಷ್ಟ್ರಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಕ್ಷೇತ್ರದಲ್ಲಿ ಶೇ.40ರಷ್ಟು ಪ್ರಗತಿ ಸಾಧಿಸಿದವು. ಎಲ್ಲ ದೇಶಗಳ ನಾಯಕತ್ವವು ‘ಹಸಿರು’ ಕೌಶಲ್ಯ ದತ್ತಲೇ ದೃಷ್ಟಿ ಹರಿಸಿದ್ದು, ಭಾರತವು ಸಹ ಇಂತಹ ಕೌಶಲ್ಯ ಹೊಂದಿರುವ ಕಾರ್ಮಿಕರ ಸಂಖ್ಯೆ ಹೆಚ್ಚಾಗಲು ಆದ್ಯತೆ ನೀಡಿದೆ. ಹೀಗಾಗಿ ಎಲೆಕ್ಟ್ರಿಕ್ ವಾಹನ ಉದ್ಯಮದ ಕಾರ್ಮಿಕರ ಸಂಖ್ಯೆಯಲ್ಲಿ ಜಿಗಿತಕಂಡಿದೆ ಎಂದು ವರದಿಯಲ್ಲಿ ಹೇಳಿದೆ.
ವಲಯದಲ್ಲಿ 10 ಮಿಲಿಯನ್ ನೇರ ಉದ್ಯೋಗಗಳು ಮತ್ತು 50ರಿಂದ 55 ಮಿಲಿಯನ್ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ರಾಂಡ್‌ಸ್ಟಾಡ್ ಇಂಡಿಯಾದ ವೃತ್ತಿಪರ ಹುಡುಕಾಟ ಮತ್ತು ಆಯ್ಕೆಯ ನಿರ್ದೇಶಕ ಸಂಜಯ್ ಶೆಟ್ಟಿ ತಿಳಿಸಿದರು.
ಇವಿ ಉದ್ಯಮಕ್ಕೆ ತಕ್ಷಣವೇ 50,000 ರಿಂದ 1 ಲಕ್ಷ ಜನರ ಅಗತ್ಯವಿದೆ. “ಇದು ಭಾರತದಲ್ಲಿನ ಎಲೆಕ್ಟ್ರಿಕ್ ಒಇಎಂ ಗಳಿಗೆ ಸೀಮಿತವಾಗಿಲ್ಲ. ಘಟಕ ತಯಾರಕರು, ಸೇವಾ ಪೂರೈಕೆದಾರರು ಸಹ ಅಗತ್ಯವಿದೆ ಎಂದು ಹೀರೋ ಎಲೆಕ್ಟ್ರಿಕ್‌ನ ಮನು ಶರ್ಮಾ ತಿಳಿಸಿದ್ದಾರೆ.
ಎಂಟು ವರ್ಷಗಳಲ್ಲಿ ಮೊದಲ ಬಾರಿಗೆ ಬದಲಾದ ಗ್ರಾಮೀಣ ರಸ್ತೆ ನಿರ್ಮಾಣ ಮಾರ್ಗ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − five =
Remember me
