ಶ್ರೀನಗರ:ಜಮ್ಮು ಕಾಶ್ಮೀರದ ದೋಡಾ ಬಳಿ ಮಿನಿ ಬಸ್ಸೊಂದು ಕಂದರಕ್ಕೆ ಬಿದ್ದ ಪರಿಣಾಮ ಎಂಟು ಜನರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಇಂದು ತಾತ್ರಿಯಿಂದ ದೋಡಾಗೆ ಹೋಗುತ್ತಿದ್ದ ಬಸ್ಸಿನಲ್ಲಿದ್ದ ಇತರ ಹಲವರಿಗೆ ತೀವ್ರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಯಾಣಿಕರ ಸಾವಿಗೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಮೃತರ ಕುಟುಂಬಗಳಿಗೆ ಪಿಎಂಎನ್​ಆರ್​ಎಫ್​​ನಿಂದ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಇದನ್ನೂ ಓದಿ:ಟಿಕ್ರಿ ಗಡಿಯಲ್ಲಿ ರೈತ ಮಹಿಳೆಯರ ಮೇಲೆ ಚಲಿಸಿದ ಟ್ರಕ್​; ಮನೆಗೆ ಹೊರಟಿದ್ದವರ ಪ್ರಾಣ ಹೊತ್ತೊಯ್ದ ಜವರಾಯ
ಜಮ್ಮು ಕಾಶ್ಮೀರ ಸರ್ಕಾರವು ದೋಡಾ ಅಪಘಾತದಲ್ಲಿ ಗಾಯಗೊಂಡಿರುವವರಿಗೆಲ್ಲ ಚಿಕಿತ್ಸೆ ಒದಗಿಸುತ್ತಿದೆ. ಮೃತರ ಕುಟುಂಬಗಳಿಗೆ ಲೆಫ್ಟಿನೆಂಟ್​ ಗವರ್ನರ್​ರ ನಿಧಿಯಿಂದ ತಲಾ 2 ಲಕ್ಷ ರೂ. ಮತ್ತು ರಸ್ತೆ ಅಪಘಾತ ಸಂತ್ರಸ್ತರ ನಿಧಿಯಿಂದ ತಲಾ 1 ಲಕ್ಷ ರೂ. ಪರಿಹಾರ ನೀಡುವುದಾಗಿ ರಾಜ್ಯಪಾಲರ ಕಛೇರಿ ಪ್ರಕಟಿಸಿದೆ.(ಏಜೆನ್ಸೀಸ್)
ಎಬಿಸಿಡಿ ಬರೆಯಲು ಸೆಣಸಾಡಿದ ಇಂಗ್ಲಿಷ್​​​ ಶಿಕ್ಷಕ! ಪೋಷಕರ ಆಕ್ರೋಶ

ರಾಖಿ ಕಟ್ಟಿದ ಹುಡುಗಿಯನ್ನೇ ಹಾರಿಸಿಕೊಂಡು ಹೋದ! ಸ್ನೇಹಿತನಿಂದಲೇ ನಡೆಯಿತು ಘೋರ ಕೃತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 4 =
Remember me
