ನವದೆಹಲಿ:ಪುರುಷರ ವಿವಾಹ ವಯಸ್ಸಿಗೆ ಸರಿಸಮವಾಗಿ ಮಹಿಳೆಯರ ವಿವಾಹ ವಯಸ್ಸನ್ನೂ ಹೊಂದಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಡಿ ಇಟ್ಟಿದೆ. ಇದರನ್ವಯ, ಮಹಿಳೆಯರ ವಿವಾಹದ ಕನಿಷ್ಠ ವಯೋಮಿತಿಯನ್ನು 18ರಿಂದ 21ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಗುರುವಾರ ಅಂಗೀಕರಿಸಿದೆ. ಹಾಲಿ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ ಈ ಮಸೂದೆ ಮಂಡನೆಯಾಗುವ ನಿರೀಕ್ಷೆ ಇದೆ. ಈ ಉದ್ದೇಶಕ್ಕಾಗಿ ಬಾಲ್ಯ ವಿವಾಹ ಕಾಯ್ದೆ 2006ಕ್ಕೆ ತಿದ್ದುಪಡಿ ತರಲು ಸರ್ಕಾರ ಉದ್ದೇಶಿಸಿರುವುದಾಗಿ ಮೂಲಗಳು ತಿಳಿಸಿವೆ. ಪ್ರಸ್ತಾವಿತ ಮಸೂದೆಯಲ್ಲಿ ಮಹಿಳೆಯರ ವಿವಾಹ ವಯಸ್ಸಿಗೆ ಸಂಬಂಧಿಸಿ ವಿವಿಧ ವೈಯಕ್ತಿಕ ಕಾನೂನುಗಳಲ್ಲಿ ಉಲ್ಲೇಖವಾಗಿರುವ ಅಂಶಗಳನ್ನು ಬದಲಾಯಿಸಬೇಕು; ಸಮಾನ ವಿವಾಹ ವಯೋಮಿತಿ ಇರಬೇಕೆಂಬ ಉಲ್ಲೇಖವಿದೆ.
ವರ್ಷದ ಹಿಂದೆ ಪ್ರಧಾನಿ ಹೇಳಿದ್ದು:ಮಹಿಳೆಯರ ವಿವಾಹಯೋಗ್ಯ ಕನಿಷ್ಠ ವಯಸ್ಸಿನ ಮಿತಿ ನಿರ್ಧರಿಸುವುದಕ್ಕೆ ಚಿಂತನೆ ನಡೆಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿ ಅಧ್ಯಯನ, ಸಮಾಲೋಚನೆಗಳು ನಡೆಯುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಹೇಳಿದ್ದರು.
ಟಾಸ್ಕ್​ಫೋರ್ಸ್ ಶಿಫಾರಸು:ಸರ್ಕಾರದ ಈ ನಿರ್ಧಾರದ ಹಿಂದೆ ಸಮತಾ ಪಾರ್ಟಿಯ ಮಾಜಿ ಮುಖ್ಯಸ್ಥೆ ಜಯಾ ಜೇಟ್ಲಿ ನೇತೃತ್ವದ ಟಾಸ್ಕ್​ಫೋರ್ಸ್​ನ ಶಿಫಾರಸು ವರದಿ ಅಂಶಗಳಿವೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ಪಿಎಂಒ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ನೀತಿ ಆಯೋಗಕ್ಕೆ ಈ ಕಾರ್ಯಪಡೆ ವರದಿ ಸಲ್ಲಿಸಿತ್ತು. ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪೌಲ್, ಉನ್ನತ ಶಿಕ್ಷಣ, ಶಾಲಾ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಾಸನಾಂಗ ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಶಿಕ್ಷಣ ತಜ್ಞರಾದ ನಜ್ಮಾ ಅಖ್ತರ್, ವಸುಧಾ ಕಾಮತ್, ದೀಪ್ತಿ ಶಾ ಸಮಿತಿಯಲ್ಲಿದ್ದರು.
ಕಾರ್ಯಪಡೆ ಹೊಣೆ?:ತಾಯ್ತನದ ವಯಸ್ಸು, ತಾಯಂದಿರ ಮರಣ ಪ್ರಮಾಣ ಕಡಿಮೆ ಮಾಡುವ ಅಗತ್ಯ, ಪೌಷ್ಟಿಕಾಂಶ ಮಟ್ಟದ ಸುಧಾರಣೆ ಇತ್ಯಾದಿ ವಿಚಾರಗಳ ಪರಿಶೀಲನೆ
ಪಠ್ಯದಲ್ಲಿ ಲೈಂಗಿಕ ಶಿಕ್ಷಣ?:ಲೈಂಗಿಕ ಶಿಕ್ಷಣವನ್ನು ಔಪಚಾರಿಕ ಗೊಳಿಸುವುದು ಹಾಗೂ ಅದನ್ನು ಶಾಲಾ ಪಠ್ಯದಲ್ಲಿ ಪರಿಚಯಿಸಬೇಕೆಂಬ ಅಂಶವೂ ಕಾರ್ಯಪಡೆಯ ಶಿಫಾರಸಿನಲ್ಲಿರುವುದಾಗಿ ಮೂಲಗಳು ತಿಳಿಸಿವೆ.
ಶಿಫಾರಸಿನ ಹಿಂದಿನ ಲೆಕ್ಕ:ಹುಡುಗನಿಗೆ 21 ಆದಾಗ ಹುಡುಗಿಗೆ 18 ಆದರೆ ಸಮಾನತೆ ಎಲ್ಲಿಂದ ಬಂತು? ಈ ವಿಚಾರವಾಗಿ ಬಹಳ ಜನರ ಅಭಿಪ್ರಾಯ ಆಲಿಸಿದೆವು. ವಿದ್ಯಾರ್ಥಿ ಯುವಜನರ ಅಭಿಪ್ರಾಯಕ್ಕಾಗಿ ಸಮೀಕ್ಷೆ ನಡೆಸಿದೆವು. ನಗರ, ಗ್ರಾಮೀಣ, ಅಕ್ಷರಸ್ಥರು, ಅನಕ್ಷರಸ್ಥರು, ಎಲ್ಲ ಧರ್ಮೀಯರು ಹೀಗೆ ಎಲ್ಲರ ಅಭಿಪ್ರಾಯದ ದತ್ತಾಂಶ ಸ್ವೀಕರಿಸಿ ವಿಶ್ಲೇಷಣೆಗೆ ಒಳಪಡಿಸಿದೆವು. ಬಹುತೇಕ ಎಲ್ಲರ ಅಭಿಪ್ರಾಯ ವಿವಾಹಯೋಗ್ಯ ಕನಿಷ್ಠ ವಯೋಮಿತಿ 22 ಅಥವಾ 23 ಎಂದಾಗಿತ್ತು. ಈ ಅಭಿಪ್ರಾಯದ ಕ್ರೋಡೀಕರಣವೇ ಕಾರ್ಯಪಡೆ ಶಿಫಾರಸು ಎಂದು ಜಯಾ ಜೇಟ್ಲಿ ವಿವರಿಸಿದರು.
ಕೇಂದ್ರದ ನಿರ್ಧಾರ ಸ್ವಾಗತಾರ್ಹ. 18 ವರ್ಷಕ್ಕೆ ಹೆಣ್ಮಕ್ಕಳು ದೈಹಿಕವಾಗಿ ಸದೃಢ ರಾಗಿರುವುದಿಲ್ಲ. ಮೂಳೆ ಪೂರ್ಣವಾಗಿ ಬೆಳವಣಿಗೆ ಹೊಂದಿರುವುದಿಲ್ಲ. ಹೀಗಾಗಿ ಹದಿಹರಯದಲ್ಲೇ ಗರ್ಭಿಣಿ ಆಗುವುದರಿಂದ ಪ್ರೋಟಿನ್ ಅಂಶ ಹೆಚ್ಚಿಲ್ಲದೆ ಸಹಜ ಹೆರಿಗೆಗೂ ಕಷ್ಟ ಆಗುತ್ತದೆ. ಜನಿಸುವ ಮಕ್ಕಳಿಗೂ ಪೋಷಕಾಂಶ ಹಾಗೂ ಕಡಿಮೆ ತೂಕದ ಸಮಸ್ಯೆ ಕಾಡುತ್ತದೆ. ಮಕ್ಕಳ ಪೋಷಣೆ ಕಷ್ಟವಾಗಿ ಮಾನಸಿಕ ಖಿನ್ನತೆಗೆ ಒಳಗಾಗಬೇಕಾಗುತ್ತದೆ.
|ಡಾ.ಗೀತಾಶಿವಮೂರ್ತಿವಾಣಿವಿಲಾಸ ಆಸ್ಪತ್ರೆ ಅಧೀಕ್ಷಕಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:9 − 1 =
Remember me
