ಕಲಿಕೆಗೆ ವಯಸ್ಸು ಅಡ್ಡಿಯಾಗೋದಿಲ್ಲ ಎಂಬುದು ಪ್ರಚಲಿತ ಮಾತಾಗಿದ್ದರೂ ಇದೀಗ ಜಾರ್ಖಂಡದ ಸಚಿವರೋರ್ವರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಜಾರ್ಖಂಡದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಜಗರ್ನಾಥ್ ಮೆಹ್ತೋ ಅವರಿಗೆ ಈಗ 53 ವರ್ಷ. ಆದರೆ ಅವರೀಗ ಪ್ರಥಮ ಪಿಯುಸಿ (11ನೇ ಕ್ಲಾಸ್​)ಗೆ ಸೇರಲು, ಸರ್ಕಾರಿ ಅಂಗಸಂಸ್ಥೆಯ ಇಂಟರ್​ ಕಾಲೇಜಿಗೆ ಪ್ರವೇಶ ಅರ್ಜಿ ಸಲ್ಲಿಸಿದ್ದಾರೆ.25 ವರ್ಷಗಳ ಬಳಿಕ ಈ ವಯಸ್ಸಿನಲ್ಲಿ ಶಿಕ್ಷಣವನ್ನು ಮತ್ತೆ ಆರಂಭಿಸಲು ನಿರ್ಧರಿಸಿರುವ ಮೆಹ್ತೋ, ಬೊಕೆರೋ ಜಿಲ್ಲೆಯ ದೇವಿ ಮೆಹ್ತೋ ಇಂಟರ್​ ಕಾಲೇಜಿಗೆ ಸೇರಲಿದ್ದಾರೆ.
ಜಗರ್ನಾಥ್ ಮೆಹ್ತೋ ಅವರು ಡುಮ್ರಿ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾದವರು. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮೆಹ್ತೋ, ನಾನೊಬ್ಬ ರಾಜಕಾರಣಿ. ಹಾಗಾಗಿ ವಿಷಯಗಳ ಆಯ್ಕೆಯಲ್ಲಿ ಪೊಲಿಟಿಕಲ್​ (ರಾಜ್ಯಶಾಸ್ತ್ರ)ಗೆ ಮೊದಲ ಆದ್ಯತೆ. ಉಳಿದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಶೀಘ್ರದಲ್ಲೇ ಯೋಚಿಸುತ್ತೇನೆ ಎಂದಿದ್ದಾರೆ.ಇದನ್ನೂ ಓದಿ:ಇಡೀ ಮನೆಗೆ ಬೆಂಕಿ ಹೊತ್ತಿಸಿದ ಮೊಬೈಲ್​; ತಾಯಿ..ಅವಳಿ ಮಕ್ಕಳು ದುರ್ಮರಣ
ಸಚಿವರು 1995ರಲ್ಲಿ 10ನೇ ಕ್ಲಾಸ್ ಪಾಸ್ ಮಾಡಿದ್ದಾರೆ. ಅವರು ಸಚಿವರಾದಾಗಿನಿಂದ ಅನೇಕರು ಈ ಬಗ್ಗೆ ಟೀಕೆ ಮಾಡಿದ್ದರು. ಪ್ರತಿಪಕ್ಷಗಳ ನಾಯಕರಿಂದ ಹಿಡಿದು, ಸಾಮಾನ್ಯ ಜನರವರೆಗೂ ಸಚಿವರ ಶಿಕ್ಷಣವದ ಬಗ್ಗೆ ಆಡಿಕೊಂಡಿದ್ದರು. ಹಾಗಾಗಿ ಮತ್ತೆ ವಿದ್ಯಾಭ್ಯಾಸ ಮುಂದುವರಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ನಾನು ಈಗಷ್ಟೇ ಅರ್ಜಿ ಸಲ್ಲಿಸಿದ್ದೇನೆ. ಅದು ಸ್ವೀಕಾರವಾದ ಬಳಿಕ, ಕೆಲಸ ಮತ್ತು ಓದನ್ನು ಸಮತೋಲನವಾಗಿ ತೂಗಿಸಿಕೊಂಡು ಹೋಗುವ ಬಗ್ಗೆ ಯೋಚಿಸುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್​)
ಧಾರಾಕಾರ ಮಳೆಯಲ್ಲಿ ತೆರೆದ ಮ್ಯಾನ್​ಹೋಲ್​ ಬಳಿ 7 ತಾಸು ನಿಂತ ಈ ಮಹಿಳೆಗೊಂದು ಸೆಲ್ಯೂಟ್…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 8 =
Remember me
