ನವದೆಹಲಿ:ಸಹಕಾರಿ ಕ್ಷೇತ್ರದಲ್ಲಿ ಕಾಂತ್ರಿಕಾರಕ ಬದಲಾವಣೆಗಳನ್ನು ತರಲಿದೆ ಎಂದೇ ನಿರೀಕ್ಷಿಸಲಾಗಿರುವ ಬಹುರಾಜ್ಯ ಸಹಕಾರಿ ಸೊಸೈಟಿ (ತಿದ್ದುಪಡಿ) ಮಸೂದೆ- 2022ಕ್ಕೆ ಲೋಕಸಭೆಯಲ್ಲಿ ಮಂಗಳವಾರ ಅನುಮೋದನೆ ದೊರೆತಿದೆ. ಸಹಕಾರ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರುವ ಉದ್ದೇಶದಿಂದ ತಿದ್ದುಪಡಿ ಮಸೂದೆ ಮಂಡಿಸಲಾಗಿದ್ದು, ಸಹಕಾರಿ ಬ್ಯಾಂಕ್​ಗಳ ಆಡಳಿತ, ಸೇವೆಗಳಲ್ಲಿ ಪಾರದರ್ಶತೆ ತರುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ವಿಧೇಯಕ ಮಂಡಿಸಿದ ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಹೇಳಿದ್ದಾರೆ. ಸಹಕಾರಿ ಬ್ಯಾಂಕ್​ಗಳಲ್ಲಿ ದೊಡ್ಡ ಪ್ರಮಾಣದ ಅಕ್ರಮ, ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತದ ಆರೋಪ ಹಿನ್ನೆಲೆಯಲ್ಲಿ ಈ ವಿಧೇಯಕದ ಮೂಲಕ ಎಲ್ಲ ವ್ಯವಹಾರಗಳನ್ನು ಆರ್​ಬಿಐ ವ್ಯಾಪ್ತಿಗೆ ತರುವ ಉದ್ದೇಶ ಹೊಂದಿದೆ.
ಈ ಮೂಲಕ ಸಹಕಾರಿ ಬ್ಯಾಂಕ್​ಗಳನ್ನು ಹೆಚ್ಚಾಗಿ ಅವಲಂಬಿಸಿರುವ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.
ಗಣಕೀಕರಣಕ್ಕೆ ಆದ್ಯತೆ:ಬಹುರಾಜ್ಯ ಸಹಕಾರಿ ಸೊಸೈಟಿಗಳ ಮೇಲೆ ನಿರಂತರ ನಿಗಾ ವಹಿಸಲು ಕೇಂದ್ರೀಯ ನೋಂದಣಾಧಿಕಾರಿಗಳ ಕಚೇರಿಯನ್ನು ಗಣಕೀಕರಣ ಮಾಡಲಾಗುತ್ತದೆ. ಜತೆಗೆ ಉದ್ದೇಶಿತ ಮಸೂದೆ ಸೊಸೈಟಿಗಳ ಚಟುವಟಿಕೆಗಳಲ್ಲಿ ಪಾರದರ್ಶಕತೆ ತರಲಿದೆ ಎಂದು ಅಮಿತ್ ಷಾ ಸದನಕ್ಕೆ ತಿಳಿಸಿದರು.
ಸಹಕಾರಿ ಚುನಾವಣಾ ಪ್ರಾಧಿಕಾರ:ಸೊಸೈಟಿಗಳಲ್ಲಿ ನ್ಯಾಯಸಮ್ಮತ ಹಾಗೂ ಮುಕ್ತ ಚುನಾವಣೆಗಳು ನಡೆಯಬೇಕು ಎನ್ನುವುದು ಬಹುಮುಖ್ಯ ಸಂಗತಿಯಾಗಿದೆ. ಈ ಕಾಯ್ದೆಯಿಂದ ‘ಸಹಕಾರಿ ಚುನಾವಣಾ ಪ್ರಾಧಿಕಾರ’ ಸ್ಥಾಪಿಸಲಾಗುವುದು. ಇದರ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಮೂರಕ್ಕಿಂತ ಹೆಚ್ಚು ಸದಸ್ಯರಿಲ್ಲದ ಪ್ರಾಧಿಕಾರವನ್ನು ಕೇಂದ್ರ ಸರ್ಕಾರ ನೇಮಿಸಲಿದೆ. ಇದರಲ್ಲಿ ತಲಾ ಒಂದು ಸ್ಥಾನ ಎಸ್​ಸಿ ಹಾಗೂ ಎಸ್​ಟಿ ಸಮುದಾಯದವರಿಗೆ ಹಾಗೂ ಒಂದು ಸ್ಥಾನವನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತದೆ. ಜತೆಗೆ, ಕಾರ್ಯಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಯುವ ಸಮಿತಿ ರಚನೆಯೂ ಈ ಕಾಯ್ದೆಯಲ್ಲಿದೆ.
ಸಹಕಾರ ಸಚಿವಾಲಯ ಸ್ಥಾಪನೆಯಾದ 2 ವರ್ಷಗಳಲ್ಲಿ, ಅನೇಕ ಹೊಸ ಸುಧಾರಣೆ ತರಲಾಗಿದೆ. ಕೃಷಿ ಸಹಕಾರ ಸೊಸೈಟಿಗಳನ್ನು ಗಣಕೀಕರಣ ಮಾಡಲಾಗುತ್ತಿದೆ ಮತ್ತು ರಾಷ್ಟ್ರೀಯ ಡೇಟಾಬೇಸ್ ಸಿದ್ಧಪಡಿಸಲಾಗುತ್ತಿದೆ
| ಅಮಿತ್ ಷಾ, ಕೇಂದ್ರ ಸಹಕಾರ ಸಚಿವ
ಆಡಳಿತಾತ್ಮಕತೆ ಹಾಗೂ ಪಾರದರ್ಶಕತೆಯನ್ನು ತರುವ ಮೂಲಕ ಸಹಕಾರ ಚಳವಳಿಯನ್ನು ಈ ಕಾಯ್ದೆ ಬಲಯುತವನ್ನಾಗಿ ಮಾಡಲಿದೆ.
| ದಿಲೀಪ್ ಸಂಘಾನಿ, ಎನ್​ಸಿಯುಐ ಅಧ್ಯಕ್ಷ
ತಿದ್ದುಪಡಿ ಮಸೂದೆಯು ಸ್ವಾಯತ್ತೆ ಮೂಲಕ ಅಸಮರ್ಥತೆ ಮತ್ತು ದುರಾಡಳಿತದ ಸಂಕೋಲೆಯಿಂದ ಸ್ವಾತಂತ್ರ್ಯದ ಮಾರ್ಗವಾಗಿ ದೇಶದಲ್ಲಿ ಸಹಕಾರಿ ಸಂಸ್ಥೆಗಳ ಅಭಿವೃದ್ಧಿಯ ಹೊಸ ಯುಗವನ್ನು ಪ್ರಾರಂಭಿಸಲಿದೆ.
| ಡಿ.ಎನ್. ಠಾಕೂರ್, ಸಹಕಾರ ಭಾರತಿ ಅಧ್ಯಕ್ಷ
ಬೈಲಾ ರಚನೆ:ಕೇಂದ್ರ ಸಹಕಾರ ಸಚಿವಾಲಯ ರೂಪುಗೊಂಡ ಎರಡು ವರ್ಷಗಳಲ್ಲಿ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಿಗಾಗಿ ಬೈಲಾಗಳನ್ನು ರೂಪಿಸಲಾಗಿದೆ. ಕೇರಳ ಹಾಗೂ ಪಶ್ಚಿಮ ಬಂಗಾಳ ಹೊರತು ಉಳಿದ ರಾಜ್ಯಗಳು ಇದನ್ನು ಅಳವಡಿಸಿಕೊಂಡಿವೆ. ಸಹಕಾರ ಸಂಘಗಳ ಕಂಪ್ಯೂಟರೀಕರಣ ಸೇರಿ ಹಲವು ಮಹತ್ವದ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಷ್ಟ್ರೀಯ ಡೇಟಾಬೇಸ್ ಕೂಡ ಸಿದ್ಧಪಡಿಸಲಾಗುತ್ತಿದೆ ಎಂದು ಅಮಿತ್ ಷಾ ಹೇಳಿದರು.
ಶಿಕ್ಷಣ ಮತ್ತು ತರಬೇತಿ ನಿಧಿ:ಪ್ರಸ್ತುತ ಸಹಕಾರಿ ಶಿಕ್ಷಣ ಹಾಗೂ ತರಬೇತಿ ಉದ್ದೇಶಗಳಿಗಾಗಿ ಸ್ಥಾಪಿಸಲಾಗಿರುವ ಶಿಕ್ಷಣ ನಿಧಿಯನ್ನು ಭಾರತದ ರಾಷ್ಟ್ರೀಯ ಸಹಕಾರಿ ಸಂಘವು (ಎನ್​ಸಿಯುಐ) ನಿರ್ವಹಿಸುತ್ತದೆ. ಈ ನಿಧಿ ಯಾರ ಬಳಿ ಇರಬೇಕು ಎಂಬುದು ಭಾರಿ ಚರ್ಚೆ ಹಾಗೂ ವಿವಾದಕ್ಕೂ ಕಾರಣವಾಗಿದೆ. ಈ ಬಗ್ಗೆ ಯಾವುದೇ ಸ್ಪಷ್ಟ ನಿರ್ದೇಶನ ಈ ಕಾಯ್ದೆಯಲ್ಲಿಲ್ಲ.
ಲೆಕ್ಕಪರಿಶೋಧನೆಗೆ ನಿಗಾ:500 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಬಹುರಾಜ್ಯ ಕೋ-ಆಪ್ ಬ್ಯಾಂಕ್​ಗಳು, ಕ್ರೆಡಿಟ್ ಸೊಸೈಟಿಗಳು ಹಾಗೂ ನಾನ್ ಕ್ರೆಡಿಟ್ ಸೊಸೈಟಿಗಳ ಲೆಕ್ಕ ಪರಿಶೋಧನೆಗಾಗಿ ಕೇಂದ್ರೀಯ ನೋಂದಣಾಧಿಕಾರಿ ಕಚೇರಿಯಿಂದ ಅನುಮೋದನೆ ಪಡೆದವರನ್ನು ಲೆಕ್ಕ ಪರಿಶೋಧಕರನ್ನು ನೇಮಿಸಬೇಕು. ಜತೆಗೆ, ಆರ್​ಬಿಐನಿಂದ ಅನುಮೋದನೆ ಪಡೆದವರನ್ನು ನಿಯೋಜಿಸಲು ಅವಕಾಶ ಕಲ್ಪಿಸಲಾಗಿದೆ. ಒಟ್ಟಾರೆ ಸಹಕಾರದಿಂದ ಸಮೃದ್ಧಿ’ ಸಾಧಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಅಮಿತ್ ಷಾ ವಿವರಿಸಿದರು.
ಹಲವರ ಸ್ವಾಗತ:ಬಹುರಾಜ್ಯ ಸಹಕಾರಿ ಸೊಸೈಟಿ (ತಿದ್ದುಪಡಿ) ಕಾಯ್ದೆ- 2022 ಲೋಕಸಭೆಯ ಅನುಮೋದನೆ ಪಡೆಯುತ್ತಿದ್ದಂತೆ ಸಹಕಾರಿ ಕ್ಷೇತ್ರಗಳ ಗಣ್ಯರು ಕೇಂದ್ರದ ಕ್ರಮವನ್ನು ಸ್ವಾಗತಿಸಿದ್ದಾರೆ. ಸೊಸೈಟಿಗಳ ಆಡಳಿತ ಮಂಡಳಿಗಳು ಸಂತಸ ವ್ಯಕ್ತಪಡಿಸಿವೆ.

ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 14 =
Remember me
