ಲಖನೌ:ಕೆಲಸಕ್ಕೆ ಹೋಗುವ ವೇಳೆ ತುಂಬಾ ಲೇಟ್​ ಆಗಿದ್ದ್ರರೆ ನಾವು ನಿಯಮಗಳನ್ನು ಗಾಳಿಗೆ ತೂರಿ ಮುಂದಕ್ಕೆ ಹೋಗುತ್ತೇವೆ. ಇದೀಗ ಅದೇ ರೀತಿಯ ಘಟನೆಯೊಂದರಲ್ಲಿ ಸಚಿವರೊಬ್ಬರು ಈ ರೀತಿ ಮಾಡುವ ಮೂಲಕ ಸುದ್ದಿಯಲ್ಲಿದ್ದು ಸಾಕಷ್ಟು ಖಂಡನೆಗೆ ಗುರಿಯಾಗಿದ್ದಾರೆ.
ಉತ್ತರಪ್ರದೇಶ ಸರ್ಕಾರದಲ್ಲಿ ಪಶು ಸಂಗೋಪನಾ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಧರಮ್​ಪಾಲ್​ ಸಿಂಗ್​ ರೈಲಿಗೆ ಹೊತ್ತಾಯಿತು ಎಂಬ ಕಾರಣಕ್ಕೆ ತಮ್ಮ ಕಾರನ್ನು ನೇರ ಪ್ಲಾಟ್​ಫಾರ್ಮ್​ಗೆ ಒಳಗೆ ನುಗ್ಗಿಸಿರುವ ಘಟನೆ ಉತ್ತರಪ್ರದೇಶದ ಲಖನೌನಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದ್ದು, ಸಾಕಷ್ಟು ಖಂಡನೆಗೆ ಗುರಿಯಾಗಿದೆ. ಈ ರೀತಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಿ ಎಂದು ಹಲವರು ಆಗ್ರಹಿಸಿದ್ದಾರೆ.
At Charbagh station in UP's Lucknow, an SUV of a UP minister drove up the ramp and stopped just ahead of an escalator for the Minister who was supposed to board a train to Bareilly.pic.twitter.com/GC723LgKho
ಇದನ್ನೂ ಓದಿ:ಗೃಹಲಕ್ಷ್ಮಿ ಯೋಜನೆ ಉದ್ಘಾಟನೆ ಮೈಸೂರಿನಲ್ಲಿ ನಡೆಸುತ್ತಿರುವ ಹಿಂದೆ ರಾಜಕೀಯ ಉದ್ದೇಶವಿಲ್ಲ: ಡಿ.ಕೆ. ಶಿವಕುಮಾರ್​
ಸಚಿವ ಧರಮ್​ಪಾಲ್​ ಸಿಂಗ್​ ಕಾರ್ಯಕ್ರಮದ ನಿಮಿತ್ತ ಲಖನೌನಿಂದ ಬರೇಲಿಗೆ ರೈಲಿನಲ್ಲಿ ತೆರಳಬೇಕಿತ್ತು. ರೈಲ್ವೆ ನಿಲ್ದಾಣಕ್ಕೆ ತಡವಾಗಿ ಆಗಮಿಸಿದ ಕಾರಣ ಅವರ ವಾಹನದ ಚಾಲಕ ಕಾರನ್ನು ಅಂಗವಿಕಲರಿಗೆ ಮೀಸಲಿಟ್ಟಿದ್ದ ರ‍್ಯಾಂಪ್‌ ಮೂಲಕ ಪ್ಲಾಟ್​ಫಾರ್ಮ್​ ಪ್ರವೇಶಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ವೈರಲ್​ ವಿಡಿಯೋ ಕುರಿತು ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಅಖಿಲೇಶ್​ ಯಾದವ್​ ಸಚಿವರು ಪ್ಲಾಟ್​ಫಾರ್ಮ್​ಗೆ ಬುಲ್ಡೋಜರ್​ ಕೊಂಡೊಯ್ಯದಿದ್ದಕ್ಕೆ ಜನರು ಅವರಿಗೆ ಕೃತಜ್ಞರಾಗಿರಬೇಕು ಟೀಕಿಸಿದ್ದಾರೆ. ಘಟನೆ ಕುರಿತು ಸಚಿವ ಧರಮ್​ಪಾಲ್​ ಸಿಂಗ್​ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − 3 =
Remember me
