ವೆಲ್ವಾರ್​:ತಮಿಳುನಾಡು ಡಿಎಂಕೆ ಸಚಿವ ದೊರೈ ಮುರುಗನ್​ ಅವರ ಸಹೋದರನ ಪುತ್ರಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಆಡಳಿತಾರೂಢ ಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ತಮಿಳುನಾಡಿನ ಹಾಲಿ ಜಲಸಂಪನ್ಮೂಲ ಸಚಿವ ದೊರೈ ಮುರುಗನ್​ ಅವರ ಹಿರಿಯ ಸಹೋದರ ದೊರೈ ಮಹಾಲಿಂಗಂ ಅವರು ಕಳೆದ ವರ್ಷ ಮೃತಪಟ್ಟಿದ್ದಾರೆ. ಅವರ ಪುತ್ರಿ ಭಾರತಿ (55) ಆಕೆಯ ಪತಿ ರಾಜಕುಮಾರ್​ ಜೊತೆ ವಾಸವಿದ್ದರು. ದಂಪತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿದೆ. ದಂಪತಿ ವೆಲ್ವಾರ್​ ಜಿಲ್ಲೆಯ ಕಟ್ಪಾಡಿಯಲ್ಲಿ ನೆಲೆಸಿದ್ದರು.
ಕಟ್ಪಾಡಿ ಹತ್ತಿರದ ಲಾಥೇರಿಯಲ್ಲಿರುವ ರೈಲ್ವೆ ಹಳಿಗಳ ಮೇಲೆ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಜೋಳಾರಪೇಟೆ ರೈಲ್ವೆ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು, ತನಿಖೆ ನಡೆಸುತ್ತಿದಾಗ ಮೃತಪಟ್ಟಿದ್ದು, ಸಚಿವರ ಸಹೋದರ ಪುತ್ರಿ ಭಾರತಿ ಎಂದು ಗೊತ್ತಾಗಿದೆ.
ಕೌಟುಂಬಿಕ ಸಮಸ್ಯೆಯಿಂದ ಭಾರತಿ ಮೃತಪಟ್ಟಿದ್ದಾಳೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಸುದ್ದಿ ಇದೀಗ ಡಿಎಂಕೆ ಸಚಿವರ ಕುಟುಂಬವನ್ನು ಆಘಾತಕ್ಕೆ ದೂಡಿದೆ.(ಏಜೆನ್ಸೀಸ್​)
ದೆಹಲಿ ಪಾಲಿಕೆ ಚುನಾವಣೆ: ಎಎಪಿಗೆ ಭರ್ಜರಿ ಗೆಲುವು, 15 ವರ್ಷದ ಬಿಜೆಪಿ ಆಡಳಿತ ಅಂತ್ಯ

ಮಹಿಳಾ ಯೂಟ್ಯೂಬರ್​ ಮಾತು ನಂಬಿ ಆಕೆಯೊಂದಿಗೆ ರಾತ್ರಿ ಕಳೆದ ಉದ್ಯಮಿಗೆ ಭಾರಿ ನಷ್ಟ: 3 ತಿಂಗಳ ಬಳಿಕ ಸುಂದರಿಗೂ ಶಾಕ್​

ಡ್ರಗ್ಸ್​ ವಿರುದ್ಧ ಹೋರಾಡ್ತಿದ್ದ ಯುವ ನಾಯಕನ ಕರಾಳ ಮುಖ ಬಯಲು: ಮೊಬೈಲ್​ನಲ್ಲಿತ್ತು 30 ಮಹಿಳೆಯರ ವಿಡಿಯೋ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + five =
Remember me
