ಹೈದರಾಬಾದ್​:ಪ್ರತಿಭಟನೆ ನಿರತರಾಗಿದ್ದ ಜನರ ಅಸಮಾಧಾನ ತೀವ್ರ ಆಕ್ರೋಶವಾಗಿ ಪರಿಣಮಿಸಿದ್ದು, ಕೆಲವೇ ಕ್ಷಣಗಳಲ್ಲಿ ಅವರು ಸಚಿವರ ಮನೆಗೇ ಬೆಂಕಿ ಇಟ್ಟಿದ್ದಾರೆ. ಇಂಥದ್ದೊಂದು ಪ್ರಕರಣ ಆಂಧ್ರಪ್ರದೇಶದಲ್ಲಿ ನಡೆದಿದೆ.
ಆಂಧ್ರಪ್ರದೇಶದ ಸಾರಿಗೆ ಸಚಿವ ಪಿ. ವಿಶ್ವರೂಪ ಅವರ ಅಮಲಾಪುರಂ ಪಟ್ಟಣದಲ್ಲಿರುವ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಾಕಿದ್ದಾರೆ. ಈ ಸಂದರ್ಭದಲ್ಲಿ ಒಂದು ಪೊಲೀಸ್ ವಾಹನ ಮತ್ತು ಶಾಲಾ ವಾಹನವೊಂದಕ್ಕೂ ಬೆಂಕಿ ತಗುಲಿದೆ. ಈ ಸಂದರ್ಭದಲ್ಲಿನ ಕಲ್ಲುತೂರಾಟದಿಂದಾಗಿ 20ಕ್ಕೂ ಅಧಿಕ ಪೊಲೀಸರಿಗೂ ಗಾಯಗಳಾಗಿವೆ.
ಆಂಧ್ರಪ್ರದೇಶದಲ್ಲಿ ಹೊಸದಾಗಿ ರಚಿಸಿರುವ ಜಿಲ್ಲೆಗೆ ಮಾಡಿದ್ದ ನಾಮಕರಣದಲ್ಲಿನ ವ್ಯತ್ಯಾಸವೇ ಇಷ್ಟಕ್ಕೆಲ್ಲ ಕಾರಣ ಎನ್ನಲಾಗಿದೆ. ನೂತನ ಕೋನಸೀಮ ಜಿಲ್ಲೆಗೆ ಬಿ.ಆರ್. ಅಂಬೇಡ್ಕರ್ ಕೋನಸೀಮ ಜಿಲ್ಲೆ ಎಂದು ಹೆಸರಿಡಲಾಗುವುದು ಎಂದು ಸರ್ಕಾರ ಪ್ರಕಟಣೆ ಹೊರಡಿಸಿತ್ತು. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಈ ಕೃತ್ಯ ಎಸಗಲಾಗಿದೆ.
ನಾಳೆ ಭಾರತ್ ಬಂದ್​!: ಯಾರಿಂದ ಕರೆ, ಏನು ಬೇಡಿಕೆ?
ಭೀಕರ ಅಪಘಾತ: ಗಂಡ-ಹೆಂಡತಿ ಇಬ್ಬರೂ ಸ್ಥಳದಲ್ಲೇ ಸಾವು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
