ನವದೆಹಲಿ:ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದ ಭಾರತವನ್ನು ಸ್ವತಂತ್ರಗೊಳಿಸುವ ಸಲುವಾಗಿ ಹೋರಾಡಿದ ಭಗತ್​ ಸಿಂಗ್​, ರಾಜ್​ಗುರು ಮತ್ತು ಸುಖದೇವ್​ ಗಲ್ಲಿಗೇರಿದ ದಿನವಿದು. 1931ರಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೂರು ವೀರರ ಸ್ಮರಣಾರ್ಥ ಪ್ರತಿ ವರ್ಷ ಈ ದಿನವನ್ನು ಹುತಾತ್ಮರ ದಿನವಾಗಿ ಆಚರಿಸಿಕೊಂಡು ಬಂದಿದ್ದು, ಇಂದು ಪ್ರಧಾನಿ ಮೋದಿ ಸೇರಿದಂತೆ ಕೆಲ ರಾಜಕೀಯ ಮುಖಂಡರು ಈ ವೀರರ ಸ್ಮರಣೆ ಮಾಡಿದ್ದಾರೆ.
ಟ್ವಿಟ್ಟರ್​ನಲ್ಲಿ ಹುತಾತ್ಮರ ಸ್ಮರಣೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, “ತಾಯಿ ಭಾರತೀಯ ವೀರ ಮಕ್ಕಳಾದ ಭಗತ್​ ಸಿಂಗ್​, ಸುಖದೇವ್​ ಮತ್ತು ರಾಜ್​ಗುರು ಅವರನ್ನು ಸ್ಮರಿಸುತ್ತೇನೆ. ಅವರಿಗೆ ಕೃತಜ್ಞರಾಗಿರುವ ರಾಷ್ಟ್ರವು ಅವರು ಮಾಡಿರುವ ತ್ಯಾಗವನ್ನು ಯಾವಾಗಲೂ ಸ್ಮರಿಸುತ್ತದೆ. ಜೈ ಹಿಂದ್​!” ಎಂದು ಟ್ವೀಟ್​ ಮಾಡಿದ್ದಾರೆ. ಗೃಹ ಸಚಿವ ಅಮಿತ್​ ಶಾ ಕೂಡ ಟ್ವೀಟ್​ ಮಾಡಿದ್ದು, “ಭಗತ್​ ಸಿಂಗ್​, ಸುಖದೇವ್​ ಮತ್ತು ರಾಜ್​ಗುರು ಕೇವಲ ಸ್ವಾತಂತ್ರ್ಯ ಹೋರಾಟದಿಂದ ಮಾತ್ರವಲ್ಲ ತ್ಯಾಗದಿಂದಲೂ ಸಹ ಭಾರತದ ಜನರ ಮನಸ್ಸನ್ನು ಗೆದ್ದಿದ್ದಾರೆ. ಈ ಮೂವರು ರಾಷ್ಟ್ರೀಯವಾದಿಗಳು ಸ್ವಾತಂತ್ರ್ಯ ಚಳವಳಿಯ ಅಮರ ಸಂಕೇತಗಳಾಗಿದ್ದಾರೆ. ರಾಷ್ಟ್ರದ ಸೇವೆ ಮತ್ತು ಐಕ್ಯತೆಗೆ ಯಾವಾಗಲೂ ನಮಗೆ ಸ್ಫೂರ್ತಿ ನೀಡುತ್ತಾರೆ.” ಎಂದು ಬರೆದುಕೊಂಡಿದ್ದಾರೆ.
ಕಾಂಗ್ರೆಸ್​ನ ನಾಯಕ ರಾಹುಲ್​ ಗಾಂಧಿ ಕೂಡ ಹುತಾತ್ಮರ ದಿನದಂದು ದೇಶಭಕ್ತರನ್ನು ನೆನಪಿಸಿಕೊಂಡಿದ್ದು, “ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಭಗತ್​ ಸಿಂಗ್​, ಸುಖದೇವ್​ ಮತ್ತು ರಾಜ್​ಗುರುಗೆ ನಮನಗಳು” ಎಂದು ಟ್ವೀಟ್​ ಮಾಡಿದ್ದಾರೆ.(ಏಜೆನ್ಸೀಸ್​)
शहीद दिवस पर मां भारती के महान सपूत वीर भगत सिंह, सुखदेव और राजगुरु को कोटि-कोटि नमन। देश के लिए उनका बलिदान कृतज्ञ राष्ट्र सदा याद रखेगा। जय हिंद!
— Narendra Modi (@narendramodi)March 23, 2020

शहीद सुखदेव, भगत सिंह और राजगुरु ने न सिर्फ जीते जी देश की स्वतंत्रता के लिए संघर्ष किया बल्कि अपने बलिदान से हर भारतवासी के हृदय में स्वाधीनता की अलख जगायी।यह तीनों राष्ट्रभक्त स्वतंत्रता आंदोलन के अमर प्रतीक हैं जो हमें सदैव राष्ट्र की सेवा और एकता के लिए प्रेरित करते रहेंगे।pic.twitter.com/Qy080idula
— Amit Shah (@AmitShah)March 23, 2020

देश की आजादी के लिए अपनी जान कुर्बान करने वाले अमर शहीद भगत सिंह जी, राजगुरू जी और सुखदेव जी के शहादत दिवस पर शत् शत् नमन।
#ShaheedDiwaspic.twitter.com/WCwIydijvv
— Rahul Gandhi (@RahulGandhi)March 23, 2020

ಕರೊನಾದಿಂದ ಗುಣಮುಖರಾದರೂ ಸಾವು ಬಿಡಲಿಲ್ಲ; ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದ 68 ವರ್ಷದ ವೃದ್ಧ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 11 =
Remember me
