ಮಧ್ಯಪ್ರದೇಶ:ಮಧ್ಯಪ್ರದೇಶದ ಹಣಕಾಸು ಸಚಿವ ಜಗದೀಶ್ ದೇವ್ರಾ ಅವರು ಕಬಡ್ಡಿ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಯುವ ಆಟಗಾರನೊಬ್ಬ ಸಚಿವರ ಕಾಲನ್ನು ಹಿಡಿದಿರುವುದನ್ನು ಮತ್ತು ಸಚಿವ ದೇವ್ರಾ ಮಿಡ್‌ಲೈನ್ ಅನ್ನು ಮುಟ್ಟಲು ಸಾಧ್ಯವಾಗದಿರುವುದನ್ನು ತೋರಿಸುತ್ತದೆ.
ಸಂಸದ್ ಖೇಲ್ ಮಹೋತ್ಸವ್​ ಕಾರ್ಯಕ್ರಮದ ಅಂಗವಾಗಿ ನಡೆದ ಕಬಡ್ಡಿ ಸ್ಪರ್ಧೆಯಲ್ಲಿ ಈ ಘಟನೆ ನಡೆದಿದೆ. ಕ್ರೀಡಾಕೂಟದ ವೇಳೆ ಯುವಕರು ಕಬಡ್ಡಿ ಆಡುವುದನ್ನು ನೋಡಿದ ಹಣಕಾಸು ಸಚಿವರೂ ಕ್ರೀಡಾಂಗಣಕ್ಕೆ ಇಳಿದರು.
65 ವರ್ಷ ವಯಸ್ಸಿನ ಸಚಿವರು ವೀಡಿಯೊದಲ್ಲಿ ಉತ್ತಮವಾಗಿ ಆಟನ್ನು ಆರಂಭಿಸಿದ್ದು ಆದರೆ ಬಾಲ್ಕ್ ಲೈನ್ ಬಳಿ ಆಟದಿಂದ ಔಟ್​ ಆಗಿದ್ದಾರೆ. ಇದಾದ ಬಳಿಕ ಕಾಲು ಹಿಡಿದ ವಿದ್ಯಾರ್ಥಿಯನ್ನು ವಿತ್ತ ಸಚಿವರು ಶ್ಲಾಘಿಸಿದರು.
VIDEO VIRAL | ಕಬಡ್ಡಿ ಆಡುವಾಗ ಸಚಿವರ ಕಾಲೆಳೆದ ಬಾಲಕ!#viralvideo#latestnews#kannadanews#madhyapradesh#kabaddi#sports#minister#specialnews#vijayavanihttps://t.co/TgohRDYtMzpic.twitter.com/HG6n6i0Zlk— Vijayavani (@VVani4U)April 20, 2023
VIDEO VIRAL | ಕಬಡ್ಡಿ ಆಡುವಾಗ ಸಚಿವರ ಕಾಲೆಳೆದ ಬಾಲಕ!#viralvideo#latestnews#kannadanews#madhyapradesh#kabaddi#sports#minister#specialnews#vijayavanihttps://t.co/TgohRDYtMzpic.twitter.com/HG6n6i0Zlk
ಮಧ್ಯಪ್ರದೇಶದ ಮಂದಸೌರ್ ಸಂಸದೀಯ ಜಿಲ್ಲೆಯಲ್ಲಿ, 8 ವಿಧಾನಸಭೆಯ 95 ಸ್ಥಳಗಳಲ್ಲಿ ಸಂಸದ್ ಖೇಲ್ ಮಹೋತ್ಸವ ನಡೆಯುತ್ತಿದೆ. ಈ ಕ್ರೀಡಾಕೂಟವು ಏಪ್ರಿಲ್ 26 ರವರೆಗೆ ಮುಂದುವರಿಯುತ್ತದೆ. ಕ್ರೀಡಾ ಹಬ್ಬದಲ್ಲಿ ಸಾಂಪ್ರದಾಯಿಕ ಕ್ರೀಡೆಗಳಾದ ಖೋ-ಖೋ, ಕಬಡ್ಡಿ, ಟಗ್ ಆಫ್ ವಾರ್, ಮ್ಯಾರಥಾನ್ ಮತ್ತು ಸಿತೌಲಿಯಾ ನಡೆಯಲಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 20 =
Remember me
