ಚಿತ್ತೂರು:ಆಂಧ್ರ ಪ್ರದೇಶದ ಸಚಿವೆ ಹಾಗೂ ನಟಿ ರೋಜಾ ಸೆಲ್ವಮಣಿ ಅವರು ವಿದ್ಯಾರ್ಥಿನಿಯರೊಂದಿಗೆ ಕಬಡ್ಡಿ ಆಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.
ಆಂಧ್ರ ಸರ್ಕಾರದಲ್ಲಿ ರೋಜಾ ಅವರು ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಯುವ ಪ್ರಗತಿ ಸಚಿವೆ ಆಗಿದ್ದಾರೆ. ತಾವು ಪ್ರತಿನಿಧಿಸುವ ಚಿತ್ತೂರು ಜಿಲ್ಲೆಯ ನಗರಿ ಕ್ಷೇತ್ರದಲ್ಲಿ ಆಯೋಜಿಸಿದ್ದ ಜಗನ್ನಣ್ಣ ಸ್ಪೋರ್ಟ್ಸ್​ ಸೆಲೆಬ್ರೇಷನ್​ನ ಉದ್ಘಾಟಿಸಿ, ವಿದ್ಯಾರ್ಥಿನಿಯರೊಂದಿಗೆ ಕಬಡ್ಡಿ ಆಡಿದರು. ​
ವಿದ್ಯಾರ್ಥಿನಿಯರನ್ನು ಹುರಿದುಂಬಿಸುವ ಸಲುವಾಗಿ ಕಬಡ್ಡಿ ಅಖಾಡಕ್ಕೆ ಇಳಿದ ರೋಜಾ ಅವರು ಕಬಡ್ಡಿ..ಕಬಡ್ಡಿ ಎನ್ನುತಾ ರೈಡ್​ ಮಾಡಲು ಹೋದಾಗ ವಿದ್ಯಾರ್ಥಿನಿಯರ ಕೈಗೆ ಸಿಕ್ಕಿಬಿದ್ದು, ಬಿಡಿಸಿಕೊಳ್ಳುವ ಯತ್ನದಲ್ಲಿ ನೆಲಕ್ಕೆ ಬಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ರೋಜಾ ಅವರು ಕೆಳಕ್ಕೆ ಬಿದ್ದರು ಮತ್ತೆ ಮೇಲೆ ಎದ್ದು ವಿದ್ಯಾರ್ಥಿನಿಯರ ಜೊತೆ ಆಡಿದರು. ರೋಜಾ ಅವರ ಕ್ರೀಡಾಸ್ಫೂರ್ತಿ ಕಂಡು ಅಲ್ಲಿದ್ದವರು ಮೆಚ್ಚುಗೆ ವ್ಯಕ್ತಪಡಿಸಿದರು. ಸಾಮಾಜಿಕ ಜಾಲತಾಣದಲ್ಲೂ ಸಹ ರೋಜಾ ಅವರು ವಿದ್ಯಾರ್ಥಿನಿಯರನ್ನು ಹುರಿದುಂಬಿಸುತ್ತಿರುವ ರೀತಿಗೆ ಫಿದಾ ಆಗಿ, ಮೆಚ್ಚುಗೆ ಮಹಾಪೂರವನ್ನೇ ಹರಿಸಿದ್ದಾರೆ.
ಇದೇ ಮೊದಲೇನಲ್ಲ ಈ ಹಿಂದೆಯೂ ರೋಜಾ ಅವರು ಯುವಕರೊಂದಿಗೆ ಕಬಡ್ಡಿ ಆಡುವ ಮೂಲಕ ಭಾರಿ ಸುದ್ದಿಯಾಗಿದ್ದರು. ಜನರೊಂದಿಗೆ ಬೆರೆಯುವ ಅವರ ಗುಣ ನೋಡಿ, ಅನೇಕ ಅವರ ಬಗ್ಗೆ ಉತ್ತಮ ಅಭಿಪ್ರಾಯಗಳನ್ನು ಹೊಂದಿದ್ದಾರೆ.(ಏಜೆನ್ಸೀಸ್​)
(ವಿಡಿಯೋ ಕೃಪೆ: ವನಿತಾ ಟಿವಿ)

A post shared by Roja Selvamani (@rojaselvamani)

VIDEO| ಯುವಕರೊಂದಿಗೆ ಕಬಡ್ಡಿ ಅಖಾಡಕ್ಕಿಳಿದ ನಟಿ-ರಾಜಕಾರಣಿ ರೋಜಾ..!

ಪ್ರೀತಿಸಿದ ಹುಡುಗಿಯನ್ನು ಮದ್ವೆಯಾಗಲು ತಾನು ಕೆಲ್ಸ ಮಾಡ್ತಿದ್ದ ATMನಲ್ಲೇ ಹಣ ಎಗರಿಸಿದ ಸೆಕ್ಯುರಿಟಿ ಗಾರ್ಡ್!

ಪತಿಯ ಮುಂದೆ ಪ್ರದರ್ಶಿಸು ಸಾರ್ವಜನಿಕರ ಮುಂದಲ್ಲ! ಟ್ರೋಲ್​ಗೆ ಗುರಿಯಾದ ನಿವೇದಿತಾರ ಹೊಸ ಅವತಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
