ಬೆಂಗಳೂರು:ಕರೊನಾ ಮಹಾಮಾರಿ ಜನರನ್ನು ಕಂಗೆಡಿಸಿರುವುದು ಮಾತ್ರವಲ್ಲದೇ, ಸರ್ಕಾರಗಳನ್ನೂ ಚಿಂತೆಗೀಡುಮಾಡಿಬಿಟ್ಟಿದೆ. ಸದ್ದಿಲ್ಲದೇ ಅದ್ಯಾವುದೋ ಮಾಯೆಯಲ್ಲಿ ದೇಹದೊಳಕ್ಕೆ ನುಸುಳುತ್ತಿರುವ ಈ ವೈರಸ್​ ಅನ್ನು ಹೇಗೆ ಓಡಿಸುವುದು ಎಂಬುದೇ ಚಿಂತೆಯಾಗಿದೆ.
ಇದೀಗ ವೈದ್ಯಕೀಯ ಸಚಿವ ಡಾ.ಸುಧಾಕರ್​ ಕೆ. ಅವರ ನಿದ್ದೆಯನ್ನು ಈ ವೈರಸ್​ ಕೆಡಿಸಿದೆ. ಅದಕ್ಕೆ ಕಾರಣ ಮಹಾರಾಷ್ಟ್ರದಿಂದ 250 ಜನರು ಚಿಕ್ಕಬಳ್ಳಾಪುರಕ್ಕೆ ಆಗಮಿಸುತ್ತಿರುವುದು!
ಹೌದು. ಇದಾಗಲೇ ಮಹಾರಾಷ್ಟ್ರದಿಂದ ಬಂದ ನೂರಾರು ಮಂದಿ ಕರ್ನಾಟಕದೊಳಗೆ ವೈರಸ್​ ಅನ್ನು ಅತಿ ವೇಗದಲ್ಲಿ ಹರಡಿಸುತ್ತಿದ್ದಾರೆ. ಮಂಡ್ಯ, ಬೀದರ್​ ಸೇರಿದಂತೆ ಕೆಲವು ಜಿಲ್ಲೆಗಳು ಮಹಾರಾಷ್ಟ್ರದಿಂದ ಬಂದವರಿಂದಾಗಿಯೇ ಅಕ್ಷರಶಃ ನಲುಗಿ ಹೋಗಿದೆ. ಇದೀಗ ಚಿಕ್ಕಬಳ್ಳಾಪುರಕ್ಕೆ ಅವರನ್ನು ಕರೆ ತರುತ್ತಿರುವುದು ಸಚಿವ ಸುಧಾಕರ್​ ಅವರ ನಿದ್ದೆಯನ್ನೂ ಹಾಳುಮಾಡಿದೆಯಂತೆ.
ಇದನ್ನೂ ಓದಿ:ಆನ್​ಲೈನ್​ ಮದ್ಯಪ್ರಿಯರಿಗೆ ಬಿತ್ತಲ್ಲಪ್ಪೋ ಗಾಳ! ಎಣ್ಣೆ ಕುಡಿಯುವ ಮೊದಲೇ ಏರಿಬಿಟ್ಟಿತು ನಶೆ…
ಈ ಕುರಿತು ಆತಂಕ ವ್ಯಕ್ತಪಡಿಸಿ ಅವರು ಟ್ವೀಟ್ ಮಾಡಿದ್ದಾರೆ. ಸೋಂಕು ವ್ಯಾಪಕವಾಗಿರುವ ಮಹಾರಾಷ್ಟ್ರದಿಂದ ಸುಮಾರು 250 ಜನರನ್ನು 6 ಬಸ್ಸುಗಳಲ್ಲಿ ಚಿಕ್ಕಬಳ್ಳಾಪುರಕ್ಕೆ ಕಳುಹಿಸಿರುವುದು ದುರದೃಷ್ಟಕರ ಹಾಗೂ ದುಡುಕಿನ ನಿರ್ಧಾರ. ಹೊರರಾಜ್ಯದ ಪ್ರಯಾಣಿಕರಿಂದ ಸೋಂಕಿತರ ಸಂಖ್ಯೆ ಹೆಚ್ಚಳವಾಗಬಹುದೆಂಬ ಆತಂಕ ಹಾಗೂ ದುಗುಡದಿಂದ ನಿದ್ದೆ ಬರುತ್ತಿಲ್ಲ. ಎಲ್ಲಾ ಜಿಲ್ಲಾಡಳಿತಗಳು ಎಚ್ಚರವಹಿಸಬೇಕು ಎಂದು ಅವರು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.
ಸೋಂಕು ವ್ಯಾಪಕವಾಗಿರುವ ಮಹಾರಾಷ್ಟ್ರದಿಂದ ಸುಮಾರು 250 ಜನರನ್ನು 6 ಬಸ್ಸುಗಳಲ್ಲಿ ಚಿಕ್ಕಬಳ್ಳಾಪುರಕ್ಕೆ ಕಳುಹಿಸಿರುವುದು ದುರದೃಷ್ಟಕರ ಹಾಗು ದುಡುಕಿನ ನಿರ್ಧಾರ. ಹೊರರಾಜ್ಯದ ಪ್ರಯಾಣಿಕರಿಂದ ಸೋಂಕಿತರ ಸಂಖ್ಯೆ ಹೆಚ್ಚಳವಾಗಬಹುದೆಂಬ ಆತಂಕ ಹಾಗು ದಿಗುಡದಿಂದ ನಿದ್ದೆ ಬರುತ್ತಿಲ್ಲ.. ಎಲ್ಲಾ ಜಿಲ್ಲಾಡಳಿತಗಳು ಎಚ್ಚರವಹಿಸಬೇಕು.
— Dr Sudhakar K (@mla_sudhakar)May 20, 2020

ಈ ಟ್ವೀಟ್​ ಮಾಡಿರುವುದು ಅವರು ನಿನ್ನೆ ರಾತ್ರಿ. ಇಂದು ಬೆಳಗ್ಗೆ ಇನ್ನೊಂದು ಟ್ವೀಟ್​ ಮಾಡಿರುವ ಅವರು, ನಾನು ಈಗಾಗಲೇ ಮಖ್ಯ ಕಾರ್ಯದರ್ಶಿಯವರ ಜತೆ ಮಾತಾಡಿದ್ದೇನಿ. ಎರಡು ದಿನಗಳಿಂದ ನಮ್ಮ ಗಡಿಗೆ ಬಂದು ಕಾಯುತ್ತಿದ್ದರು. ಹಾಗಾಗಿ ಮಾನವೀಯತೆ ದೃಷ್ಟಿಯಿಂದ ಬಿಡಬೇಕಾಯಿತು ಎಂದು ಸಮಜಾಯಷಿ ಕೊಟ್ಟರು. ಹೊರ ರಾಜ್ಯದಿಂದ ಬಂದ ಎಲ್ಲರನ್ನೂ ಕ್ವಾರಂಟೈನ್ ಮಾಡುತ್ತೇವೆ ಹಾಗೂ ಎಲ್ಲರಿಗೂ ಪರೀಕ್ಷೆಯನ್ನು ಮಾಡುತ್ತೇವೆ. ಆಯಾ ಜಿಲ್ಲೆಯ ಯಾರು ಆತಂಕಕ್ಕೆ ಒಳಗಾಗಬೇಡಿ ಎಂದು ಅದರಲ್ಲಿ ಬರೆದು ಸಮಜಾಯಿಷಿಯನ್ನೂ ಕೊಟ್ಟಿದ್ದಾರೆ.
ಇದನ್ನೂ ಓದಿ:ಇನ್ನು ಆನ್​ಲೈನ್​ನಲ್ಲೇ ದರ್ಶನ ನೀಡಲಿರುವ ದೇವಾನುದೇವತೆಗಳು- ನಡೆದಿದೆ ಭರದ ಸಿದ್ಧತೆಸಮಜಾಯಿಷಿ ಏನೇ ಇದ್ದರೂ, ಅವರು ನಿನ್ನೆ ರಾತ್ರಿ ಮಾಡಿರುವ ಟ್ವೀಟ್​ನಿಂದ ಅವರು ಎಷ್ಟು ಆತಂಕಕ್ಕೆ ಒಳಗಾಗಿದ್ದಾರೆ ಎನ್ನುವುದು ತಿಳಿಯುತ್ತದೆ.
ನಾನು ಈಗಾಗಲೇ ಮಖ್ಯ ಕಾರ್ಯದರ್ಶಿಯವರ ಜೊತೆ ಮಾತಾಡಿದ್ದೀನಿ. ಎರಡು ದಿನಗಳಿಂದ ನಮ್ಮ ಗಡಿಗೆ ಬಂದು ಕಾಯುತ್ತಿದ್ದರು ಹಾಗಾಗಿ ಮಾನವೀಯತೆ ದೃಷ್ಟಿಯಿಂದ ಬಿಡಬೇಕಾಯಿತು ಎಂದು ಸಮಜಾಯಷಿ ಕೊಟ್ಟರು.ಹೊರ ರಾಜ್ಯದಿಂದ ಬಂದ ಎಲ್ಲರನ್ನೂ ಕ್ವಾರಂಟೈನ್ ಮಾಡುತ್ತೀವಿ ಹಾಗು ಎಲ್ಲರಿಗೂ ಪರೀಕ್ಷೆ ಯನ್ನು ಮಾಡುತ್ತೀವಿ. ಆಯಾ ಜಿಲ್ಲೆಯ ಯಾರು ಆತಂಕಕ್ಕೆ ಒಳಗಾಗಬೇಡಿ.
— Dr Sudhakar K (@mla_sudhakar)May 21, 2020

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:14 + six =
Remember me
