ಗ್ವಾಲಿಯರ್​​:ಕರೊನಾ ಹಿನ್ನೆಲೆಯಲ್ಲಿ ಮಾಸ್ಕ್​ ತೊಡುವುದು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ವೈರಸ್​ ಸೋಂಕು ಹರಡದಿರಲಿ ಎಂಬ ಕಾರಣಕ್ಕೆ. ಆದರೆ ಬಹುತೇಕ ಆಚರಣೆಗಳು ತಮ್ಮ ಮೂಲ ಉದ್ದೇಶವನ್ನೇ ಕಳೆದುಕೊಳ್ಳುವಂತೆ, ಮಾಸ್ಕ್​ ತೊಡುವುದು ಕೂಡ ಬಹಳ ಜನರಿಗೆ ಕೇವಲ ಒಂದು ನಿಯಮದಂತೆ ತೋರುತ್ತದೆ. ಹೀಗಾಗಿ, ಹಲವರು ಮಾಸ್ಕ್​ಅನ್ನು ಕತ್ತಿಗೆ ತೊಟ್ಟರೆ, ಕೆಲವರು ಜೋಪಾನವಾಗಿ ಜೇಬಿನಲ್ಲಿಟ್ಟುಕೊಂಡು ಓಡಾಡುವುದೂ ಕಂಡುಬರುತ್ತದೆ!
ಮಾಸ್ಕ್​ ತೊಡುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಸ್ವಚ್ಛವಾದ ಮಾಸ್ಕ್​ಅನ್ನು ತೊಡುವುದು. ಹೀಗಿರುವಾಗ ಒಬ್ಬರು ಬಳಸಿದ ಮಾಸ್ಕ್​ಅನ್ನು ಮತ್ತೊಬ್ಬರು ತೊಟ್ಟರೆ ಉಪಯೋಗಕ್ಕಿಂತ ಹಾನಿಯೇ ಹೆಚ್ಚು. ಆದರೆ, ಇಂಥದ್ದೊಂದು ಪ್ರಸಂಗ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಡೆದಿದೆ. ಕೇಂದ್ರ ನಾಗರೀಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯ ಅವರು ಕಾರ್ಯಕ್ರಮವೊಂದಕ್ಕೆ ಹೋದ ಸಂದರ್ಭದಲ್ಲಿ, ಮಾಸ್ಕ್​ ತೊಟ್ಟಿಲ್ಲದ ನಾಯಕರೊಬ್ಬರಿಗೆ ತಾವು ತೊಟ್ಟಿದ್ದ ಮಾಸ್ಕನ್ನೇ ತೆಗೆದು ತೊಡಿಸಿದ್ದಾರೆ!
ಇದನ್ನೂ ಓದಿ:ಪೆಗಾಸಸ್​ ಫೋನ್​ ಟ್ಯಾಪ್​ ಆರೋಪದ ತನಿಖೆ ನಡೆಸಲಿದೆ, ಸುಪ್ರೀಂ ಕೋರ್ಟ್​ ತಜ್ಞರ ಸಮಿತಿ
ಈ ಸಂದರ್ಭದ ವಿಡಿಯೋ ವೈರಲ್ ಆಗಿದ್ದು, ಈ ರೀತಿಯಾಗಿ ಬಳಸಿದ ಮಾಸ್ಕ್​ ತೊಡಿಸಿಕೊಂಡವರು ಗ್ವಾಲಿಯರ್​ನ ಮಾಜಿ ಸಂಸದ ಅರುಣ್​​ ಮಿಶ್ರ ಎಂದು ತಿಳಿದುಬಂದಿದೆ. ಡಬ್ಬಲ್​ ಮಾಸ್ಕ್ ​ಹಾಕಿಕೊಂಡ ಸಚಿವ ಸಿಂಧ್ಯಾರನ್ನು ಸಾರ್ವಜನಿಕ ಸಮಾರಂಭವೊಂದಕ್ಕೆ ಸ್ವಾಗತಿಸುತ್ತಾ ನಿಂತಿರುವ ಹಲವು ನಾಯಕರಲ್ಲಿ ಮಿಶ್ರ ಕೂಡ ಇದ್ದರು. ಅವರು ಮಾಸ್ಕ್​ ತೊಟ್ಟಿಲ್ಲದ್ದನ್ನು ನೋಡಿದ ಸಿಂಧ್ಯ, ದಿಢೀರನೇ ತಾವು ಎನ್​95 ಮಾಸ್ಕ್​​ ಮೇಲೆ ತೊಟ್ಟಿದ್ದ ಸರ್ಜಿಕಲ್​ ಮಾಸ್ಕ್​ಅನ್ನು ತೆಗೆದು  ತೊಡಿಸಿಬಿಟ್ಟಿದ್ದಾರೆ.
ಈ ಪ್ರಸಂಗವನ್ನು ನೋಡಿ, ವಿರೋಧ ಪಕ್ಷ ಸದಸ್ಯರು ಬಿಜೆಪಿ ಸಚಿವರ ಕಾಲೆಳೆದಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಾರ್ಯಕ್ರಮಗಳನ್ನು ಮಾಡುತ್ತೀರಿ, ಬಳಸಿದ ಮಾಸ್ಕನ್ನು ಮತ್ತೊಬ್ಬ ನಾಯಕರಿಗೆ ನೀಡುತ್ತೀರಲ್ಲಾ ಎಂದು ಉದ್ಗರಿಸಿದ್ದಾರೆ.(ಏಜೆನ್ಸೀಸ್)
ಹೆಂಡತಿಗೆ ಲಸಿಕೆ ನೀಡಿದ್ದಕ್ಕೆ ನರ್ಸ್ ಮುಖಕ್ಕೆ ಪಂಚ್​ ಮಾಡಿದ ಭೂಪ!
ಸಿಧು ‘ಸೂಪರ್​ ಸಿಎಂ’ ಆಗಲು ಪ್ರಯತ್ನಿಸಿದರೆ ಕಾಂಗ್ರೆಸ್​ಗೆ ಕುತ್ತು ಎಂದ ಕ್ಯಾಪ್ಟನ್!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 11 =
Remember me
