ನಾಗಾಲ್ಯಾಂಡ್:ಕೈಗೆ ಬೇಡಿ ತೊಡಿಸಿಕೊಂಡ ಕೈದಿಯೊಬ್ಬ, ಪಕ್ಕದಲ್ಲಿ ಕುಳಿತಿದ್ದ ಪೊಲೀಸ್ ಕಾನ್​​ಸ್ಟೇಬಲ್​ ಒಬ್ಬರ ಮೊಬೈಲ್ ವೀಕ್ಷಣೆ ಮಾಡುತ್ತಿರುವ ಫೋಟೋವೊಂದು ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೀಗ ಈ ಫೋಟೋವನ್ನು ನಾಗಾಲ್ಯಾಂಡ್​ನ ಬಿಜೆಪಿ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ತಮಾಷೆಯಾಗಿ ಕ್ಯಾಪ್ಶನ್ ಕೂಡ ನೀಡಿದ್ದಾರೆ.
ಇದನ್ನೂ ಓದಿ:ಬಂಗಾಳದ ಕಾರ್ಮಿಕನಿಗೆ ಕೇರಳದಲ್ಲಿ ಒಲಿಯಿತು ಅದೃಷ್ಟ; ಲಾಟರಿಯಲ್ಲಿ ಹಣ ಗೆಲ್ಲುತ್ತಿದ್ದಂತೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ!
Divided by law, united by Netflix…🤦🏻‍♂️pic.twitter.com/PDXw1H5OQV— Temjen Imna Along (@AlongImna)April 16, 2023
Divided by law, united by Netflix…🤦🏻‍♂️pic.twitter.com/PDXw1H5OQV
”ಇಬ್ಬರನ್ನು ಕಾನೂನಿನ ಮೂಲಕ ವಿಂಗಡಿಸಲಾಗಿದೆ – ನೆಟ್​ಫ್ಲಿಕ್ಸ್ ಮೂಲಕ ಒಂದುಗೂಡಿಸಲಾಗಿದೆ”(Divided by law, united by Netflix…) ಎಂದು ಟ್ವಿಟರ್​​ನಲ್ಲಿ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಬರೆದುಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಕಮೆಂಟ್​ಗಳು ಬಂದಿದ್ದವು. ಇದೀಗ ಸಚಿವ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಂತೆ ಅನೇಕರು ತಮಾಷೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ:ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆದಾಯ 123 ಕೋಟಿ ರೂ.; ಸತತ 12ನೇ ವರ್ಷವೂ ನಂ.1 ಪಟ್ಟ ಸಾಧ್ಯತೆ
ಪೊಂಜಿತ್ ದೋವಾರಾ ಎಂಬ ಪೊಲೀಸ್ ಅಧಿಕಾರಿಯೊಬ್ಬರು ಸಚಿವರ ಟ್ವೀಟ್​ಗೆ ಪ್ರತಿಕ್ರಿಯಿಸಿ, ಕಾನೂನಿನಿಂದ ಬೇರ್ಪಟ್ಟ ಇವರು, ಐಪಿಎಲ್​ನಿಂದ ಒಂದುಗೂಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಹರಿದಾಡುತ್ತಿದೆ. ಈ ಫೋಟೋವನ್ನು ಅನೇಕ ಟ್ರೋಲ್​ ಪೇಜ್​ಗಳು ಬಳಸಿಕೊಳ್ಳುತ್ತಿವೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 10 =
Remember me
