ನವದೆಹಲಿ/ಕೆವಾಡಿಯಾ (ಗುಜರಾತ್​):ಭಾರತ ದಲ್ಲಿ 47 ಲಕ್ಷ ಜನರು ಕೋವಿಡ್​ ಸೋಂಕಿನಿಂದ ಅಸುನೀಗಿದ್ದಾರೆ ಎಂಬ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್​ಒ) ವರದಿಯನ್ನು ಆರೋಗ್ಯ ಸಚಿವರ ಸಭೆ ತೀಕ್ಷ್ಣವಾಗಿ ಟೀಕಿಸಿದೆ. ಇಂಥ ನಿರಾಧಾರ ವರದಿಗಳ ಮೂಲಕ ಜಾಗತಿಕವಾಗಿ ಭಾರತದ ನತೆಗೆ ಕಳಂಕ ತರುವ ಪ್ರಯತ್ನ ಎನ್ನುವ ರ್ನಿಣಯವನ್ನು ಒಮ್ಮತದಿಂದ ಕೈಗೊಂಡಿದೆ. ಗುಜರಾತ್​ನ ಕೆವಾಡಿಯಾದಲ್ಲಿ ಶನಿವಾರ ಸಮಾರೋಪಗೊಂಡ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂಡಳಿಯ 14ನೇ ಸಮ್ಮೇಳನ (ಸಿಸಿಎಚ್​ಎ್​ಡಬ್ಲು) ಡಬ್ಲುಎಚ್​ಒ ವರದಿಯನ್ನು ಸಾರಾ ಸಗಟಾಗಿ ಖಂಡಿಸಿದೆ. ಜಾಗತಿಕ ಆರೋಗ್ಯ ಸಂಸ್ಥೆ ಅನುರಿಸಿರುವ ಕೋವಿಡ್​ ಸಾವಿನ ಅಂಕಿಅಂಶದ ವಿಧಾನವು ದೋಷಪೂರಿತ ಎಂದು ಹೇಳಿದೆ.
ಕೋವಿಡ್​ ಸಾಂಕ್ರಾಮಿಕವನ್ನು ಭಾರತ ಹೆಚ್ಚು ದಕ್ಷತೆಯಿಂದ ನಿರ್ವಹಿಸಿದೆ. ಪರೀಕ್ಷೆ, ಸೋಂಕಿತರು, ಸಾವಿನ ಅಂಕಿಅಂಶವನ್ನು ಸಮಗ್ರವಾಗಿ ದಾಖಲಿಸುವ ವ್ಯವಸ್ಥೆಯನ್ನು ಆರಂಭದಿಂದಲೇ ಅನುಸರಿಸಲಾಗಿದೆ. ಸೋಂಕಿತರ ಮರಣವನ್ನು ಪಾರದರ್ಶಕವಾಗಿ ಮತ್ತು ಕಾನೂನಾತ್ಮಕವಾಗಿ ದಾಖಲು ಮಾಡುವ ಕೆಲಸ ಆಗಿದೆ ಎಂದು ಸಭೆ ಸಮರ್ಥಿಸಿಕೊಂಡಿದೆ. ಕೇಂದ್ರ ಆರೋಗ್ಯ ಸಚಿವ ಮನಸುಖ್​ ಮಾಂಡವೀಯ ಅಧ್ಯಕ್ಷತೆಯಲ್ಲಿ ನಡೆದ ಮೂರು ದಿನಗಳ ಈ ಸಮ್ಮೇಳನದಲ್ಲಿ ಎಲ್ಲ ರಾಜ್ಯಗಳ ಆರೋಗ್ಯ ಸಚಿವರು ಭಾಗವಹಿಸಿದ್ದರು. ಡಬ್ಲುಎಚ್​ಒ ವರದಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಭಾರತದ ಕೋವಿಡ್​ ಕಾರ್ಯ ತಂಡ (ಸಿಡಬ್ಲುಜಿ) ಕೂಡ ನಿರಾಕರಿಸಿದೆ. ಸಭೆಯಲ್ಲಿ ವ್ಯಕ್ತವಾದ ಈ ಅಸಮಾಧಾನವನ್ನು ಕೇಂದ್ರ ಸರ್ಕಾರ ವಿಶ್ವ ಆರೋಗ್ಯ ಅಧಿವೇಶನ ಇನ್ನಿತರ ಜಾಗತಿಕ ಮಟ್ಟದ ವೇದಿಕೆಗಳಲ್ಲಿ ವ್ಯಕ್ತಪಡಿಸುವ ಸಾಧ್ಯತೆ ಇದೆ.
3,800 ಹೊಸ ಕೇಸ್​ಭಾರತದಲ್ಲಿ ಶನಿವಾರ ಬೆಳಗ್ಗೆಗೆ ಕೊನೆಗೊಂಡಂತೆ 3,805 ಹೊಸ ಪ್ರಕರಣ ವ್ಯಕ್ತವಾಗಿದ್ದು, ಒಟ್ಟಾರೆ ಕೇಸ್​ಗಳ ಸಂಖ್ಯೆ 4,30,98,743ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 20,303ಕ್ಕೆ ಹೆಚ್ಚಿದೆ. ಒಟ್ಟು ಸೋಂಕಿನ ಪ್ರಮಾಣದಲ್ಲಿ ಸಕ್ರಿಯ ಕೇಸ್​ಗಳ ಪ್ರಮಾಣ ಶೇ. 0.05ಕ್ಕೆ ಏರಿದೆ. ಶೇ. 98.74 ಸೋಂಕಿತರು ಚೇತರಿಕೆ ಕಂಡಿದ್ದಾರೆ. 24 ತಾಸಿನಲ್ಲಿ 22 ಮಂದಿ ಮರಣಿಸಿದ್ದು, ಕೇರಳದಲ್ಲೇ 20 ಜನರು ಅಸುನೀಗಿದ್ದಾರೆ. ದೇಶದಲ್ಲಿ ಒಟ್ಟಾರೆ ಸಾವನ್ನಪ್ಪಿದವರ ಸಂಖ್ಯೆ 5,24,024ಕ್ಕೆ ಏರಿದೆ. ದೈನಿಕ ಪಾಸಿಟಿವಿಟಿ ದರ ಶೇ. 0.78ಕ್ಕೆ ಮುಟ್ಟಿದೆ. ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಮಾನದಂಡ ಪ್ರಶ್ನಿಸಿದ ಸುಧಾಕರ್​ಭಾರತದಲ್ಲಿ 47 ಲಕ್ಷ ಜನರು ಕೋವಿಡ್​ ಸೋಂಕಿನಿಂದ ಮೃತಪಟ್ಟಿದ್ದಾರೆ ಎನ್ನುವುದಕ್ಕೆ ಡಬ್ಲುಎಚ್​ಒ ಅನುಸರಿಸಿದ ಮಾನದಂಡ ಏನು ಎಂದು ಕರ್ನಾಟಕದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್​ ಸಭೆಯಲ್ಲಿ ಪ್ರಶ್ನಿಸಿದರು. ಭಾರತದ ಗೌರವಕ್ಕೆ ಕುಂದುಂಟು ಮಾಡುವ ಪ್ರಯತ್ನವನ್ನು ಡಬ್ಲುಎಚ್​ಒ ಮಾಡಿರುವುದು ಅದರ ನತೆಗೆ ತಕ್ಕುದಲ್ಲದ ನಡೆ ಎಂದು ಟೀಕಿಸಿದರು. ಡಬ್ಲುಎಚ್​ಒ ಅಂಕಿಅಂಶಗಳು ಅತಾರ್ಕಿಕ ಇದನ್ನು ಸಭಾಸದರು ಒಕ್ಕೊರಲಿನಿಂದ ಖಂಡಿಸಬೇಕು ಮತ್ತು ಈ ವರದಿಯ ವಿರುದ್ಧ ರ್ನಿಣಯ ಕೈಗೊಳ್ಳಬೇಕು. ಭಾರತದ ಅಸಮಾಧಾನವನ್ನು ಡಬ್ಲುಎಚ್​ಒಗೆ ತೀಕ್ಷ$$$$್ಣ ಪದಗಳಲ್ಲಿ ಕೇಂದ್ರ ಸಚಿವರು ತಿಳಿಸಬೇಕು ಎಂದು ಒತ್ತಾಯಿಸಿದರು. ಡಬ್ಲುಎಚ್​ಒ ಅಂಕಿಅಂಶವು ವಸ್ತುನಿಷ್ಠವಾಗಿಲ್ಲ. ಲೆಕ್ಕಾಚಾರ ತಪ್ಪಿದೆ. ಈ ವರದಿಯನ್ನು ನಂಬಿಕೊಂಡು ನಾವು ಅನುಸರಿಸುತ್ತಿರುವ ವಿಧಾನವನ್ನು ಶಂಕಿಸಬೇಕಿಲ್ಲ ಎಂದು ಪಂಜಾಬ್​ನ ಆರೋಗ್ಯ ಸಚಿವ ವಿಜಯ್​ ಸಿಂಗ್ಲಾ ಆರೋಪಿಸಿದರು. ಕರೊನಾ ಸಾಂಕ್ರಾಮಿಕ ತಡೆಯುವಲ್ಲಿ ಭಾರತ ಕಂಡಿರುವ ಯಶಸ್ಸನ್ನು ಮಣ್ಣುಪಾಲು ಮಾಡುವ ಸಂಚು ಡಬ್ಲುಎಚ್​ಒ ವರದಿಯ ಹಿಂದೆ ಇದ್ದಂತೆ ಇದೆ ಅವರು ಅನುಸರಿಸಿದ ವಿಧಾನವೇ ಸಂಶಯಾಸ್ಪದವಾಗಿದೆ ಎಂದು ಮಧ್ಯಪ್ರದೇಶದ ವೈದ್ಯಕಿಯ ಶಿಕ್ಷಣ ಸಚಿವ ವಿಶ್ವಾಸ್​ ಸಾರಂಗ್​ ದೂರಿದರು. ಇದನ್ನು ಸಿಕ್ಕಿಂನ ಸಚಿವ ಎಂ.ಕೆ.ಶರ್ಮಾ, ಬಿಹಾರದ ಮಂಗಲ ಪಾಂಡೆ ಅನುಮೋದಿಸಿದರು.
ಒಮಿಕ್ರಾನ್​ ತಳಿ ಸೌಮ್ಯವಲ್ಲಕರೊನಾ ಸಾಂಕ್ರಾಮಿಕದ ಡೆಲ್ಟಾ, ಆಲ್ಫಾ ಇನ್ನಿತರ ತಳಿಗಳಂತೆ ಒಮಿಕ್ರಾನ್​ ಪ್ರಭೇದ ಕೂಡ ಮಾರಣಾಂತಿಕವಾಗಬಹುದು ಎಂದು ಅಧ್ಯಯನ ಹೇಳಿದೆ. ಡೆಲ್ಟಾ, ಆಲ್ಫಾ ತಳಿಗಳಿಂದ ಲಾಂತರ ಜನರು ಸಾವನ್ನಪ್ಪಿದರು. ಆದರೆ ಒಮಿಕ್ರಾನ್​ ಇಷ್ಟೊಂದು ಮಾರಣಾಂತಿಕವಲ್ಲ. ಹೀಗಾಗಿ ಇದು ಸೌಮ್ಯವೆಂದು ಅನೇಕರು ಹೇಳಿದ್ದಾರೆ. ಆದರೆ, ಯುರೋಪ್​ನ ಅನೇಕ ದೇಶಗಳು, ಏಷ್ಯಾದ ಹಲವು ಭಾಗಗಳಲ್ಲಿ ಒಮಿಕ್ರಾನ್​ ವ್ಯಾಪಕವಾಗಿದೆ. ಸಾವಿನ ಸಂಖ್ಯೆ ಮೊದಲಿನ ಅಲೆಗಿಂತ ಕಡಿಮೆ ಇರಬಹುದು. ಆದರೆ, ಪ್ರಸರಣ ಹೆಚ್ಚಾಗಿಯೇ ಇದೆ ಎಂದು ಅಮೆರಿಕದ ಮೆಸಾಚುಸೆಟ್ಸ್​ ಜನರಲ್​ ಆಸ್ಪತ್ರೆ ಮತ್ತು ಹಾರ್ವಾರ್ಡ್​ ಮೆಡಿಕಲ್​ ಸ್ಕೂಲ್​ನ ಅಧ್ಯಯನಕಾರರು ಹೇಳಿದ್ದಾರೆ. ಡೆಲ್ಟಾ ಸೋಂಕು ರೋಗಿಯ ಶ್ವಾಸಕೋಶಕ್ಕೆ ಹಾನಿ ಮಾಡಿತು. ಆದರೆ, ಒಮಿಕ್ರಾನ್​ ತಳಿಯಿಂದ ಶೀತದಂತಹ ಸಾಮಾನ್ಯ ಗುಣಲಕ್ಷಣವಷ್ಟೆ ವ್ಯಕ್ತವಾಗಿದೆ ಎಂದು ಈ ಹಿಂದಿನ ಕೆಲವು ಸಂಶೋಧನೆಗಳು ಹೇಳಿವೆ. ಆದರೆ, ನಮ್ಮ ಸಂಶೋಧನೆಯಲ್ಲಿ ಈ ಮೊದಲ ತಳಿಗಳಷ್ಟೆ ಒಮಿಕ್ರಾನ್​ ಪ್ರಭೇದ ಕೂಡ ಬಲಶಾಲಿಯಾಗಿದೆ ಎಂದ ಅಧ್ಯಯನಕಾರರು, ಈ ಸಂಶೋಧನೆಯ ಅಂತಿಮ ವರದಿ ಇನ್ನೂ ಸಿದ್ಧಗೊಳ್ಳಬೇಕಿದೆ ಎಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − three =
Remember me
