ನವದೆಹಲಿ:ದೇಶದಲ್ಲಿ ಹೊಸ ಶಿಕ್ಷಣ ನೀತಿಯನ್ನು (ಎನ್​ಇಪಿ) ತರಲಾಗಿದೆ. ಈ ನೀತಿಯ ಅನುಸಾರ ಶಾಲೆಗೆ ಮಕ್ಕಳು ತೆಗೆದುಕೊಂಡು ಹೋಗುವ ಬ್ಯಾಗಿನ ತೂಕವೂ ಇಳಿಯಲಿದೆ. ಅದರ ಜತೆ ಹೋಂ ವರ್ಕ್​ನಲ್ಲೂ ಸಾಕಷ್ಟು ಸಡಿಲಿಕೆ ಮಾಡಲಾಗಿದೆ. ಈ ಕುರಿತಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಇದನ್ನೂ ಓದಿ:ಹನುಮ ದೇವಸ್ಥಾನಕ್ಕೆ 50 ಲಕ್ಷ ಮೌಲ್ಯದ ಜಾಗ ದಾನ ಮಾಡಿದ ಮುಸ್ಲಿಂ ವ್ಯಕ್ತಿ! ಭಕ್ತರ ಕಷ್ಟ ನೋಡಲಾಗದೆ ದಾನ ಮಾಡಿದರಂತೆ
1ರಿಂದ 10ನೇ ತರಗತಿ ವಿದ್ಯಾರ್ಥಿಗಳ ಶಾಲಾ ಚೀಲಗಳ ತೂಕವನ್ನು ವಿದ್ಯಾರ್ಥಿಗಳ ತೂಕದ ಶೇಕಡಾ 10 ಕ್ಕೆ ನಿಗದಿಪಡಿಸಲಾಗಿದೆ. ಪ್ರತಿ ಶಾಲೆಯಲ್ಲಿ ಬ್ಯಾಗ್​ ತೂಕ ಮಾಡಲೆಂದೇ ಡಿಜಿಟಲ್​ ತಕ್ಕಡಿ ಇಡಲಾಗುವುದು. ಹಾಗೆಯೇ 2 ತರಗತಿವರೆಗಿನ ಮಕ್ಕಳಿಗೆ ಹೋಂ ವರ್ಕ್​ ಕೊಡುವಂತಿಲ್ಲ. ಆ ಮಕ್ಕಳು ಶಾಲೆಯಲ್ಲಿ ಮಾತ್ರ ಕಲಿಯಲಿದ್ದಾರೆ ಎಂದು ತಿಳಿಸಲಾಗಿದೆ.
ಶಾಲಾ ಆವರಣದಲ್ಲಿ ಲಾಕರ್​ಗಳು, ಡಿಜಿಟಲ್​ ತಕ್ಕಡಿ, ಕುಡಿಯುವ ನೀರನ್ನು ಇಡುವುದು ಅತ್ಯಗತ್ಯ. ಟ್ರಾಲಿ ಬ್ಯಾಗ್​ ಬಳಕೆಗೆ ನಿಷೇಧ ಹೇರಲಾಗಿದೆ. ಎರಡು ಬಗಲಿಗೆ ಹಾಕುವಂತ ಬ್ಯಾಗ್​ಗಳನ್ನು ಮಾತ್ರವೇ ಅವಕಾಶ. ಟ್ರಾಲಿ ಬ್ಯಾಗ್​ಗಳನ್ನು ಮೆಟ್ಟಿಲಿನಲ್ಲಿ ಎತ್ತಿಕೊಂಡು ಹೋಗುವಾಗ ವಿದ್ಯಾರ್ಥಿಗಳಿಗೆ ಹಾನಿ ಆಗಬಹುದು ಎಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಂತರರಾಷ್ಟ್ರೀಯ ಸಂಸ್ಥೆಗಳ ಶಿಫಾರಸುಗಳನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ:ಸಿಸಿಐಎಂ ಕ್ರಮ ಅವೈಜ್ಞಾನಿಕ ; ಡಿಸಿಗೆ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳಿಂದ ದೂರು
ಇದರ ಜತೆಗೆ ಮಕ್ಕಳಿಗೆ ನೀಡಲಾಗುವ ಪುಸ್ತಕದ ತೂಕವನ್ನು ಪರಿಗಣಿಸಬೇಕಿದೆ. ಪ್ರತಿ ಪುಸ್ತಕದ ತೂಕವನ್ನು ಪ್ರತಿ ಚದರ ಮೀಟರ್‌ (ಜಿಎಸ್‌ಎಂ) ಲೆಕ್ಕದಲ್ಲಿ ಪ್ರಕಾಶಕರು ಪುಸ್ತಕದಲ್ಲಿ ಮುದ್ರಿಸಬೇಕು ಎಂದು ಹೇಳಲಾಗಿದೆ. (ಏಜೆನ್ಸೀಸ್​)
The 'School Bag Policy 2020' formulated by an expert committee of@ncert,@KVS_HQ,@CommissionerNVS&@cbseindia29has been issued by the@EduMinOfIndia.#SchoolBagPolicypic.twitter.com/Gn8pbpNIbL
— Ministry of Education (@EduMinOfIndia)December 8, 2020

ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

ನಟಿ ದಿವ್ಯಾ ಸಾವಿಗೂ ಮುನ್ನ ಬರೆದಿಟ್ಟಿದ್ದ ಪತ್ರದಿಂದ ಬಯಲಾಯ್ತು ಪತಿಯ ನಿಜ ಬಣ್ಣ! ಅಪ್ತ ಸ್ನೇಹಿತೆ ಬಿಚ್ಚಿಟ್ಟ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − eight =
Remember me
