ನವದೆಹಲಿ:ದೇಶದಲ್ಲಿನ ಕೋಟ್ಯಂತರ ಚಿಲ್ಲರೆ ಹಾಗೂ ಸಗಟು ವ್ಯಾಪಾರಸ್ಥರಿಗೆ ಇದು ಸಂತೋಷದ ಸುದ್ದಿ. ಏಕೆಂದರೆ ಕೇಂದ್ರ ಸರ್ಕಾರವು ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕಾ (ಎಂಎಸ್​ಎಂಇ) ಕೇತ್ರಕ್ಕೆ ಸಂಬಂಧಿಸಿದ ಮಾರ್ಗಸೂಚಿಯನ್ನು ಪರಿಷ್ಕರಿಸಿದೆ. ಇದರಿಂದಾಗಿ ಬಹುನಿರೀಕ್ಷಿತ ಬದಲಾವಣೆಯೊಂದು ಆಗಿದೆ.
ಎಂಎಸ್​ಎಂಇ ಸಚಿವ ನಿತಿನ್​ ಗಡ್ಕರಿ ಅವರು ಪರಿಷ್ಕೃತ ಮಾರ್ಗಸೂಚಿ ಕುರಿತು ಇಂದು ಮಾಹಿತಿ ನೀಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾವು ಎಂಎಸ್​ಎಂಇ ಕ್ಷೇತ್ರವನ್ನು ಸಬಲೀಕರಣಗೊಳಿಸಲು ಮುಂದಾಗಿದ್ದೇವೆ. ಈ ಹಿನ್ನೆಲೆಯಲ್ಲಿ ಚಿಲ್ಲರೆ ಹಾಗೂ ಸಗಟು ವ್ಯಾಪಾರಸ್ಥರನ್ನು ಎಂಎಸ್​ಎಂಇ ವ್ಯಾಪ್ತಿಗೆ ತರುತ್ತಿದ್ದೇವೆ. ಇದರಿಂದ ದೇಶದ 2.5 ಕೋಟಿ ಚಿಲ್ಲರೆ ಹಾಗೂ ಸಗಟು ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ರಿಟೇಲ್ ಹಾಗೂ ಹೋಲ್​ಸೇಲ್​ ವಹಿವಾಟು ಎಂಎಸ್​ಎಂಇ ವ್ಯಾಪ್ತಿಯಿಂದ ಬಿಟ್ಟುಹೋಗಿತ್ತು. ಈಗ ಮಾರ್ಗಸೂಚಿ ಪರಿಷ್ಕರಿಸಿ ಅದನ್ನು ಎಂಎಸ್​ಎಂಇ ವ್ಯಾಪ್ತಿಗೆ ಸೇರಿಸಲಾಗಿದೆ. ಪರಿಣಾಮವಾಗಿ ಇನ್ನು ಚಿಲ್ಲರೆ ಹಾಗೂ ಸಗಟು ವ್ಯಾಪಾರಸ್ಥರು ಉದ್ಯಮ್ (https://udyamregistration.gov.in/) ಪೋರ್ಟಲ್​ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದೂ ಹೇಳಿದರು.


ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × two =
Remember me
