ನವದೆಹಲಿ:ಮಲಯಾಳಿ ಚಿತ್ರ ಮಿನ್ನಲ್​ ಮುರಳಿ ಚಿತ್ರೀಕರಣದ ವೇಳೆ ಸೆಟ್​ ಧ್ವಂಸಗೊಳಿಸಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಎಚ್ಚರಿಸಿದ್ದಾರೆ.
ಕೊಚ್ಚಿಯ ಹೊರವಲಯದಲ್ಲಿರುವ ಪೆರಿಯಾರ್ ನದಿಯ ದಡದಲ್ಲಿ ಚರ್ಚ್ ಅನ್ನು ಹೋಲುವ ಸೆಟ್​ ನಿರ್ಮಿಸಲಾಗಿತ್ತು. ಚಿತ್ರ ಸೆಟ್​ ಹಾಕಿದ್ದ ಜಾಗದಲ್ಲಿ ಚಿಕ್ಕ ದೇವಾಲಯವಿದ್ದು, ಅಲ್ಲಿ ಪ್ರತಿವರ್ಷ ಮಹಾಶಿವರಾತ್ರಿ ಆಚರಿಸಲಾಗುತ್ತದೆ. ನದಿಯ ಮತ್ತೊಂದು ಕಡೆ ಆದಿ ಶಂಕರಾಚಾರ್ಯ ಮಠವಿದೆ. ಸ್ಥಳೀಯ ದೇವಾಲಯ ಮಂಡಲಿ, ಪಂಚಾಯತ್​ ಮತ್ತು ನೀರಾವರಿ ಇಲಾಖೆಯಿಂದ ಅನುಮತಿ ಪಡೆದೇ ಸೆಟ್​ ನಿರ್ಮಿಸಲಾಗಿತ್ತು.
ದೇವಾಲಯದ ಬಳಿ ಚರ್ಚ್​ ನಿರ್ಮಿಸಿದ್ದ ಹಿನ್ನೆಲೆಯಲ್ಲಿ ನಿರ್ಮಿಸಲಾಗಿರುವುದರಿಂದ ಇದು ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತದೆ ಎಂದು ಹೇಳುವ ಮೂಲಕ ಚಿತ್ರೀಕರಣ ಸೆಟ್​ ಧ್ವಂಸಗೊಳಿಸಲಾಗಿತ್ತು.
ಇದನ್ನೂ ಓದಿ:5 ಸಾವಿರಕ್ಕೆ ಕಂದನ ಮಾರಿದ ತಾಯಿ! ಕೊಂಡರು ಆಸ್ಪತ್ರೆ ಸಿಬ್ಬಂದಿ! ಮುಂದೇನಾಯ್ತು?
ಸೆಟ್​ ಧ್ವಂಸಗೊಳಿಸಿರುವುದಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ಭಜರಂಗದಳದ” ಜಿಲ್ಲಾ ಮುಖಂಡರನ್ನು ಎಎಚ್​ಪಿ ಗುಂಪಿನ ನಾಯಕ ಹರಿ ಪಾಲೋಡೆ ಅವರು ಫೇಸ್​ಬುಕ್​ನಲ್ಲಿ ಅಭಿನಂದಿಸಿದ್ದಾರೆ, ಜತೆಗೆ ವಿಧ್ವಂಸಕ ಕೃತ್ಯದ ಫೋಟೋಗಳನ್ನು ಅವರು ತಮ್ಮ ಟೈಮ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಘಟನೆಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್​, ಈ ರೀತಿಯ ಕೃತ್ಯ ನಮ್ಮ ರಾಜ್ಯದಲ್ಲಿ ನಡೆಯಲೇಬಾರದು. ಇದನ್ನು ನಾನು ಸಹಿಸುವುದೇ ಇಲ್ಲ ಎಂದಿದ್ದಾರೆ. ದೇಶದ ಇತರೆಡೆಗಳಲ್ಲಿಯೂ ಇದೇ ರೀತಿ ಚಲನಚಿತ್ರ ಸೆಟ್‌ಗಳು ಮತ್ತು ಚಲನಚಿತ್ರಗಳ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡ ಘಟನೆಗಳನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು, ಇದನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ಕೋಳಿ ಫಾರ್ಮ್​ನಲ್ಲಿ ನಾಯಿಗಾಯ್ತು ಕ್ವಾರಂಟೈನ್​- ಎ.ಸಿ ಬದಲು ತಣ್ಣೀರು!
ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಮಾರ್ಚ್‌ನಲ್ಲಿ ಮೂವಿ ಸೆಟ್ ನಿರ್ಮಿಸಲಾಗಿತ್ತು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಶೂಟಿಂಗ್ ನಿಲ್ಲಿಸಲಾಗಿತ್ತು. ಇದನ್ನು ಗಮನಿಸಿದ ವಿಜಯನ್, ಅಲ್ಲಿ ಚಿತ್ರದ ಸೆಟ್ ನಿರ್ಮಾಣದ ಕಾರಣದಿಂದಾಗಿ “ಅದ್ಯಾವ ರೀತಿಯಲ್ಲಿ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ವಿಷಯವಿದೆ ಎಂದು ಕಿಡಿ ಕಾರಿದರು. ನಿರ್ದಿಷ್ಟ ವರ್ಗದ ಕೋಮುವಾದಿ ಗುಂಪು ಈ ಕೃತ್ಯದಲ್ಲಿ ಭಾಗಿಯಾಗಿದೆ. ವಿಧ್ವಂಸಕ ಕೃತ್ಯಗಳಲ್ಲಿ ಪಾಲ್ಗೊಳ್ಳುವುದೇ ಇಂಥವರ ಕೆಲಸವಾಗಿದೆ. ಇದನ್ನು ನಾವು ಸಹಿಸುವುದಿಲ್ಲ ಎಂದಿದ್ದಾರೆ.
ಬಾಸಿಲ್​ ಜೋಸೆಫ್​ ಅವರ ನಿರ್ದೇಶನದ ಈ ಚಿತ್ರದಲ್ಲಿ ಟೊವಿನಾ ಥಾಮಸ್​ ಮತ್ತು ಫೆಮಿನಾ ನಾಯಕ-ನಾಯಕಿಯರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ ಎಂದು ವರದಿಗಳು ಹೇಳಿವೆ.
ಜಯಲಲಿತಾ ಸಂಪೂರ್ಣ ಆಸ್ತಿ ಯಾರಿಗೆ ಸೇರಿದ್ದು? ಹೈಕೋರ್ಟ್​ ನೀಡಿತು ಮಹತ್ವದ ತೀರ್ಪು

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:3 × three =
Remember me
