ಆಂಧ್ರಪ್ರದೇಶ:ತನ್ನ ಶಿಕ್ಷಣವನ್ನು ಮುಂದುವರಿಸಲು ಬಯಸಿದ ಅಪ್ರಾಪ್ತ ವಯಸ್ಕಳೊಬ್ಬಳು ಮಹಿಳಾ ಪೊಲೀಸ್ ಸಹಾಯವಾಣಿ ದಿಶಾಗೆ ಕರೆ ಮಾಡುವ ಮೂಲಕ ತನ್ನ ಸ್ವಂತ ಬಾಲ್ಯ ವಿವಾಹವನ್ನು ರದ್ದುಪಡಿಸುವಲ್ಲಿ ಯಶಸ್ವಿಯಾಗಿದ್ದಾಳೆ.
ಇದನ್ನೂ ಓದಿ:OctoberBaby ಎಂದು ಬರೆದುಕೊಂಡ ಸ್ವರಾ ಭಾಸ್ಕರ್; ತಾಯಿಯಾಗ್ತಿದ್ದಾರೆ ಬಾಲಿವುಡ್ ನಟಿ
ಘಟನೆಯು ಏಲೂರು ಜಿಲ್ಲೆಯ ವೆಂಕಟಾಪುರಂ ಗ್ರಾಮದಲ್ಲಿ ನಡೆದಿದ್ದು, ಜೂನ್ 8ಕ್ಕೆ ಅಪ್ರಾಪ್ತ ವಯಸ್ಕಳ ಮದುವೆಯನ್ನು ನಿಶ್ಚಯಿಸಲಾಗಿತ್ತು. ಆದರೆ ಮದುವೆ ಇಷ್ಟವಿಲ್ಲದ ಕಾರಣ ಆಕೆಯು ಮಹಿಳಾ ಪೊಲೀಸ್ ಸಹಾಯವಾಣಿ ದಿಶಾಗೆ ಕರೆ ಮಾಹಿತಿ ತಿಳಿಸಿದ್ದಾಳೆ.
ತಕ್ಷಣವೇ ಪೊಲೀಸರು ಆಕೆಯ ಮನೆಗೆ ಭೇಟಿ ನೀಡಿದ್ದು, ತನ್ನ ಇಚ್ಛೆಗೆ ವಿರುದ್ಧವಾಗಿ ಪೋಷಕರು ತನ್ನ ಮದುವೆಯನ್ನು ನಿಶ್ಚಯಿಸಿದ್ದಾರೆ ಎಂದು ಆಕೆ ದೂರಿದ್ದಾಳೆ. ತಾನು ಶಾಲೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದು, ಕನಿಷ್ಠ ಪದವಿಯವರೆಗೆ ಓದಲು ಬಯಸುತ್ತೇನೆ. ಅಲ್ಲದೆ ತಾನು ಅಪ್ರಾಪ್ತ ವಯಸ್ಕಳು ಎಂದು ಪೊಲೀಸರಿಗೆ ತಿಳಿಸಿದ್ದಾಳೆ.
ಶಿಕ್ಷಣಕ್ಕೆ ಅಡ್ಡಿಪಡಿಸುವುದು ಒಳ್ಳೆಯದಲ್ಲ ಎಂದು ಆಕೆಯ ಪೋಷಕರಿಗೆ ಪೊಲೀಸರು ಮನವರಿಕೆ ಮಾಡಿಕೊಟ್ಟಿದ್ದಾರೆ. ಮಗಳ ಶಿಕ್ಷಣದ ಉತ್ಸಾಹ ಕಂಡ ಪಾಲಕರು ಬಾಲಕಿಯ ಮದುವೆಯನ್ನು ರದ್ದುಗೊಳಿಸಿದ್ದಾರೆ.(ಏಜೆನ್ಸೀಸ್​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
